Advertisement

ಅಂಪಾಯರ್‌ ವಿರುದ್ಧ ಆಕ್ರೋಶ: ಕೊಹ್ಲಿಗೆ ದಂಡ

11:55 PM Jun 23, 2019 | Sriram |

ಲಂಡನ್‌: ಅಫ್ಘಾನಿಸ್ಥಾನದ ವಿರುದ್ಧದ ಪಂದ್ಯದಲ್ಲಿ ಅಂಪಾಯರ್‌ ಅಲೀಮ್‌ ದಾರ್‌ ಜತೆ ಲೆಗ್‌ ಬಿಫೋರ್‌ ವಿಚಾರ ದಲ್ಲಿ ಮಿತಿ ಮೀರಿದ ಮನವಿ ಹಾಗೂ ಆಕ್ರೋಶ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಪಂದ್ಯ ಸಂಭಾವನೆಯ ಶೇ. 25ರಷ್ಟು ದಂಡ ವಿಧಿಸಲಾಗಿದೆ.

Advertisement

ಡಿಆರ್‌ಎಸ್‌ ಮನವಿ ವಿಫ‌ಲ ವಾದಾಗ ಕೊಹ್ಲಿ ಅಂಪಾಯರ್‌ ಮುಂದೆ ತಮ್ಮ ಆಕ್ರೋಶ ಹೊರಗೆಡಹಿದ್ದರು. ಕೊಹ್ಲಿ ಅವರ ಈ ಅಶಿಸ್ತಿನ ವರ್ತನೆಗೆ ಒಂದು “ಕಳಂಕ ಅಂಕ’ ಲಭಿಸಿತು. ಅವರ ಈ ಅಂಕವೀಗ ಎರಡಕ್ಕೇರಿದೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ವಿರುದ್ಧದ ಪ್ರಿಟೋ ರಿಯಾ ಟೆಸ್ಟ್‌ ವೇಳೆ ಮೊದಲ ಸಲ ಕೊಹ್ಲಿಗೆ ಈ ಅಂಕ ನೀಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next