Advertisement

Women’s ಹಾಸ್ಟೆಲ್‌ಗೆ ಅನಧಿಕೃತ ಪ್ರವೇಶ: ಅಚಿಂತ ಶಿಬಿರದಿಂದ ಹೊರಕ್ಕೆ!

11:42 PM Mar 16, 2024 | Team Udayavani |

ಹೊಸದಿಲ್ಲಿ: ಪಟಿಯಾಲದಲ್ಲಿರುವ ಎನ್‌ಐಎಸ್‌ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ಗಾಗಿ ನಡೆಯುತ್ತಿರುವ ಪೂರ್ವಸಿದ್ಧತಾ ಶಿಬಿರದ ವೇಳೆ ವನಿತೆಯರ ಹಾಸ್ಟೆಲ್‌ಗೆ ಅನಧಿಕೃತವಾಗಿ ಪ್ರವೇಶಿಸುವಾಗ ಸಿಕ್ಕಿ ಬಿದ್ದ ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ವೇಟ್‌ಲಿಫ್ಟರ್‌ ಅಚಿಂತ ಶೆಯುಲಿ ಅವರನ್ನು ಶಿಬಿರದಿಂದ ಹೊರಹಾಕಲಾಗಿದೆ.

Advertisement

ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಪುರುಷರ 73 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸುತ್ತಿರುವ 22ರ ಹರೆಯದ ಶೆಯುಲಿ ಭದ್ರತಾ ಸಿಬಂದಿಗೆ ಸಿಕ್ಕಿಬಿದ್ದಿದ್ದರು. ಅವರು ಹಾಸ್ಟೆಲ್‌ಗೆ ಪ್ರವೇಶಿಸುವ ವೀಡಿಯೋವನ್ನು ದಾಖಲಿಸಿದ್ದಾರೆ.

ನಿಸ್ಸಂಶಯವಾಗಿ ಇಂತಸ ಅಶಿಸ್ತನ್ನು ಸಹಿಸಲಾಗುವುದಿಲ್ಲ. ಅಚಿಂತ ಅವರನ್ನು ತತ್‌ಕ್ಷಣವೇ ಶಿಬಿರವನ್ನು ತೊರೆಯುವಂತೆ ಕೇಳಿಕೊಳ್ಳಲಾಯಿತು ಎಂದು ಭಾರತೀಯ ವೇಟ್‌ಲಿಫ್ಟಿಂಗ್‌ ಫೆಡರೇಶನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2022ರ ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕೂಟ ದಾಖಲೆಯೊಂದಿಗೆ ಚಿನ್ನ ಜಯಿಸಿದ್ದ ಶೆಯುಲಿ ಶುಕ್ರವಾರ ಶಿಬಿರವ್ನು ತೊರೆದರು. ಪಟಿಯಾಲದಲ್ಲಿರುವ ಎನ್‌ಐಎಸ್‌ನಲ್ಲಿ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಪ್ರತ್ಯೇಕ ಹಾಸ್ಟೆಲ್‌ ಸೌಲಭ್ಯ ಹೊಂದಿದೆ. ಪ್ರಸ್ತುತ ಮಹಿಳಾ ಬಾಕ್ಸರ್‌ಗಳು, ಕ್ರೀಡಾಪಟುಗಳು ಮತ್ತು ಕುಸ್ತಿಪಟುಗಳು ಇಲ್ಲಿ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next