Advertisement

ಒಡಿಶಾ : ಇಪಿಎಫ್ ಹಣ ವಾಪಸ್‌ ಪಡೆಯಲಾಗದ್ದಕ್ಕೆ ಆತ್ಮಹತ್ಯೆ ಬೆದರಿಕೆ

05:05 PM Oct 05, 2018 | udayavani editorial |

ಮಯೂರ್‌ಭಂಜ್‌, ಒಡಿಶಾ: ಮಯೂರ್‌ಭಂಜ್‌ ಜಿಲ್ಲೆಯ ಬಾರಿಪಾಡ ದಲ್ಲಿ ಜನರಲ್‌ ಎಲೆಕ್ಟ್ರಿಕಲ್‌ ಡಿಪಾರ್ಟ್‌ಮೆಂಟಿನಲ್ಲಿ ಉದ್ಯೋಗಿಯಾಗಿರುವ ಸಂತೋಷ್‌ ಜೆನಾ ಎಂಬವರು EPF ಹಣ ಹಿಂಪಡೆಯಲಾಗದ್ದಕ್ಕೆ ತಾನು  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಜಿಲ್ಲಾಡಳಿತೆಗೆ ಬೆದರಿಕೆ ಹಾಕಿರುವುದು ವರದಿಯಾಗಿದೆ. 

Advertisement

ಸಂತೋಷ್‌ ಗೆ ಇಪಿಎಫ್ ಹಣ ಹಿಂಪಡೆಯಲು ಅಸಾಧ್ಯವಾಗದಿರುವುದಕ್ಕೆ ಆತನ ಆಧಾರ್‌ ಕಾರ್ಡ್‌ ನಲ್ಲಿನ ತಪ್ಪೇ ಕಾರಣವೆಂದು ಹೇಳಲಾಗಿದೆ. ತನ್ನ ಮಾಸಿಕ ಸಂಬಳ ಅತ್ಯಲ್ಪ ವಾಗಿರುವುದರಿಂದ ತನಗೆ ಇಪಿಎಫ್ ಹಣ ಹಿಂಪಡೆಯುವ ಅನಿವಾರ್ಯತೆ ಇದೆ ಎಂದು ಆತ ಜಿಲ್ಲಾಡಳಿತೆಯಲ್ಲಿ ಗೋಗರೆದಿದ್ದಾನೆ. 

ತನ್ನ ಈ ತೊಂದರೆಯನ್ನು ಪದೇ ಪದೇ ಸರಕಾರದಲ್ಲಿ ದೂರಿಕೊಂಡಿದ್ದ ಸಂತೋಷ್‌, ಸರಕಾರ ನನಗೆ ನೆರವಾಗದಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದು ಖಚಿತ ಎಂದು ಹೇಳಿದ್ದಾನೆ. 

ಸರಕಾರದ ನಿಷ್ಕ್ರಿಯತೆಯ ಪರಿಣಾಮವಾಗಿ ಸಂತೋಷ್‌ ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ  ಸರಕಾರ ಕಣ್ತೆರೆಯಬೇಕೆಂದು ಒತ್ತಾಯಿಸಿದ್ದಾನೆ. 

Advertisement

Udayavani is now on Telegram. Click here to join our channel and stay updated with the latest news.

Next