Advertisement

ಉಮ್ರಾ ಯಾತ್ರೆ ಕೈಗೊಂಡಿದ್ದ ವ್ಯಕ್ತಿ ಸಾವು: ಮೆಕ್ಕಾದಲ್ಲೇ ಅಂತ್ಯಕ್ರಿಯೆ

02:02 AM Dec 22, 2022 | Team Udayavani |

ಕಡಬ : ಪವಿತ್ರ ಉಮ್ರಾ ಯಾತ್ರೆಯ ವೇಳೆ ಕಡಬದ ವ್ಯಕ್ತಿಯೋರ್ವರು ಮುಸ್ಲಿಮರ ಪವಿತ್ರ ಸ್ಥಳ ಮೆಕ್ಕಾದಲ್ಲಿ ಡಿ. 20ರಂದು ಮೃತಪಟ್ಟಿದ್ದಾರೆ.

Advertisement

ಕಡಬದ ಕೋಡಿಂಬಾಳದ ನಿವಾಸಿ ಕಡಬದಲ್ಲಿ ಆಟೋ ಚಾಲಕರಾಗಿದ್ದ ಅಬೂಬಕ್ಕರ್‌ (65) ಮೃತಪಟ್ಟವರು.

ಪತ್ನಿ ಸೇರಿದಂತೆ 40 ಜನರ ತಂಡದ ಜತೆಗೆ ಪವಿತ್ರ ಉಮ್ರಾ ಯಾತ್ರೆ ಕೈಗೊಂಡಿದ್ದ ವೇಳೆ ಸೌದಿ ಅರೇಬಿಯಾದ ಮೆಕ್ಕಾದಲ್ಲಿ ಅಬೂಬಕ್ಕರ್‌ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ಸ್ಥಳೀಯ ಆಸ್ಪತ್ರೆಗೆ ಸೇರಿಸುವ ವೇಳೆ ಮೃತಪಟ್ಟಿದ್ದಾರೆ.

ಮೆಕ್ಕಾದಲ್ಲೇ ಅಂತ್ಯಕ್ರಿಯೆಗೆ ನಿರ್ಧಾರ
ಮುಸ್ಲಿಂ ಪದ್ಧತಿ ಪ್ರಕಾರ ಉಮ್ರಾ ಮತ್ತು ಹಜ್‌ಯಾತ್ರೆ ಸಮಯದಲ್ಲಿ ಮೆಕ್ಕಾದಲ್ಲಿ ಮೃತರಾಗುವುದು ಅತ್ಯಂತ ವಿರಳ ಮತ್ತು ಪುಣ್ಯ ಎಂಬ ನಂಬಿಕೆ ಇದೆ. ಮೃತದೇಹವನ್ನು ಮೆಕ್ಕಾದಲ್ಲೇ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next