Advertisement

ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗಬೇಕು, ಉಮೇಶ್ ಕತ್ತಿಗೆ ಆ ಅರ್ಹತೆಯಿದೆ ರಮೇಶ ಕತ್ತಿ

03:35 PM Oct 29, 2020 | keerthan |

ಬೆಳಗಾವಿ: ಬಹಳ ವರ್ಷಗಳಿಂದ ಈ ಭಾಗದವರು ಮುಖ್ಯಮಂತ್ರಿಯಾಗಿಲ್ಲ. ಹೀಗಾಗಿ ಉತ್ತರ ಕರ್ನಾಟಕದವರೇ ಮುಂದಿನ ಸಿಎಂ ಆಗಬೇಕು ಎಂಬ ಬಯಕೆ ಜನರಲ್ಲಿದೆ ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

Advertisement

ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ಉಮೇಶ್ ಕತ್ತಿ ಮಂತ್ರಿನೇ ಆಗುತ್ತಿಲ್ಲ. ಇನ್ನು ಮುಖ್ಯಮಂತ್ರಿ ಹೇಗೆ ಆಗುತ್ತಾರೆ. ಸಹೋದರನಿಗೆ ಸಿಪಾಯಿ ಆಗಾಕ್ ಆಗವಲ್ದು, ಡಿಸಿ ಹೆಂಗ್ ಆಗ್ತಾನಾ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಇದನ್ನೂ ಓದಿ:ಡ್ರಗ್ ಪ್ರಕರಣ: ಕೇರಳ ಮಾಜಿ ಗೃಹ ಸಚಿವರ ಪುತ್ರ ಬಿನೇಶ್ ಕೊಡಿಯೇರಿ ಇಡಿ ವಶಕ್ಕೆ

ಉಮೇಶ ಕತ್ತಿ ಹಿರಿಯ ರಾಜಕಾರಣಿ ಅನುಭವ ಇದೆ. ಮೂವರು ಸಿಎಂಗಳ ಕೈಯಲ್ಲಿ ಹದಿಮೂರುವರೆ ವರ್ಷ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಸಾಕಷ್ಟು ಅನುಭವ ಇದೆ. ಮುಖ್ಯಮಂತ್ರಿ ಆಗುವ ಎಲ್ಲ ಅರ್ಹತೆ ಅವರಿಗಿದೆ ಎಂದು ರಮೇಶ್​ ಕತ್ತಿ ಪ್ರತಿಕ್ರಿಯಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next