Advertisement

Someshwara ಪುರಸಭೆ ಚುನಾವಣಾ ಫಲಿತಾಂಶ ; ದಂಪತಿ ಅಭ್ಯರ್ಥಿಗಳಿಗೆ ಸಿಹಿ-ಕಹಿ

11:29 AM Dec 30, 2023 | Team Udayavani |

ಉಳ್ಳಾಲ: ಸೋಮೇಶ್ವರ ಪುರಸಭೆಯ ಮತ ಎಣಿಕೆ ಕಾರ್ಯ ಡಿ.30ರ ಶನಿವಾರ ನಡೆದಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಾಗಿ ಎರಡು ವಾರ್ಡ್ ಗಳಲ್ಲಿ ಸ್ಪರ್ಧಿಸಿದ್ದ ದಂಪತಿಗಳಲ್ಲಿ ಪತ್ನಿ ಜಯಶಾಲಿಯಾದರೆ, ಇನ್ನೊಂದು ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಪತಿ ಒಂದು ಮತದ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ.

Advertisement

ಒಂದನೇ ಮುಂಡೋಳಿ ವಾರ್ಡ್ ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಮೀನಾ ಬಶೀರ್, ಬಿಜೆಪಿಯ ಅಭ್ಯರ್ಥಿ ಸುನಿತಾ ರಾಜೇಶ್ ಎದುರು 271 ಮತಗಳ ಅಂತರದಲ್ಲಿ ವಿಜಯಿಯಾಗಿದ್ದಾರೆ.

2ನೇ ಪ್ರಕಾಶ್ ನಗರ ವಾರ್ಡ್ ನಲ್ಲಿ ಸ್ಪರ್ಧಿಸಿದ್ದ ಅಮೀನಾ ಬಶೀರ್ ಪತಿ ಬಶೀರ್ ಮುಂಡೋಳಿ, ಬಿಜೆಪಿಯ ಯಶವಂತ್ ಪ್ರಕಾಶ್ ನಗರ ಎದುರು ಒಂದು ಮತಗಳ ಅಂತರದಲ್ಲಿ ಸೋಲು ಅನುಭವಿಸಿದ್ದಾರೆ. ಬಶೀರ್ ಸೋಮೇಶ್ವರ ಪಂಚಾಯತ್ ನ ಮಾಜಿ ಸದಸ್ಯರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next