ಭೋಪಾಲ್: ಭಾರತೀಯ ಜನತಾ ಪಾರ್ಟಿಯ ಹಿರಿಯ ನಾಯಕಿ ಉಮಾಭಾರತಿ ಅವರು ಗುರುವಾರ ಮಧ್ಯಪ್ರದೇಶದ ಓರ್ಚಾ ಪಟ್ಟಣದ ಮದ್ಯದಂಗಡಿಯೊಂದರ ಮುಂದೆ ಬಿಡಾಡಿ ಹಸುಗಳನ್ನು ಕಟ್ಟಿಹಾಕಿ, ಅವುಗಳಿಗೆ ಹುಲ್ಲು ತಿನ್ನಿಸಿ ಜನರು ಮದ್ಯ ತ್ಯಜಿಸಿ ಹಸುವಿನ ಹಾಲು ಕುಡಿಯಬೇಕು ಎಂದು ಕರೆ ನೀಡಿದರು.
ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶ ರಾಜ್ಯದಲ್ಲಿ ಮದ್ಯ ಸೇವನೆಯ ವಿರುದ್ಧದ ಅಭಿಯಾನದ ನೇತೃತ್ವ ವಹಿಸಿರುವ ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರು, ಸರ್ಕಾರವು ಜನರ ಮದ್ಯಪಾನದ ಅಭ್ಯಾಸವನ್ನು ಉಪಯೋಗ ಮಾಡಿಕೊಳ್ಳಬಾರದು ಎಂದರು.
ಇದನ್ನೂ ಓದಿ:ಹಾಲಿನ ದರ ಹೆಚ್ಚಳ ಮಾಡಿದ ಅಮುಲ್: ಹೊಸ ದರಗಳು ಇಂದಿನಿಂದಲೇ ಜಾರಿಗೆ
ದೇವಾಲಯಗಳು ಮತ್ತು ಅರಮನೆಗಳಿಗೆ ಹೆಸರುವಾಸಿಯಾದ ನಿವಾರಿ ಜಿಲ್ಲೆಯ ಓರ್ಚಾ ಪಟ್ಟಣದಲ್ಲಿ ಐಎಂಎಫ್‌ಎಲ್ ಮಾರಾಟ ಮಾಡುವ ಅಂಗಡಿಯ ಮುಂದೆ ಹಸುಗಳನ್ನು ಕಟ್ಟಿ ಹಾಕಿದರು. ಬಳಿಕ ‘ಶರಾಬ್ ನಹಿ, ದೂದ್ ಪಿಯೋ (ಮದ್ಯವಲ್ಲ, ಹಾಲು ಕುಡಿಯಿರಿ) ಎಂಬ ಘೋಷಣೆಯನ್ನು ಕೂಗಿದರು.
ಕಳೆದ ವರ್ಷ ಜೂನ್ ನಲ್ಲಿ ಇದೇ ಮದ್ಯದಂಗಡಿಗೆ ಉಮಾ ಭಾರತಿ ಅವರು ಹಸುವಿನ ಸಗಣಿ ಎಸೆದಿದ್ದರು. 2022 ರ ಮಾರ್ಚ್ ನಲ್ಲಿ ಭೋಪಾಲ್ ನ ಮದ್ಯದ ಅಂಗಡಿಯೊಂದಕ್ಕೆ ಕಲ್ಲು ತೂರಿದ್ದರು.
ಜನರ ಕುಡಿತದ ಸಮಸ್ಯೆಗೆ ತಾವೂ ಸ್ವಲ್ಪ ಮಟ್ಟಿಗೆ ಜವಾಬ್ದಾರರು ಎಂದು ಉಮಾ ಭಾರತಿ ಹೇಳಿದರು 2003 ರ ವಿಧಾನಸಭಾ ಚುನಾವಣೆಯಲ್ಲಿ ತಾನು ಬಿಜೆಪಿಗಾಗಿ ಮತಯಾಚನೆ ಮಾಡಿದ್ದನ್ನು ನೆನಪಿಸಿಕೊಂಡರು. ಅಂದಿನಿಂದ 2018-2020 ರಲ್ಲಿ 15 ತಿಂಗಳುಗಳನ್ನು ಹೊರತುಪಡಿಸಿ ಪಕ್ಷವು ಮಧ್ಯ ಪ್ರದೇಶದಲ್ಲಿ ಅಧಿಕಾರದಲ್ಲಿದೆ