ನವದೆಹಲಿ: ಜಗತ್ತಿನಲ್ಲಿ ವೈದ್ಯರು ಬರೆಯುವ ಔಷಧ ಚೀಟಿ (ಪ್ರಿಸ್ಕ್ರಿಪ್ಶನ್)ಯ ಬಗ್ಗೆ ಹಲವು ರೀತಿಯ ಲಘು ಧಾಟಿಯ ಹಾಸ್ಯಗಳು ಇವೆ. ಈ ಪೈಕಿ ಜನಪ್ರಿಯವಾಗಿರುವ ವಾಕ್ಯವೆಂದರೆ, “ಅವರು ಬರೆದಿರುವುದನ್ನು ಮೆಡಿಕಲ್ ಶಾಪ್‌ನಲ್ಲಿ ಇರುವವರಿಗೆ ಮಾತ್ರ ಸ್ಪಷ್ಟವಾಗಿ ಓದಲು ಸಾಧ್ಯ’ ಎಂಬುದು.
ಆದರೆ, ಈಗ ಆ ಸಮಸ್ಯೆಯನ್ನು ಗೂಗಲ್ ನಿವಾರಿಸಿದೆ. ಸೋಮವಾರ ನಡೆದಿದ್ದ ಸಭೆಯಲ್ಲಿ ಔಷಧೋದ್ಯಮ ಕ್ಷೇತ್ರದ ಪ್ರಮುಖರ ಜತೆಗೆ ಈ ಬಗ್ಗೆ ಕಂಪನಿ ಸಮಾಲೋಚನೆ ನಡೆಸಿದೆ.
ವೈದ್ಯರ ಕೈಬರಹವನ್ನು ಪರಿಶೀಲಿಸಿ ಅದನ್ನು ಗ್ರಹಿಸುವಂಥ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೊಳಿಸಲಿದೆ. ಸದ್ಯ ಅದು ಸಂಶೋಧನೆಯ ಹಂತದಲ್ಲಿದೆ.
ಅದರ ಪ್ರಕಾರ ವೈದ್ಯರು ಬರೆದ ಔಷಧದ ಅಂಶಗಳನ್ನು ಅದು ಗ್ರಹಿಸಿಕೊಂಡು ಸುಲಭವಾಗಿ ರೋಗಿಗಳಿಗೆ ಮಾಹಿತಿ ನೀಡುತ್ತದೆ. ಅದಕ್ಕಾಗಿ ಪ್ರಿಸ್ಕ್ರಿಪ್ಶನ್‌ನ ಫೋಟೋ ತೆಗೆದು ಆ್ಯಪ್‌ಗೆ ಅಪ್‌ಲೋಡ್ ಮಾಡಬೇಕಾಗುತ್ತದೆ. ಸೋಮವಾರ ನವದೆಹಲಿಯಲ್ಲಿ ದಕ್ಷಿಣ ಏಷ್ಯಾಕ್ಕಾಗಿ ನಡೆದ ಗೂಗಲ್ ಸಮಾವೇಶದಲ್ಲಿ ಈ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಗಿದೆ