Advertisement
ಇದು ಮಳೆಗಾಲ. ಆದರೆ, ಮಳೆ ಬರೋದು ಆಗೊಮ್ಮೆ ಈಗೊಮ್ಮೆ ಮಾತ್ರ. ಹಾಗಂತ ಛತ್ರಿ, ರೇನ್‌ಕೋಟ್ ಇಲ್ಲದೆ ಮನೆಯಿಂದ ಹೊರಡುವ ಹಾಗಿಲ್ಲ. ಬೆಳಗ್ಗೆ ಇದ್ದ ಬಿಸಿಲನ್ನು ಮರೆಸಿ ಬಿಡುವಂತೆ ಸಂಜೆ ಮಳೆ ಸುರಿಯಬಹುದು. ಹಾಗಾಗಿ ಛತ್ರಿಯನ್ನು ಜೊತೆಯಲ್ಲಿಯೇ ಒಯ್ಯುವುದು ಜಾಣತನ.
ಮೊದಲೆಲ್ಲ ಛತ್ರಿ ಎಂದ ಕೂಡಲೇ ಕಣ್ಮುಂದೆ ಬರುತ್ತಿದ್ದುದು, ಕಪ್ಪು ಬಣ್ಣದ, ಮಾರುದ್ದದ ಕೊಡೆಗಳು. ಚೀಲದಲ್ಲಿ ಇಡಲಾಗದ ಉದ್ದದ ಕೊಡೆಗಳನ್ನು , ಕೈಯಲ್ಲೇ ಹಿಡಿದುಕೊಳ್ಳಬೇಕಿತ್ತು. ಆದರೆ, ಕಪ್ಪು ಬಣ್ಣದ ಅಂಥ ಛತ್ರಿಗಳನ್ನು ಬಣ್ಣ ಬಣ್ಣದ ಕೊಡೆಗಳು ಯಾವಾಗಲೋ ರಿಪ್ಲೇಸ್ ಮಾಡಿಬಿಟ್ಟಿವೆ. ಅದರಲ್ಲೂ ಫ್ಯಾಷನ್‌ಪ್ರಿಯರು, ಬೋರಿಂಗ್ ಬ್ಲಾಕ್ ಬದಲಿಗೆ ಬಣ್ಣದ ಛತ್ರಿಗಳನ್ನೇ ಹೆಚ್ಚು ಇಷ್ಟಪಡುತ್ತಾರೆ. ಕೊಡೆಗೊಂದು ಗೂಡು
ಒದ್ದೆಯಾದ ಈ ಛತ್ರಿಗಳನ್ನು ಮತ್ತೆ ಬ್ಯಾಗಿನಲ್ಲಿ ಇಟ್ಟುಕೊಳ್ಳುವುದು ದೊಡ್ಡ ತಲೆನೋವು. ಅದರಿಂದ ಬ್ಯಾಗ್ ಕೂಡಾ ಒದ್ದೆಯಾಗುತ್ತದೆ. ಆದರೆ, ಇನ್ಮುಂದೆ ಆ ತೊಂದರೆ ಅನುಭವಿಸಬೇಕಿಲ್ಲ. ಚಿಕ್ಕ ಛತ್ರಿಗಳನ್ನಿಡಲು ಕೇಸ್‌ಗಳು ಸಿಕ್ಕುತ್ತಿವೆ. ಕನ್ನಡಕ, ಲೆನ್ಸ್‌ಗಳನ್ನು ಇಡಲು ಕೇಸ್‌ಗಳು ಇರುವಂತೆ ಛತ್ರಿಗಳಿಗೂ ಕೇಸ್‌ಗಳಿವೆ. ನೋಡಲು ಕ್ಯಾಪ್ಸೂಲ್‌ನಂತಿರುವ ಈ ಗೂಡಿನೊಳಗೆ ಒದ್ದೆ ಕೊಡೆಯನ್ನು ಇಟ್ಟು , ಚಿಂತೆ ಇಲ್ಲದೆ ಬ್ಯಾಗಿನಲ್ಲಿಡಬಹುದು. ಈ ಮಳೆಗಾಲದಲ್ಲಿ ಟ್ರೆಂಡಿಂಗ್‌ನಲ್ಲಿದೆ ಈ ಕ್ಯಾಪ್ಸೂಲ್ ಕೇಸ್ ಪಾಕೆಟ್ ಅಂಬ್ರೆಲಾ, ಅಂದರೆ 3 ಪೋಲ್ಡ್ ಅಥವಾ 4 ಪೋಲ್ಡ್ ಛತ್ರಿಗಳ ಗೂಡು! ಇವು ಬಹುತೇಕ ಎಲ್ಲಾ ಕೊಡೆ ಅಂಗಡಿಯಲ್ಲಿ ಮತ್ತು ಆನ್‌ಲೈನ್ ತಾಣಗಳಲ್ಲಿ ದೊರಕುತ್ತವೆ.
Related Articles
Advertisement