ವಿಟ್ಲ: ಕಲ್ಲಡ್ಕ ಹವ್ಯಕ ವಲಯದ ವ್ಯಾಪ್ತಿ ದೂರದಲ್ಲಿದೆ. ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾ ಸ್ವಾಮಿಯವರ ಎಲ್ಲ ಯೋಜನೆ ಗಳಿಗೆ ಇಲ್ಲಿ ಸ್ಪಂದಿಸಲಾಗುತ್ತದೆ. ಮಹಾ ಮಂಡಲದ ನಿಯಮಗಳನ್ನು ಶಿಸ್ತುಬದ್ಧ ವಾಗಿ ಪಾಲಿಸಲಾಗುತ್ತಿದೆ. ಆ ಲೆಕ್ಕಾಚಾರ ದಲ್ಲಿ ಕಲ್ಲಡ್ಕ ವಲಯದ ಸಾಧನೆ ಗಣನೀಯ. ಇದೇ ರೀತಿ ಇತರ ವಲಯಗಳಲ್ಲೂ ವಲಯೋತ್ಸವ ನಡೆಯಬೇಕು ಎಂದು ಮಂಗಳೂರು ಹವ್ಯಕ ಮಂಡಲ ಅಧ್ಯಕ್ಷ ಸೇರಾಜೆ ಸುಬ್ರಹ್ಮಣ್ಯ ಭಟ್ ಶ್ಲಾಘಿಸಿದರು.
ಕಲ್ಲಡ್ಕ ಗೇರುಕಟ್ಟೆ ಶ್ರೀ ಉಮಾಶಿವ ಕ್ಷೇತ್ರದಲ್ಲಿ ಮಂಗಳೂರು ಹವ್ಯಕ ಮಂಡ ಲಾಂತರ್ಗತ ಕಲ್ಲಡ್ಕ ಹವ್ಯಕ ವಲಯದ ವತಿಯಿಂದ ನಡೆದ ವಲಯೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತೋಟಗಾರಿಕೆ ಇಲಾಖೆ ಬಗ್ಗೆ ಬಾಲಕೃಷ್ಣ ಭಟ್ ಮಾಹಿತಿ ನೀಡಿದರು. ಮಂಗಳೂರು ಹವ್ಯಕ ಮಂಡಲ ಪ್ರಧಾನ ಗುರಿಕ್ಕಾರ ಉದಯ ಕುಮಾರ್ ಖಂಡಿಗ, ಕೋಶಾಧಿಕಾರಿ ರಮೇಶ್ ನೂಜಿಬೈಲು, ಮಹಾಮಂಡಲ ಮುಷ್ಟಿಭಿಕ್ಷೆ ಪ್ರಧಾನ ಮಲ್ಲಿಕಾ ಜಿ. ಭಟ್, ಶ್ರೀ ಉಮಾಶಿವ ಕ್ಷೇತ್ರ ಅಧ್ಯಕ್ಷ ರಾಕೋಡಿ ಈಶ್ವರ ಭಟ್, ಉಪಸ್ಥಿತರಿದ್ದರು. ನಿವೃತ್ತ ಗುರಿಕ್ಕಾರ ಅಡ್ಕತ್ತಿಮಾರು ರಾಮಚಂದ್ರ ಭಟ್, ಅಡಿಕೆ ಮರಕ್ಕೇರುವ ಯಂತ್ರ ಸಂಶೋಧಕ ಗಣಪತಿ ಭಟ್ ಕೋಮಲೆ ಅವರನ್ನು ಸಮ್ಮಾನಿಸಲಾಯಿತು.
ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆ ಆಡಳಿತಾಧಿಕಾರಿ ಪ್ರೊ| ಕೆ. ಶಂಕರ ಭಟ್, ಮಂಗಳೂರು ಮಂಡಲ ಮೂಲಮಠ ಪ್ರತಿನಿಧಿ ಮುಳ್ಳುಂಜ ವೆಂಕಟೇಶ್ವರ ಭಟ್ ಅಭಿನಂದಿಸಿದರು.
ಎರಡು ವರ್ಷಗಳಲ್ಲಿ ಗರಿಷ್ಠ ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.