Advertisement

ಉಮೇಶ್‌ ವ್ಯಂಗ್ಯ ಚಿತ್ರಕಥಾ

02:57 PM Nov 10, 2018 | Team Udayavani |

ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆ ಹಲವು ಮಹತ್ವದ ಚಿತ್ರಕಾರರ ವ್ಯಂಗ್ಯಚಿತ್ರಗಳನ್ನು ಪ್ರದರ್ಶಿಸುತ್ತಲೇ ಬಂದಿದೆ. ಈ ಬಾರಿ ಜೆಮಷೆಡ್‌ಪುರ ಮೂಲದ ಉಮೇಶ್‌ ಕುಮಾರ್‌ ಅವರ ಕಾಟೂìನ್‌ಗಳು ಗ್ಯಾಲರಿಯಲ್ಲಿ ಸೆಳೆಯಲಿವೆ. ವೃತ್ತಿಯಿಂದ ಮೆಕ್ಯಾನಿಕಲ್‌ ಎಂಜಿನಿಯರ್‌ ಆಗಿರುವ ಉಮೇಶ್‌, 2000ಕ್ಕೂ ಅಧಿಕ ವ್ಯಂಗ್ಯಚಿತ್ರಗಳನ್ನು ರಚಿಸಿದವರು. ಆರ್‌.ಕೆ. ಲಕ್ಷ್ಮಣ್‌ರ ವ್ಯಂಗ್ಯಚಿತ್ರಗಳಿಂದ ಸ್ಫೂರ್ತಿ ಪಡೆದು, ಚಿತ್ರಕಲೆಯ ಕೈ ಹಿಡಿದ ಇವರು, “ಕಾಟೂìನ್‌ ಟ್ರಿಪ್‌’ ಎಂಬ ವ್ಯಂಗ್ಯಚಿತ್ರ ಸಂಕಲನ ಹೊರತಂದಿದ್ದಾರೆ. ಪ್ರಸ್ತುತ ಸಮಾಜದ ಅಂಕುಡೊಂಕುಗಳನ್ನು ಎತ್ತಿ ತೋರಿಸುವ ಇವರ ಚಿತ್ರಗಳಲ್ಲಿ, ಉತ್ತಮ ಸಂದೇಶಗಳೂ ಕಾಣಸಿಗುತ್ತವೆ. 

Advertisement

ಯಾವಾಗ?: ನ.3- 17, ಬೆ.10ರಿಂದ ಸಂ.6
ಎಲ್ಲಿ?: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ, ಎಂ.ಜಿ. ರಸ್ತೆ
ಪ್ರವೇಶ: 9980091428

Advertisement

Udayavani is now on Telegram. Click here to join our channel and stay updated with the latest news.

Next