Advertisement

ಬೆಂಗಳೂರು ಅಲ್ಟ್ರಾ ರನ್ನಿಂಗ್‌ ಮ್ಯಾರಥಾನ್‌ ಮುಂದೂಡಿಕೆ

09:27 PM Apr 17, 2020 | Team Udayavani |

ಬೆಂಗಳೂರು: ಉದ್ಯಾನನಗರಿಯಲ್ಲಿ ನಡೆಯಬೇಕಿದ್ದ ಭಾರತದ ಮೊದಲ ಅಲ್ಟ್ರಾ ರನ್ನಿಂಗ್‌ ಚಾಂಪಿಯನ್‌ಶಿಪ್‌ ಕೋವಿಡ್ 19 ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿದೆ.

Advertisement

ಸಾಂಪ್ರದಾಯಿಕ ಮ್ಯಾರಥಾನ್‌ ರೇಸ್‌ಗಿಂತ ಭಿನ್ನವಾಗಿ ಆಯೋಜನೆಗೊಂಡಿರುವ ಈ ರೇಸ್‌ ಭಾರೀ ಕುತೂಹಲ ಮೂಡಿಸಿತ್ತು. ಜು. 18, 19ರಂದು ರೇಸ್‌ ನಡೆಸುವುದಾಗಿ ದಿನಾಂಕ ನಿಗದಿಯಾಗಿತ್ತು. 50 ಕಿ.ಮೀ., 100 ಕಿ.ಮೀ ಹಾಗೂ ಅದಕ್ಕಿಂತಲೂ ಹೆಚ್ಚಿನ ದೂರವನ್ನು ಕ್ರಮಿಸುವ ಗುರಿಯನ್ನು ಓಟಗಾರರಿಗೆ ನೀಡುವುದಾಗಿ ಹೇಳಲಾಗಿತ್ತು. ಅಂತಾರಾಷ್ಟ್ರೀಯ ಅಲ್ಟ್ರಾ ರನ್ನರ್ ಸಂಸ್ಥೆ (ಐಎಯು) ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, “ಭಾರತದಲ್ಲಿ ಲಾಕ್‌ಡೌನ್‌ ಆಗಿರುವ ಹಿನ್ನೆಲೆಯಲ್ಲಿ ಕೂಟವನ್ನು ಮುಂದೂಡಲಾಗಿದೆ. ಹೀಗಾಗಿ ರೇಸ್‌ನ ದಿನಾಂಕವನ್ನು ಮುಂದೂಡಲು ನಿರ್ಧರಿಸಲಾಗಿದೆ, ಶೀಘ್ರವೇ ಮುಂದಿನ ದಿನಾಂಕವನ್ನು ಪ್ರಕಟಿಸಲಾಗುವುದು’ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next