ಮಂಗಳೂರು ಕೆಂಜಾರು ಮೂಲದ ಕುಟುಂಬವೊಂದರ ಸದಸ್ಯರು ರಕ್ಷಣೆಗೊಳಗಾದವರು.
Advertisement
ಮಂಗಳೂರಿಗೆ ಆಗಮಿಸಿದ್ದ ಇವರು ಉಳ್ಳಾಲ ದರ್ಗಾಕ್ಕೆ ಆಗಮಿಸಿ ಬಳಿಕ ಮೊಗವೀರಪಟ್ಣ ಬಳಿ ಸಮುದ್ರ ತೀರಕ್ಕೆ ಆಗಮಿಸಿದ್ದು, ಈ ಸಂದರ್ಭದಲ್ಲಿ ತೆರೆಯೊಂದು ಬಡಿದು ಮಕ್ಕಳು ಮತ್ತು ಇಬ್ಬರ ಮಹಿಳೆಯರು ಸಮುದ್ರದ ಅಲೆಯಲ್ಲಿ ಸಿಲುಕಿಕೊಂಡಿದ್ದರು. ತಂಡದಲ್ಲಿದ್ದ ಇತರ ಸದಸ್ಯರು ಬೊಬ್ಬೆ ಹಾಕಿದಾಗ ಸ್ಥಳೀಯ ಜೀವರಕ್ಷಕ ಈಜುಗಾರರ ಸಂಘದ ಸದಸ್ಯರಾದ ಯಶ್ಪಾಲ್ ಕಾಂಚನ್, ವಿಕ್ಕಿ ಪುತ್ರನ್, ಮೋಹನ್ ಕೋಟ್ಯಾನ್, ಹರೀಶ್ ಕಾಂಚನ್, ಶಂಕರ ಬಂಗೇರ, ರವಿ ಪುತ್ರನ್, ಕುನಾಲ್, ಕರಾವಳಿ ನಿಯಂತ್ರಣ ದಳದ ಪ್ರಸಾದ್ ಸುವರ್ಣ ಮತ್ತು ಯೋಗೀಶ ಅಮೀನ್ ಮತ್ತು ಇತರರು ಸೇರಿ ಅಪಾಯದಲ್ಲಿದ್ದ ಎಲ್ಲರನ್ನೂ ರಕ್ಷಿಸಿದರು. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ.