ವಾಷಿಂಗ್ಟನ್: ಭಾರತದಲ್ಲಿ ನಕ್ಸಲ್ ಪೀಡಿತ ಪ್ರದೇಶಗಳು ಹಾಗೂ ಜಮ್ಮು ಕಾಶ್ಮೀರದಲ್ಲಿ ಸೇನಾ ಪಡೆಗಳು ನಡೆಸುತ್ತಿರುವ ಹಿಂಸಾಚಾರದಿಂದಾಗಿ ಮಕ್ಕಳು ಬಾಧಿತರಾಗುತ್ತಿದ್ದಾರೆ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೋ ಗುಟೆರಸ್ ಹೇಳಿಕೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ರೀತಿ ಹೇಳಿಕೆಯಿಂದ ಇಂತಹ ಸನ್ನಿವೇಶ ರಾಜಕೀಯ ರೂಪ ಪಡೆದುಕೊಳ್ಳುತ್ತದೆ ಎಂದು ಭಾರತದ ಆಕ್ಷೇಪಿಸಿದೆ. ಮಕ್ಕಳು ಮತ್ತು ಸಶಸ್ತ್ರ ಸೇನೆಯ ಸಂಘರ್ಷ ಕುರಿತ ವಿಶ್ವಸಂಸ್ಥೆಯ ವಾರ್ಷಿಕ ವರದಿಯಲ್ಲಿ ಭಾರತದ ಬಗ್ಗೆ ಸನ್ನಿವೇಶಗಳು ಎಂಬ ವಿಭಾಗದಲ್ಲಿ ಪ್ರಸ್ತಾಪಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಸಶಸ್ತ್ರ ಸಂಘರ್ಷ ನಡೆಯುತ್ತಿಲ್ಲ. ಅಲ್ಲದೆ ಇಲ್ಲಿನ ಸನ್ನಿವೇಶವು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಅಪಾಯಕರವಾಗಿಯೂ ಇಲ್ಲ. ಆದರೂ ವಿಶ್ವಸಂಸ್ಥೆ ತನ್ನ ವರದಿಯಲ್ಲಿ ಈ ಬಗ್ಗೆ ಉಲ್ಲೇಖೀಸಿರುವುದು ಆಘಾತಕಾರಿ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾರ್ಯದರ್ಶಿ ಪೌಲೋಮಿ ತ್ರಿಪಾಠಿ ಹೇಳಿದ್ದಾರೆ.