Advertisement

ಟ್ರೇಲರ್‌ನಲ್ಲೇ ಕ್ರೇಜ್‌ ಮೂಡಿಸಿದ ಉಮಿಲ್‌!

12:52 PM Dec 06, 2018 | |

ರಂಜಿತ್‌ ಸುವರ್ಣ ನಿರ್ದೇಶನದ ‘ಉಮಿಲ್‌’ ನಾಳೆಯಿಂದ ಕರಾವಳಿಯಾದ್ಯಂತ ಭರ್ಜರಿ ಪ್ರದರ್ಶನಕ್ಕೆ ಅಣಿಯಾಗಿದೆ. ತುಳು ಚಿತ್ರರಂಗದಲ್ಲಿ ಗ್ರಾಫಿಕ್ಸ್‌ ತಂತ್ರಜ್ಞಾನ ಬಳಸಿ ಚಿತ್ರೀಕರಣಗೊಂಡ ಮೊದಲ ಸಿನೆಮಾ ಇದಾಗಿದೆ. ವಿಶೇಷವೆಂದರೆ ಹಿಂದಿಗೆ ಡಬ್‌ ಆದ ಮೊದಲ ಸಿನೆಮಾ ಕೂಡ ಇದುವೇ. ಪುನೀತ್‌ ರಾಜ್‌ಕುಮಾರ್‌ ಹಾಡಿರುವ ತುಳುವಿನ ಮೊದಲ ಸಿನೆಮಾ ಎಂಬ ಹೆಗ್ಗಳಿಕೆಯೂ ಇದಕ್ಕಿದೆ. 101ನೇ ಸಿನೆಮಾವಾಗಿ ತೆರೆಕಾಣಲು ಸಿದ್ಧವಾಗಿರುವ ಉಮಿಲ್‌ನಲ್ಲಿ ಉಮೇಶ್‌ ಮಿಜಾರ್‌, ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಳೆ ಸೇರಿದಂತೆ ಕೋಸ್ಟಲ್‌ ವುಡ್‌ನ‌ ಖ್ಯಾತನಾಮರಿದ್ದಾರೆ. 

Advertisement

ವಿಶೇಷವೆಂದರೆ ಈ ಸಿನೆಮಾದ ಎರಡು ದೃಶ್ಯಗಳು ಈಗಾಗಲೇ ಕುಡ್ಲ ವ್ಯಾಪ್ತಿಯಲ್ಲಿ ಸಖತ್‌ ರೆಸ್ಪಾನ್ಸ್‌ ಪಡೆದಿದೆ. ನವರಾತ್ರಿ ಸಮಯದಲ್ಲಿ ಹುಲಿ ವೇಷದವರು ಮನೆ-ಮನೆಗೆ ಬರುವಾಗ ಅವರನ್ನು ಕಂಡು ಓಡುವ ಅರವಿಂದ ಬೋಳಾರ್‌ ಅವರ ದೃಶ್ಯ ಮಾರ್ನೆಮಿ ಸಮಯದಲ್ಲಿ ಹೊಸ ಲುಕ್‌ ನೀಡಿತ್ತು. ಇದೀಗ ಸಿನೆಮಾದ ಟ್ರೇಲರ್‌ ವಿಭಿನ್ನವಾಗಿ ಮೂಡಿಬಂದು ಲಕ್ಷಾಂತರ ಜನರು ಇದನ್ನು ಯೂಟ್ಯೂಬ್‌ನಲ್ಲಿ ನೋಡಿರುವುದು ಇನ್ನೊಂದು ವಿಶೇಷ. ರೇಡಿಯೋವೊಂದಕ್ಕೆ ಸಂದರ್ಶನ ನೀಡುವ ಶೈಲಿಯಲ್ಲಿ ಆರಂಭವಾಗುವ ಟ್ರೇಲರ್‌ ಉಮಿಲ್‌ನ ವಿವಿಧ ಮುಖವನ್ನು ಪರಿಚಯಿಸಿದೆ. ಅದರಲ್ಲೂ ಭೋಜರಾಜ್‌ ವಾಮಂಜೂರು ಬಸ್‌ನಿಲ್ದಾಣದಲ್ಲಿ ಕುಳಿತುಕೊಂಡಾಗ, ಬಸ್‌ ಕಂಡೆಕ್ಟರ್‌ ‘ಬಲೆ ಬಲೆ’ ಎಂದು ಸಹಜವಾಗಿ ಕರೆಯುವ ಹಾಗೂ ಅದಕ್ಕೆ ಸಿಟ್ಟಿನಿಂದ ವಾಮಂಜೂರು ಉತ್ತರಿಸುವ ದೃಶ್ಯ ಕರಾವಳಿಯೆಲ್ಲೆಡೆ ವೈರಲ್‌ ಆಗಿದೆ. ಈ ಮೂಲಕ ಉಮಿಲ್‌ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next