Advertisement

ದಶಕ ಹಿಂದೆಯೇ ಆತ್ಮನಿರ್ಭರ್‌ ಅನುಷ್ಠಾನ

03:22 PM Nov 20, 2020 | Suhan S |

ಬೀದರ: ದೇಶದ ನಾಗರಿಕರನ್ನು ಆರ್ಥಿಕವಾಗಿಸಬಲರನ್ನಾಗಿ ಪ್ರಧಾನಿ ಮೋದಿ ಅನುಷ್ಠಾನಕ್ಕೆ ತಂದಿರುವ ಆತ್ಮ ನಿರ್ಭರ್‌ ಭಾರತ ಯೋಜನೆಯ ಕಲ್ಪನೆಯನ್ನು ಬೀದರ ಜಿಲ್ಲೆಯಲ್ಲಿ15 ವರ್ಷಗಳ ಹಿಂದೆಯೇ ಸಹಕಾರಿ ಧುರೀಣ ದಿ| ಗುರುಪಾದಪ್ಪ ನಾಗಮಾರಪಳ್ಳಿಯವರು ಜಾರಿಗೊಳಿಸಿದ್ದರು ಎಂದು ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಉಮಾಕಾಂತ ನಾಗ್ಮಾರಪಳ್ಳಿ ಹೇಳಿದರು.

Advertisement

ನಗರದ ಡಿಸಿಸಿ ಬ್ಯಾಂಕಿನ ಸಭಾಂಗಣದಲ್ಲಿ ನಡೆದ 67ನೇ ಅಖೀಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 1996ರಲ್ಲಿ ಸ್ವ-ಸಹಾಯ ಗುಂಪು ರಚಿಸಿ, ಮಹಿಳೆಯರಿಗೆ ಜೀವನ ನಡೆಸಲು ಮತ್ತು ಬದುಕು ಹಸನ ಮಾಡಿಕೊಳ್ಳಲು ದಿ| ನಾಗಮಾರಪಳ್ಳಿ ಅವರು ಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ಕಲ್ಪಿಸಿದ್ದರು. ಎಸ್‌ಎಚ್‌ಜಿಗಳ ಮೂಲಕ ಜಿಲ್ಲೆಯ ಹೆಸರು ವಿಶ್ವದಲ್ಲಿ ರಾರಾಜಿಸುವಂತೆ ಮಾಡಿದ ಕೀರ್ತಿ ನಾಗಮಾರಪಳ್ಳಿಯವರಿಗೆ ಸಲ್ಲುತ್ತದೆ ಎಂದರು.

ಕೋವಿಡ್‌-19 ಸಂದರ್ಭದಲ್ಲಿ ದೇಶದ ಆರ್ಥಿಕತೆ ತತ್ತರಿಸಿದ ಹಿನ್ನಲೆ ಕೇಂದ್ರ ಸರ್ಕಾರ ಆತ್ಮನಿರ್ಭರ್‌ ಭಾರತ ಯೋಜನೆ ಮೂಲಕ ದೇಶದ ನಾಗರಿಕರನ್ನು ಆರ್ಥಿಕವಾಗಿ ಸಬರನ್ನಾಗಿ ಮಾಡುವ ಉದ್ದೇಶದಿಂದ ಧನ ಸಹಾಯ ನೀಡಿದಂತೆ ಸಿಎಂ ಬಿಎಸ್‌ವೈ ಸರ್ಕಾರ ಕೋವಿಡ್ ದಿಂದ ಸಂಕಷ್ಟದಲ್ಲಿರುವ ಜನರಿಗೆ ಸಹಕಾರ ಇಲಾಖೆಯಿಂದ ಸಹಾಯ ನೀಡಿದ್ದಾರೆ. ಬೀದರ ಸೇರಿ ಕಲ್ಬುರ್ಗಿ ವಿಭಾಗಕ್ಕೆ ಡಿಸಿಸಿ ಬ್ಯಾಂಕ್‌ಗಳ ಮೂಲಕ 1,857 ಕೋಟಿ ರೂ. ಆರ್ಥಿಕ ಸಹಾಯ ನೀಡಲಾಗಿದೆ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಹಮ್ಮದ್‌ ಸಲೀಮೊದ್ದೀನ್‌ ಮಾತನಾಡಿ, ಗುರುಪಾದಪ್ಪ ನಾಗಮಾರಪಳ್ಳಿಯವರು ಕಳೆದ ನಾಲ್ಕೈದು ದಶಕಗಳಿಂದ ನಡೆಸಿಕೊಂಡು ಬಂದಿದ್ದ ಡಿಸಿಸಿ ಬ್ಯಾಂಕ್‌ ಮತ್ತು ಎನ್‌ಎಸ್‌ಎಸ್‌ ಕೆಯನ್ನು ಉಮಾಕಾಂತ ನಾಗ್ಮಾರಪಳ್ಳಿಯವರು ಬಹಳ ಸಮರ್ಥವಾಗಿ ಮುನ್ನಡೆಸಿಕೊಂಡು ಬರುವ ಮೂಲಕ ತಂದೆಯ ಕನಸು ನನಸು ಮಾಡುತ್ತಿದ್ದಾರೆ. ನಿಸ್ವಾಥ ಮನೋಭಾವದಿಂದ ದುಡಿಯುತ್ತಿರುವ ಉಮಾಕಾಂತಗೆ ರಾಜ್ಯ ಸರ್ಕಾರ ಸಹಕಾರ ರತ್ನ ಪ್ರಶಸ್ತಿ ನೀಡಿ, ಗೌರವಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಜಿಲ್ಲಾ ಸಹಕಾರ ಯುನಿಯನ್‌ ಅಧ್ಯಕ್ಷ ಪರಮೇಶ್ವರ ಮುಗಟೆ ಹಾಗೂ ಮಾಂಜರಾ ಮಹಿಳಾ ಪಟ್ಟಣ ಸಹಕಾರ ಬ್ಯಾಂಕ್‌ ಅಧ್ಯಕ್ಷೆಶಕುಂತಲಾ ಬೆಲ್ದಾಳೆ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಷ್ಕೃತ ಉಮಾಕಾಂತ ನಾಗಮಾರಪಳ್ಳಿ ಮತ್ತು ಪತ್ರಕರ್ತರಾದ ಗುರುರಾಜ ಕುಲಕರ್ಣಿ, ಶಶಿಕಾಂತ ಬಂಬುಳಗೆ ಅವರನ್ನು ಸನ್ಮಾನಿಸಲಾಯಿತು.

Advertisement

ಸಹಕಾರ ಸಂಘಗಳ ಸಹಾಯಕ ನಿಬಂಧಕ ಸಂಗಮ ಭೀಮರಾವ ಹೈಬತ್ತಿ, ಡಿಸಿಸಿ ಬ್ಯಾಂಕ್‌ ಸಿಇಒ ಮಲ್ಲಿಕಾರ್ಜುನ ಮಹಾಜನ, ಪ್ರಧಾನ ವ್ಯವಸ್ಥಾಪಕರಾದ ವಿಠuಲರೆಡ್ಡಿ ಎಡಮಲ್ಲೆ,ಚನ್ನಬಸಯ್ನಾ ಸ್ವಾಮಿ, ಬಸವರಾಜ ಹೆಬ್ಟಾಳೆ,ಶಿವಶರಣಪ್ಪ ತಗಾರೆ, ಬಗದಲ್‌ನ ಖಾದ್ರಿ ಮತ್ತು ನಿರ್ದೇಶಕರು ಇದ್ದರು. ಕಲ್ಯಾಣಿ ನಿರೂಪಿಸಿ ಉಮಾದೇವಿ ವಂದಿಸಿದರು.

ಅಧಿಕಾರದಾಸೆ ಇಲ್ಲ; ನಿರಾಶಾವಾದಿಯೂ ಅಲ್ಲ :  ದಿ| ನಾಗಮಾರಪಳ್ಳಿ ಅವರು ತೋರಿದ ಮಾರ್ಗದಲ್ಲಿ ಮುನ್ನಡೆದು ಅವರು ಕಟ್ಟಿ ಬೆಳೆಸಿದ ಡಿಸಿಸಿ ಬ್ಯಾಂಕ್‌ನ್ನು ಹೆಮ್ಮರವಾಗಿ ಬೆಳೆಸುವ ಕನಸು ನನ್ನದು. ಅಧಿಕಾರದ ಆಸೆ ನನಗಿಲ್ಲ. ಹಾಗಂತ ನಾನು ನಿರಾಶಾವಾದಿಯೂ ಇಲ್ಲ. ಒಂದು ವೇಳೆ ಅವಕಾಶ ಬಂದರೆ ಬಿಡುವುದೂ ಇಲ್ಲ. ಆದರೆ, ನನಗೆ ದುರಾಸೆ ಇಲ್ಲ. ಸಮಯ ಬಂದಾಗ ನೋಡೋಣ. ಇದಕ್ಕೆ ಎಲ್ಲರ ಸಹಾಯ-ಸಹಕಾರ ಬೇಕು. –ಉಮಾಕಾಂತ ನಾಗಮಾರಪಳ್ಳಿ, ಅಧ್ಯಕ್ಷರು, ಡಿಸಿಸಿ ಬ್ಯಾಂಕ್‌, ಬೀದರ

Advertisement

Udayavani is now on Telegram. Click here to join our channel and stay updated with the latest news.

Next