Advertisement

ಪೆಟ್ರೋಲ್‌ ಖಾಲಿಯಾದಾಗ ನೆರವಾಗುವ ಆಪತ್ಭಾಂಧವ ಬ್ರಹ್ಮಾವರದ ಉಮೇಶ್‌!

06:40 AM Oct 06, 2018 | |

ಬ್ರಹ್ಮಾವರ: ರಕ್ತದಾನ, ನೇತ್ರದಾನ ಇತ್ಯಾದಿಗಳನ್ನು ಕೇಳಿದ್ದೀರಿ. ಆದರೆ ಇಲ್ಲೊಬ್ಬರು ಪೆಟ್ರೋಲ್‌ ದಾನಿಯಾಗಿ ಆಪದ್ಭಾಂಧವರಾಗಿದ್ದಾರೆ. ಅವರೇ  ಬ್ರಹ್ಮಾವರ ಚಾಂತಾರಿನ ಉಮೇಶ್‌ ಪೂಜಾರಿ.

Advertisement

ಪೆಟ್ರೋಲ್‌ ಖಾಲಿಯಾಗಿ ಬೈಕ್‌ ಇನ್ನೇನು ತಳ್ಳಿಕೊಂಡು ಹೋಗಬೇಕು ಎನ್ನುವಷ್ಟರಲ್ಲಿ ಬಾಟಲಿಯಲ್ಲಿ ಪೆಟ್ರೋಲ್‌ ಹಿಡಿದು ಬರುತ್ತಾರೆ ಈ ಪೆಟ್ರೋಲ್‌ ಆಪದ್ಭಾಂಧವ. ಉಚಿತವಾಗಿ ಪೆಟ್ರೋಲ್‌ ನೀಡಿ ಸಹಾಯ ಮಾಡುತ್ತಾರೆ. ಇದಕ್ಕಾಗಿ ಅವರು ಸದಾ ಬೈಕ್‌ನಲ್ಲಿ ಸುಮಾರು ಅರ್ಧ ಲೀಟರ್‌ ಪೆಟ್ರೋಲ್‌ ಇಟ್ಟುಕೊಂಡಿರುತ್ತಾರೆ.  

ಏನು ಪ್ರೇರಣೆ ?
6 ವರ್ಷದ ಹಿಂದೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾಗ ಫ್ಲೈ ಓವರ್‌ ಒಂದರಲ್ಲಿ ನವದಂಪತಿ ಬೈಕ್‌ ಅನ್ನು ತಳ್ಳಿಕೊಂಡೇ ಹೋಗುತ್ತಿದ್ದರು. ಇದನ್ನು ನೋಡಿದ ಅವರು ಪೆಟ್ರೋಲ್‌ ನೀಡಲಾಗದಿದ್ದೂ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಿದ್ದರು.  ಆ ಘಟನೆ ಬಳಿಕ ಅವರು ಇಂತಹ ಸಂದಿಗ್ಧಕ್ಕೆ ಸಿಲುಕಿದವರಿಗೆ ಉಪಕಾರವಾಗಲಿ ಎಂದು ತನ್ನ ಬೈಕ್‌ನಲ್ಲಿ ಹೆಚ್ಚುವರಿಯಾಗಿ ಬಾಟಲಿಯಲ್ಲಿ ಪೆಟ್ರೋಲ್‌ ಇಟ್ಟುಕೊಂಡೇ ಹೋಗುತ್ತಾರೆ. 
 
ನೂರಾರು ಮಂದಿಗೆ ಸಹಾಯ
ಬೆಂಗಳೂರಿನಲ್ಲಿ ಇರುವಾಗ 100ಕ್ಕೂ ಹೆಚ್ಚು ಜನರಿಗೆ, ಬಳಿಕ ಊರಿಗೆ ಬಂದ ಮೇಲೆ 300ಕ್ಕೂ ಮಿಕ್ಕಿ ಮಂದಿಗೆ ಈ ರೀತಿ ನೆರವು ನೀಡಿದ್ದಾರೆ. ಬಾವಿ ಗುತ್ತಿಗೆ ಕೆಲಸ ನಿಮಿತ್ತ ಗ್ರಾಮಾಂತರ ಭಾಗದಲ್ಲಿ ತಿರುಗಾಟ ಮಾಡುವಾಗ ಅದೆಷ್ಟೋ ಮಂದಿಗೆ ನೆರವಾಗಿದ್ದಾರೆ.

ವಿಶಿಷ್ಟ ಸೇವೆ
ಉಮೇಶ್‌ ಅವರು ಪೆಟ್ರೋಲ್‌ ಮಾತ್ರವಲ್ಲ  ರೇಷನ್‌ ಅಕ್ಕಿಯನ್ನು ಬಡವರು ಮನೆಗೆ ತೆಗೆದುಕೊಂಡು ಹೋಗಲೂ ನೆರವಾಗುತ್ತಾರೆ. ಬೈಕ್‌ನಲ್ಲೇ ಮನೆಗೆ ತಲುಪಿಸಿ ಕೊಡುತ್ತಾರೆ. ಅಲ್ಲದೆ ಸರಕಾರಿ ಸೌಲಭ್ಯಗಳು ದೊರಕಿಸಿ ಕೊಡಲು ನೆರವಾಗುತ್ತಾರೆ. ಇನ್ನು ಶಾಲಾ ಮಕ್ಕಳ ಸೈಕಲ್‌ಗೆ ಗಾಳಿ ಹಾಕಲು ಪಂಪ್‌ ಒದಗಿಸುವ ಆಲೋಚನೆಯಲ್ಲಿದ್ದಾರೆ!

ಬಹುಮುಖ ಪ್ರತಿಭೆ
ಬಹುಮುಖ ಪ್ರತಿಭೆಯ ಉಮೇಶ್‌ ಅವರು  ಕ್ರಿಕೆಟ್‌ವೀಕ್ಷಕ ವಿವರಣೆಕಾರನಾಗಿ ಕರ್ನಾಟಕದಾದ್ಯಂತ ಮಾತ್ರವಲ್ಲ ಗೋವಾ, ಮಹಾರಾಷ್ಟ್ರ, ದೂರದ ಮಲೇಷ್ಯಾಕ್ಕೂ ಹೋಗಿ ಬಂದಿದ್ದಾರೆ. ನಾಟಕದಲ್ಲಿ ಸಕ್ರಿಯ, ಬ್ರಹ್ಮಾವರದ ಹಾಸ್ಯ ಕಲಾವಿದರಾಗಿ, ಯಕ್ಷಗಾನ ಮೈಕ್‌ ಪ್ರಚಾರಕರಾಗಿಯೂ ಗುರುತಿಸಿ ಕೊಂಡಿದ್ದಾರೆ. ಕ್ರೀಡೆಯಲ್ಲೂ ಗುರುತಿಸಿ ಕೊಂಡಿದ್ದಾರೆ ನವಕಿರಣ್‌ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆಯಲ್ಲಿ 24 ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ.  

Advertisement
Advertisement

Udayavani is now on Telegram. Click here to join our channel and stay updated with the latest news.

Next