ಉಳ್ಳಾಲ : ಇಲ್ಲಿನ ಅಳೇಕಲದ ಜಾರ ಹೌಸ್ ನಿವಾಸಿ ಸೈಯದ್ ಮುಹಮ್ಮದ್ ಸಲೀಂ ತಂಙಳ್ (31) ಮಂಗಳವಾರ ಮಧ್ಯಾಹ್ನ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಅವಿವಾಹಿತರಾಗಿದ್ದರು. ಕೆಲವು ತಿಂಗಳ ಹಿಂದೆ ಅನಾರೋಗ್ಯಕ್ಕೀಡಾಗಿದ್ದ ಇವರನ್ನು ಅಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ದಿನಪತ್ರಿಕೆಯೊಂದರ ಮಾಜಿ ಉದ್ಯೋಗಿಯಾಗಿದ್ದವರು ಬಳಿಕ ವಿದೇಶದಲ್ಲಿ ಉದ್ಯೋಗದಲ್ಲಿದ್ದರು. ಕೋವಿಡ್ ಬಳಿಕ ಊರಿಗೆ ವಾಪಸ್ಸಾಗಿ , ತಮ್ಮ ಹವ್ಯಾಸಿ ಬೈಕ್ ಪ್ರಯಾಣ ಮುಂದುವರಿಸಿದ್ದರು. ದೇಶ, ವಿದೇಶಗಳಿಗೆ ಬುಲೆಟ್‌ನಲ್ಲೇ ಸಾವಿರಾರು ಕಿ.ಮೀ. ಏಕಾಂಗಿಯಾಗಿ ಸಂಚರಿಸಿ ಗಮನ ಸೆಳೆದಿದ್ದರು. ಮಂಗಳೂರು ಬುಲ್ಸ್ ಕ್ಲಬ್ ಸದಸ್ಯರಾಗಿದ್ದ ಸಯ್ಯದ್ ಮುಹಮ್ಮದ್ ಸಲೀಂ ತಂಞಳ್ 39 ದಿನಗಳಲ್ಲಿ ಭಾರತ ಸೇರಿ ಬಾಂಗ್ಲಾದೇಶ, ನೇಪಾಳ, ಬೂತಾನ್ ಒಟ್ಟು ಮೂರು ದೇಶಗಳಿಗೆ 12,635 ಕಿ.ಮೀ ಬೈಕ್ ಪ್ರಯಾಣದ ಮೂಲಕ ದಾಖಲೆ ಸೃಷ್ಟಿಸಿದವರು.
29 ರ ಹರೆಯದಲ್ಲೇ ಬೈಕ್ ರೈಡ್ ಹವ್ಯಾಸ ಬೆಳೆಸಿಕೊಂಡಿದ್ದ ಸಲೀಂ, 2020 ರ ಜ.8 ರಂದು ಪ್ರಯಾಣ ಮಂಗಳೂರಿನಿಂದ ಬೆಳೆಸಿ ಫೆ.15 ರಂದು ವಾಪಸ್ಸಾಗಿದ್ದರು.
2018 ರಲ್ಲಿ 38 ಗಂಟೆಗಳ ಮಂಗಳೂರು ಟು ಮುಂಬೈ, 2210 ಕಿ.ಮೀ ಹಾಗೂ ಅದೆ ವರ್ಷದ ಆಗಸ್ಟ್ ನಲ್ಲಿ ಹೈದರಾಬಾದ್ ಗೆ ನಾಲ್ಕು ದಿನಗಳಲ್ಲಿ 2500 ಕಿ.ಮೀ ಬೈಕಿನಲ್ಲಿ ಪ್ರಯಾಣ ನಡೆಸಿದ್ದರು.
ಇದನ್ನೂ ಓದಿ : ಮೋಟೋ ಜಿ82 5ಜಿ ಬಿಡುಗಡೆ; ಜೂ. 14ರಿಂದ ಮಾರುಕಟ್ಟೆಯಲ್ಲಿ ಲಭ್ಯ