Advertisement

ದಿನಖರ್ಚಿಗೂ ಹಣವಿಲ್ಲದ ಸ್ಥಿತಿಗೆ ತಲುಪಿದ ವಿಶ್ವಸಂಸ್ಥೆ

09:54 AM Oct 13, 2019 | Sriram |

ವಿಶ್ವಸಂಸ್ಥೆ: ನಿಗದಿತ ಸಭೆ ರದ್ದು, ಕಚೇರಿ ಕಟ್ಟದೊಳಗಿನ ಎಸ್ಕಲೇಟರ್‌ ಸ್ವಿಚ್‌ ಆಫ್. ಅಧಿಕಾರಿಗಳ ಪ್ರವಾಸಕ್ಕೆ ಕತ್ತರಿ, ಕಚೇರಿ ಎದುರಿನ ಕಾರಂಜಿ ಬಂದ್‌, ದೈನಂದಿನ ಚಟುವಟಿಕೆಗಳಿಗೇ ಗ್ರಹಣ.

Advertisement

ಇದು ಸದ್ಯ ವಿಶ್ವಸಂಸ್ಥೆಯ ಪರಿಸ್ಥಿತಿ. ಕಾರಣ ನಿತ್ಯದ ಖರ್ಚಿಗೂ ಹಣವಿಲ್ಲದ ಸ್ಥಿತಿ. ಇದರಿಂದಾಗಿ ವಿಶ್ವಸಂಸ್ಥೆ ಮಹಾಕಾರ್ಯದರ್ಶಿ ಆ್ಯಂಟೋನಿಯೋ ಗುಟೆರ್ರಸ್‌ ಅವರು ಹಲವು ಕ್ರಮಗಳನ್ನು ಕೈಗೊಂಡಿದ್ದು, ಸೋಮವಾರದಿಂದ ವಿಶ್ವಸಂಸ್ಥೆಯ ಹಲವು ಕಾರ್ಯಚಟುವಟಿಕೆಗಳನ್ನು ಸ್ಥಗಿತೊಳಿಸುವುದಾಗಿ ಹೇಳಿದ್ದಾರೆ.

ಈ ಕುರಿತು ಅಲ್ಲದೇ ವಿಶ್ವಸಂಸ್ಥೆಯ ಎಲ್ಲ ವಿಭಾಗಗಳ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಹಣವಿಲ್ಲದ ಪರಿಸ್ಥಿತಿಯಿಂದ ಕಾರ್ಯಚಟವಟಿಕೆಗಳಿಗೆ ಧಕ್ಕೆಯಾಗಲಿದೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯ ವಿವಿಧ ವಿಭಾಗಗಳಲ್ಲಿ 37 ಸಾವಿರ ಮಂದಿ ಸಿಬಂದಿಯಿದ್ದು, ನವೆಂಬರ್‌ ತಿಂಗಳ ಸಂಬಳ ಕೊಡಲು ಹಣಕಾಸು ಕೊರತೆ ಕಾಡಿದೆ.

ಏತನ್ಮಧ್ಯೆ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ 128 ರಾಷ್ಟ್ರಗಳು ಕೊಡಬೇಕಾಗಿರುವ 14,121 ಕೋಟಿ ರೂ.ಗಳನ್ನು ಪಾವತಿಸಿವೆ ಎಂದು ವಿಶ್ವಸಂಸ್ಥೆ ನಿರ್ವಹಣೆ ಮುಖ್ಯಸ್ಥರಾದ ಕ್ಯಾಥರೀನ್‌ ಪೊಲಾರ್ಡ್‌ ಬಜೆಟ್‌ ಸಮಿತಿಗೆ ಹೇಳಿದ್ದಾರೆ. ಇದರಲ್ಲಿ ಭಾರತವೂ ಒಂದಾಗಿದೆ.

Advertisement

ಇದೇ ವೇಳೆ 9498 ಕೋಟಿ ರೂ.ಗಳನ್ನು 65 ದೇಶಗಳಿಂದ ಸಾಲ ಪಡೆಯಲಾಗಿದೆ. ಇದರಲ್ಲಿ 7 ಸಾವಿರ ಕೋಟಿ ರೂ.ಗಳನ್ನು ಅಮೆರಿಕದಿಂದ ಪಡೆಯಾಗಿದೆ ಎಂದು ಹೇಳಿದ್ದಾರೆ.

ಇತ್ತ ಹಣಕಾಸು ಪಾವತಿ ಬಗ್ಗೆ ಭಾರತದ ವಿಶ್ವಸಂಸ್ಥೆ ರಾಯಭಾರಿ ಸಯ್ಯದ್‌ ಅಕºರುದ್ದೀನ್‌ ಅವರು ಟ್ವೀಟ್‌ ಮಾಡಿದ್ದು ಬಾಕಿ ಪಾವತಿಯಲ್ಲಿ ಸಂಪೂರ್ಣ ಪಾವತಿ ಮಾಡಿದ್ದ 193 ರಾಷ್ಟ್ರಗಳಲ್ಲಿ 35 ರಾಷ್ಟ್ರಗಳು ಮಾತ್ರ ಎಂದು ಹೇಳಿದ್ದಾರೆ. ಇನ್ನು ಇತ್ತೀಚಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಟ್ವೀಟ್‌ ಮಾಡಿದ್ದು, ವಿಶ್ವಸಂಸ್ಥೆಗೆ ಅಮೆರಿಕ ಮಾತ್ರ ಹಣಕೊಡುತ್ತಿದ್ದು, ಬೇರಾವುದೇ ರಾಷ್ಟ್ರಗಳು ಕೊಡುತ್ತಿಲ್ಲ. ಎಲ್ಲ ರಾಷ್ಟ್ರಗಳೂ ದೇಣಿಗೆ ಕೊಡುವಂತೆ ಮಾಡಿ ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next