Advertisement

Ullur-74: ಗೃಹಿಣಿ ಆತ್ಮಹತ್ಯೆ

08:54 PM Sep 10, 2024 | Team Udayavani |

ಸಿದ್ದಾಪುರ: ಉಳ್ಳೂರು-74 ಗ್ರಾಮದ ದೊಡ್ಮನೆ ಸುನಿತಾ(42) ಅವರು ಮಾನಸಿಕ ಖಾಯಿಲೆಯಿಂದ ಬಳುತ್ತಿದ್ದು, ಇದರಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸೆ.9ರಂದು ವಾರಾಹಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡರು.

Advertisement

ಸೆ. 8ರ ರಾತ್ರಿ ಊಟ ಮಾಡಿ ಮಲಗಿದ್ದ ಸುನಿತಾ ಅವರು ಮರುದಿನ ಬೆಳಗ್ಗೆ ಅವರು ಕಾಣದಿದ್ದಾಗ ಹುಡುಕಾಡಿದ್ದಾಗ, ವಾರಾಹಿ ಕಾಲುವೆಯ ಸಿಮೆಂಟ್‌ ದಂಡೆಯ ಮೇಲೆ ಸುನಿತಾ ಅವರ ಮೃತ ಪತ್ತೆಯಾಗಿದೆ.

ಹಿಂದೆಯೂ ಎರಡು-ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪುತ್ರ ಸುಮಂತ್‌(20) ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next