ಕಲಬುರಗಿ: ಪ್ರತಿವರ್ಷ ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ನಿಗದಿಯಾದಾಗ ತೊಗರಿ ಬೆಂಬಲ ಬೆಲೆಯಲ್ಲಿ ಮತ್ತೆ ಅನ್ಯಾಯ ಎನ್ನುವುದನ್ನು ಕಳೆದ ಎರಡು ದಶಕಗಳ ಅವಧಿಯಿಂದ ಸಾಮಾನ್ಯವಾಗಿ ಕೇಳಿ ಬರುತ್ತಿದೆ. ಮೂರು ತಿಂಗಳಿನ ಹೆಸರಿಗಿಂತ ಆರು ತಿಂಗಳಿನ ತೊಗರಿಗೆ ಬೆಂಬಲ ಬೆಲೆ ಕಡಿಮೆಯಿದೆ.
ಇದನ್ನು ಸರಿಪಡಿಸುವಂತೆ ಹತ್ತಾರು ವರ್ಷಗಳಿಂದ ಒತ್ತಾಯಿ ಸುತ್ತಾ ಬರುತ್ತಿದ್ದರೂ ನ್ಯಾಯ ಮಾತ್ರ ಸಿಗುತ್ತಿಲ್ಲ. ಕೇಂದ್ರದಲ್ಲಿ ಯಾರದ್ದೇ ಸರ್ಕಾರ ವಿದ್ದರೂ ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆ ತೊಗರಿಗೆ ಮಾತ್ರ ಬೆಂಬಲ ಬೆಲೆ ನಿಗದಿಯಲ್ಲಿ ಇನ್ನೂವರೆಗೂ ನ್ಯಾಯ ದೊರಕಿಲ್ಲ. ಅದೇ ರೀತಿ ರಾಜ್ಯ ಸರ್ಕಾರದಿಂದಲೂ ರೇಷ್ಮೆ, ಕಾμ, ಅಡಿಕೆ ಬೆಳೆಗೆ ಬಜೆಟ್‌ನಲ್ಲಿ ಅಭಿವೃದ್ಧಿ ಅನುದಾನ ನಿಗದಿ ಮಾಡಲಾಗುತ್ತಿದೆ. ಅಲ್ಲದೇ ವಿಶೇಷ ಪ್ಯಾಕೇಜ್‌ನ್ನು ಪ್ರಕಟಿಸಲಾಗಿದೆ.
ಆದರೆ ತೊಗರಿಗೆ ಮಂಡಳಿ ರಚನೆಗೆಂದು ಐದು ಕೋಟಿ ರೂ. ನೀಡಿದ್ದನ್ನು ಬಿಟ್ಟರೆ ಅನುದಾನವನ್ನೇ ನೀಡಿಲ್ಲ. ಈ ಅಂಶಗಳನ್ನು ಅವಲೋಕಿಸಿದಾಗ ತೊಗರಿಗೆ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ನ್ಯಾಯ ಸಿಕ್ಕಿಲ್ಲ. ಕಾಂಗ್ರೆಸ್-ಬಿಜೆಪಿ ಅಥವಾ ಜೆಡಿಎಸ್ ಸರ್ಕಾರವಿದ್ದಾಗಲೂ ಮೂರು ತಿಂಗಳಿನ ಹೆಸರಿಗಿಂತ ಅದರಲ್ಲೂ ಖರ್ಚು ವೆಚ್ಚದ ಮೂರು ಪಟ್ಟು ಬೆಂಬಲ ಬೆಲೆ ನಿಗದಿಯಾಗಲೇ ಇಲ್ಲ. ಬೆಂಬಲ ಬೆಲೆ ಹೆಚ್ಚಳವಾಗಬೇಕೆಂಬ ತೊಗರಿ ರೈತನ ಆಗ್ರಹ ಹಾಗೂ ಬೇಡಿಕೆ ಬಡವನ ಸಿಟ್ಟು ದವಡೆಗೆ ಮೂಲ ಎನ್ನುವಂತಾಗಿದೆ. ಬಹುತೇಕ ಎಲ್ಲರೂ ರಾಜಕೀಯವಾಗಿ ಮಾತನಾಡು ತ್ತಾರೆಯೇ ಹೊರತು ಪ್ರಾಮಾ ಣಿಕವಾಗಿ ಸ್ಪಂದಿಸುವ ಕೆಲಸವಾಗಿಲ್ಲ ಎನ್ನುವುದು ರೈತನ ಅಳಲಾಗಿದೆ.
ಬೆಂಬಲ ಬೆಲೆ ನಿಗದಿ ಯಾದಾಗ ಅನ್ಯಾಯ ಹಾಗೂ ಶೋಷಣೆ ಯಾಗಿದೆ ಎನ್ನುವ ಕೂಗಬೇಕು. ಅದೇ ರೀತಿ ತೊಗರಿ ಮಾರುಕಟ್ಟೆಗೆ ಪ್ರವೇಶಿಸುವಾಗ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸುವಂತೆ ಆಗ್ರಹಿಸಬೇಕು. ನಂತರ ಬೆಲೆ ಕುಸಿತವಾದಾಗ ಹಣೆಗೆ ಕೈ ಇಟ್ಟುಕೊಳ್ಳಬೇಕು. ಇದು ತೊಗರಿ ರೈತನ ಹಣೆಬರಹವಾಗಿದೆ. ಶಾಶ್ವತ ಪರಿಹಾರ ಯಾವಾಗ?: ತೊಗರಿ ಬೆಂಬಲ ಬೆಲೆ ಹಾಗೂ ಮಾರುಕಟ್ಟೆಯಲ್ಲಿ ಬೆಲೆ ಕುಸಿತ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ? ಎನ್ನುವುದಕ್ಕೆ ಉತ್ತರವೇ ಇಲ್ಲ ಎನ್ನುವಂತಾಗಿದೆ. ತೊಗರಿ ಅಭಿವೃದ್ಧಿ ಮಂಡಳಿ ಹೆಸರಿಗೆ ಎನ್ನುವಂತಾಗಿದೆ.
ಮಂಡಳಿಗೆ ಕಚೇರಿ ಇಲ್ಲ. ಅಷ್ಟೇ ಏಕೆ ವ್ಯವಸ್ಥಾಪಕ ನಿರ್ದೇಶಕರೂ ಇಲ್ಲ. ಹೀಗೆ ಮಂಡಳಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ತೊಗರಿ ಅಭಿವೃದ್ಧಿ ಮಂಡಳಿ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ ಎಂದು ಬದಲಾಗಿದ್ದರೂ ಹಣೆ ಬರಹ ಮಾತ್ರ ಬದಲಾಗಲಿಲ್ಲ. ತೊಗರಿ ಅಭಿವೃದ್ಧಿ ಮಂಡಳಿ ಕೆಎಂಎಫ್ ಮಾದರಿ ಯಲ್ಲಿ ಬದಲಾಗಬೇಕೆಂಬ ಒತ್ತಾಯ ಇತ್ತೀಚೆಗೆ ಕೇಳಿ ಬರುತ್ತಿದೆ. ಆದರೆ ಸರ್ಕಾರ ಮಾತ್ರ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಮುಖ್ಯವಾಗಿ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳೇ ತೊಗರಿಗೆ ಆದ ಅನ್ಯಾಯ ಸರಿಪಡಿಸಲು ಪರಿಣಾಮಕಾರಿಯಾಗಿ ಪ್ರಯತ್ನ ಮಾಡದಿರುವುದು ಹಾಗೂ ಇಚ್ಚಾಶಕ್ತಿ ಕೊರತೆಯಿಂದ ತೊಗರಿಗೆ ನ್ಯಾಯ ಸಿಗುತ್ತಿಲ್ಲ. ಏನಿದ್ದರೂ ಹೇಳಿಕೆಗೆ ಮಾತ್ರ ಇವರೆಲ್ಲ ಸಿಮೀತ ಎನ್ನುವಂತಾಗಿದೆ.