Advertisement
ಇಲ್ಲಿನ ಒಟ್ಟು 31 ಸ್ಥಾನಗಳ ಪೈಕಿ ಬಹುಮತಕ್ಕೆ 16 ಸ್ಥಾನಗಳ ಆವಶ್ಯಕತೆಯಿದೆ. ಕಾಂಗ್ರೆಸ್ 13 ಸ್ಥಾನಗಳನ್ನು ಪಡೆದು ಅತೀ ದೊಡ್ಡ ಪಕ್ಷವಾಗಿ ಮೂಡಿ ಬಂದರೂ ಮೂರು ಸ್ಥಾನಗಳ ಕೊರತೆಯಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ನಗರಸಭೆಯ ಎಲ್ಲ 31 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ 13 ಸ್ಥಾನಗಳನ್ನು ಮಾತ್ರ ಪಡೆದಿದ್ದು, ಬಿಜೆಪಿ 6 ಸ್ಥಾನಗಳಲ್ಲಿ , ಜೆಡಿಎಸ್ 4 ಸ್ಥಾನಗಳಲ್ಲಿ ಜಯಿಸಿದೆ. ಎಸ್‌ಡಿಪಿಐ ಈ ಬಾರಿ 6 ಸ್ಥಾನಗಳು° ಪಡೆದು ಗಮನಾರ್ಹ ಸಾಧನೆ ಮಾಡಿದರೆ, ಒಂದು ಬಂಡಾಯ ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿಗಳು ಎರಡು ಸ್ಥಾನ ಪಡೆದುಕೊಂಡಿದ್ದರು.
ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಚ್ಚಳವಾಗಿದೆ. ಈಗಾ ಗಲೇ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೆಸ್ ಬೆಂಬಲಿಗರೇ ಆಗಿರುವು ದರಿಂದ ಅವರು ಕಾಂಗ್ರೆಗೆ ಸೇರ್ಪಡೆಗೊಂಡರೆ 15 ಸ್ಥಾನ ಗಳಾಗಲಿದ್ದು. ಸಚಿವ ಯು.ಟಿ. ಖಾದರ್ ಅವರಿಗೆ ಮತದಾನ ಮಾಡುವ ಹಕ್ಕು ಇರುವುದರಿಂದ 16 ಸ್ಥಾನಗಳನ್ನು ಪಡೆದು ಅಧಿಕಾರ ನಡೆಸಲು ಅವಕಾಶವಿದೆ. ಇನ್ನೊಂದು ದಾರಿಯಲ್ಲಿ ರಾಜ್ಯದಲ್ಲಿರುವಂತೆ ಜೆಡಿಎಸ್‌ನೊಂದಿಗೆ ಮೈತ್ರಿ ಮುಂದುವರಿಸಿದರೆ ಜೆಡಿಎಸ್‌ನ ಬೆಂಬ ಲ ಪಡೆ ಯುವ ಸಾಧ್ಯತೆಯಿದ್ದು, ಕಾಂಗ್ರೆಸ್ ಎಸ್‌ಡಿಪಿಐನೊಂದಿಗೆ ಅಥವಾ ಬಿಜೆಪಿಯನ್ನು ಸಮಾನ ಅಂತರದಲ್ಲಿ ದೂರ ಇಡುವ ಸಾಧ್ಯತೆ ಹೆಚ್ಚಿದೆ. ಜೆಡಿಎಸ್ ಕಾಂಗ್ರೆಸ್ ಆಡಳಿತಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ಕಾದು ನೋಡುವ ತಂತ್ರವನ್ನು ಅನುಸರಿಸಿದೆ.
Related Articles
Advertisement
ಕಾಂಗ್ರೆಸ್‌ಗೆ ಮುಳವಾದ ವಾರ್ಡ್ ಮರುವಿಂಗಡಣೆಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ನಾಲ್ಕು ವಾರ್ಡ್‌ಗಳನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿದಾಗ ಎಂಟು ವಾರ್ಡ್‌ಗಳಾಗಿ ಮರು ವಿಂಗಡಣೆ ಮಾಡಿದ್ದು, ಇವುಗಳಲ್ಲಿ ನಾಲ್ಕು ವಾರ್ಡ್‌ಗಳಲ್ಲಿ ಮಾತ್ರ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿದ್ದು, ಉಳಿದ ನಾಲ್ಕು ವಾರ್ಡ್ ಗಳಲ್ಲಿ ಎರಡು ಜೆಡಿಎಸ್, ಒಂದು ಎಸ್‌ಡಿಪಿಐ ಮತ್ತು ಒಂದು ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಪಾಲಾಗಿದೆ. ಈ ಬಾರಿ ಜೆಡಿಎಸ್ ಮತ್ತು ಎಸ್‌ಡಿಪಿಐ ಪ್ರಬಲ ಹೋರಾಟ ಕಾಂಗ್ರೆಸ್ ಬಹುಮತ ಸಂಖ್ಯೆ ತಲುಪಲು ಮುಳುವಾಗಿತ್ತು. 2018ರ ಅಕ್ಟೋಬರ್‌ನಲ್ಲಿ ಸ್ಥಳಿಯಾಡಳಿತ ಚುನಾವಣೆ ನಡೆದು ಸೆ. 3ರಂದು ಫಲಿತಾಂಶ ಪ್ರಕಟವಾಗಿತ್ತು. ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಉಳ್ಳಾಲ ನಗರಸಭೆಗೆ ಹಿಂದುಳಿದ ವರ್ಗ 2ಬಿ ಮತ್ತು 2ಎ ಮೀಸಲಾತಿ ಬಂದಿತ್ತು. ಆದರೆ ರಾಜ್ಯದಲ್ಲಿ 10 ನಗರಸಭೆಯಲ್ಲಿ ಮೀಸಲಾತಿ ವಿರುದ್ಧ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದರು. ಇದೇ ಸಂದರ್ಭ ಪಾಲಿಕೆ ಯಿಂದಲೂ ಅಧ್ಯಕ್ಷ, ಉಪಾಧ್ಯಕ್ಷ ವಿಚಾರದಲ್ಲಿ ಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದರೂ ಈ ತಡೆಯಾಜ್ಞೆ ಜೂ. 2ಕ್ಕೆ ತೆರವಾಗಿದೆ. ಈಗ ನಗರಸಭೆಯ ತಡೆಯಾಜ್ಞೆ ತೆರವಾಗುವ ಆಶಾವಾದವನ್ನು ಕೌನ್ಸೆಲರ್‌ಗಳು ವ್ಯಕ್ತಪಡಿಸಿದ್ದಾರೆ. 20 ವರ್ಷಗಳ ಬಳಿಕ ಅತಂತ್ರ
1997ರಲ್ಲಿ ಉಳ್ಳಾಲ ನ.ಪಂ.ಆಗಿ ಮೇಲ್ದರ್ಜೆಗೇರಿದ ಬಳಿಕ ನಡೆದ ಪ್ರಥಮ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತದ ಕೊರತೆಯಿಂದ ಅತಂತ್ರ ಸ್ಥಿತಿ ನಿರ್ಮಾಣವಾಗಿತ್ತು. ಈಗ ನಾಲ್ಕು ಸ್ಥಾನಗಳನ್ನು ಪಡೆ ದಿದ್ದ ಜೆಡಿಎಸ್ ಕಾಂಗ್ರೆಸ್‌ಗೆ ಬೆಂಬಲ ನೀಡಿ ಉಪಾಧ್ಯಕ್ಷ ಸ್ಥಾ® ವನ್ನು ಅಲಂಕರಿಸಿತ್ತು. ಇದೀಗ ಅದೇ ವಾತಾವರಣ ನಿರ್ಮಾಣ ವಾಗಿದ್ದು, 1997ರ ಘಟನೆ ಮರುಕಳಿಸುವ ಸಾಧ್ಯತೆ ಇದೆ. ಮೀಸಲಾತಿ ಅನ್ವಯ ಆಡಳಿತ ರಚನೆ
ಕೋರ್ಟ್‌ನಲ್ಲಿ ಮೀಸಲಾತಿ ವಿಚಾರದಲ್ಲಿ ತಡೆಯಾಜ್ಞೆ ಇರುವುದರಿಂದ ಉಳ್ಳಾಲ ನಗರಸಭೆಯಲ್ಲಿ ಹೊಸ ಆಡಳಿತ ರಚನೆಗೆ ತಡೆ ಯಾಗಿದೆ. ಮೀಸಲಾತಿ ವಿಚಾರದಲ್ಲಿ ಅಲ್ಲಿ ಯಾವುದೇ ಸಮಸ್ಯೆ ಇಲ್ಲ ಕಾಂಗ್ರೆಸ್‌ನಲ್ಲಿ ಎಲ್ಲ ವರ್ಗದ ಸದಸ್ಯರಿರುವುದರಿಂದ ಸರಕಾರ ನೀಡಿ ಮೀಸಲಾ ತಿಯಂತೆ ಆಡಳಿತ ರಚನೆಯಾಗಲಿದೆ.
– ಯು.ಟಿ. ಖಾದರ್, ಜಿಲ್ಲಾ ಉಸ್ತುವಾರಿ ಸಚಿವರು ಡಿಸಿ ಮಾರ್ಗದರ್ಶನದಲ್ಲಿ ಆಡಳಿತ
ರಾಜ್ಯದಲ್ಲಿ ಕಳೆದ 2018ರ ಸಪ್ಟೆಂಬರ್‌ನಿಂದ ಸ್ಥಳಿಯಾಡಳಿತ ಸಂಸ್ಥೆಗಳ ಅಧ್ಯಕ್ಷ , ಉಪಾಧ್ಯಕ್ಷರ ಆಯ್ಕೆಯ ಕುರಿತು ಕೋರ್ಟ್ ತಡೆಯಾಜ್ಞೆ ಯಿರುವುದರಿಂದ ಉಳ್ಳಾಲದಲ್ಲೂ ನೂತನ ಆಡಳಿತ ಅಧಿಕಾರಕ್ಕೆ ಬಂದಿಲ್ಲ. ಕಳೆದ 9 ತಿಂಗಳಿನಿಂದ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಉಳ್ಳಾಲ ನಗರಸಭೆಯ ಎಲ್ಲ ಕಾರ್ಯಗಳು ನಡೆಯುತ್ತಿದ್ದು, ಹೊಸ ಆಡಳಿತ ಬರುವವರೆಗೆ ಯಥಾಸ್ಥಿತಿ ಮುಂದುವರೆಯಲಿದೆ.
– ಶ್ರೀನಿವಾಸ ಮೂರ್ತಿ, ಮುಖ್ಯಾಧಿಕಾರಿ, ಉಳ್ಳಾಲ ನಗರಸಭೆ