Advertisement

ಅಧಿವೇಶನದ ಬಳಿಕ ಕೊಡಗು ಜಿಲ್ಲೆಗೆ ಭೇಟಿ, ಕಾಡು ಪ್ರಾಣಿಗಳ ಹಾವಳಿ ತಡೆಗೆ ಕ್ರಮ : ಉಮೇಶ್ ಕತ್ತಿ

08:15 PM Feb 15, 2022 | Team Udayavani |

ಬೆಂಗಳೂರು : ವಿಧಾನ ಮಂಡಲದ ಅಧಿವೇಶನದ  ಬಳಿಕ ಕೊಡಗು ಜಿಲ್ಲೆಗೆ ಭೇಟಿ ಕೊಟ್ಟು, ಆನೆ ಹಾಗೂ ಹುಲಿ ಹಾವಳಿ ಇರುವ ಪ್ರದೇಶದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಜೊತೆ ಸಭೆ ಮಾಡಿ, ಹಾವಳಿ ತಪ್ಪಿಸಲು ಸೂಕ್ತ ಪರಿಹಾರ ಒದಗಿಸಲಾಗುವುದು ಎಂದು ಅರಣ್ಯ ಸಚಿವ ಉಮೇಶ್ ಕತ್ತಿ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು..

Advertisement

ಕೊಡಗು ಅರಣ್ಯ ಪ್ರದೇಶದಲ್ಲಿ ಆನೆ ಹಾಗೂ ಹುಲಿ ಹಾವಳಿ ಹೆಚ್ಚಾಗಿದ್ದೂ, ಸೂಕ್ತ ರಕ್ಷಣೆಯ ಅಗತ್ಯ ಇದೆ ಎಂದು ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಪರಿಷತ್ ಕಲಾಪದಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಉತ್ತರಿಸಿದ ಅರಣ್ಯ ಸಚಿವ ಉಮೇಶ್ ಕತ್ತಿ, ಕೊಡಗು ಜಿಲ್ಲೆಯಲ್ಲಿ 45 ಕಿ.ಮಿ ಕಂದಕ ನಿರ್ಮಾಣ ಪ್ರಗತಿಯಲ್ಲಿದೆ, ಕಾಡಂಚಿನ ಜನರು ಸೋಲಾರ್ ಬೇಲಿ ನಿರ್ಮಾಣ ಮಾಡಲು ಅರಣ್ಯ ಇಲಾಖೆಯಿಂದ 50% ನೀಡಲಾಗುತ್ತಿದೆ. 19 ಕಾಡಾನೆಗಳಿಗೆ ರೆಡಿಯೋ ಕಲರ್ ಅಳವಡಿಕೆ ಮಾಡಲಾಗಿದೆ. ಕೊಡಗು ಜಿಲ್ಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಸುತ್ತಮುತ್ತಲಿನ ಸೋಲಾರ್ ಪ್ಲಾಂಟ್ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಆನೆ ಹಾಗೂ ಹುಲಿ ಹಾವಳಿ ತಡೆಯಲು ನಾನೇ ಕೊಡಗು ಜಿಲ್ಲೆಗೆ ಭೇಟಿ ನೀಡಿ ಸ್ಥಳಿಯ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಜೊತೆ ಸುಧೀರ್ಘ ಸಭೆ ಮಾಡಿ, ಸ್ಥಳದಲ್ಲಿಯೆ ಕಾಡುಪ್ರಾಣಿಗಳ ಹಾವಳಿ ತಪ್ಪಿಸುವ ಯೋಜನೆ ರೂಪಿಸಲಾಗುವುದು ಎಂದು ಸಚಿವ ಉಮೇಶ್ ಕತ್ತಿ ತಿಳಿಸಿದರು.

ಇದನ್ನೂ ಓದಿ : ಶ್ರೀರಂಗಪಟ್ಟಣ : ಹೈಕೋರ್ಟ್ ಆದೇಶ ಉಲ್ಲಂಘಿಸಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದ ಶಿಕ್ಷಕಿ

Advertisement

Udayavani is now on Telegram. Click here to join our channel and stay updated with the latest news.

Next