Advertisement

Ullal ಮದನಿ ನಗರ ದುರಂತ: ಮೃತರ ಕುಟುಂಬಕ್ಕೆ ಪರಿಹಾರ ವಿತರಣೆ

01:30 AM Jul 01, 2024 | Team Udayavani |

ಉಳ್ಳಾಲ: ಮದನಿ ನಗರದಲ್ಲಿ ನಾಲ್ವರ ಸಾವಿಗೆ ಸರಕಾರ ಪರಿಹಾರ ನೀಡಿದರೂ ಆ ಕುಟುಂ ಬದ ನೋವನ್ನು ಯಾರಿಗೂ ಪರಿಹರಿಸಲು ಸಾಧ್ಯವಿಲ್ಲ. ದುರಂತ ನಡೆದಾಗ ಇಲ್ಲಿನ ಜನತೆ, ಅಧಿಕಾರಿಗಳ ಸ್ಪಂದನೆ ಶ್ಲಾಘನೀಯವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಎಲ್ಲರ ಕರ್ತವ್ಯ ಎಂದು ವಿಧಾನಸಭಾ ಸ್ಪೀಕರ್‌ ಯು.ಟಿ. ಖಾದರ್‌ ತಿಳಿಸಿದರು.

Advertisement

ಅವರು ಮದನಿ ನಗರ ಜುಮ್ಮಾ ಮಸೀದಿಯ ಮದರಸದಲ್ಲಿ ಪ್ರಾಕೃತಿಕ ವಿಕೋಪದಲ್ಲಿ ಮನೆಯ ಆವರಣ ಗೋಡೆ ಕುಸಿದು ನಾಲ್ವರು ಮೃತಪಟ್ಟ ಕುಟುಂಬದ ಸದಸ್ಯೆ ಫಾತಿಮಾ ರಶೀನಾ ಅವರಿಗೆ 20 ಲಕ್ಷ ರೂ.ಯ ಚೆಕ್‌ನ ಪ್ರಮಾಣ ಪತ್ರ ವಿತರಿಸಿ ಮಾತನಾಡಿ, ಪರಿಹಾರ ಮೊತ್ತವನ್ನು ವಿತರಿಸಲು ನಾನೇ ಬರಬೇಕಿರಲಿಲ್ಲ. ಇದೊಂದು ದುಃಖಕರ ಸಂಗತಿಯಾದರೂ ಘಟನೆಯ ಸಂದರ್ಭದಲ್ಲಿ ಕಾರ್ಯಾಚರಣೆಯಲ್ಲಿ ಶ್ರಮಿಸಿದ ಪ್ರತಿಯೊಬ್ಬರಿಗೂ ಕೃತಜ°ತೆ ಸಲ್ಲಿಸಬೇಕಾಗಿದೆ. ಈಗಾಗಲೇ ವಿಕೋಪ ದಲ್ಲಿ ಸಾವನ್ನಪ್ಪಿದವರ ಪರಿಹಾರ ನೀಡಲಾಗಿದೆ. ಮನೆಯ ಪರಿಹಾರವನ್ನು ಕಂದಾಯ ಇಲಾಖೆ ಅಧಿಕಾರಿಗಳು ತ್ವರಿತವಾಗಿ ವಿತರಿಸಲಿದ್ದಾರೆ ಎಂದರು.

ಉಳ್ಳಾಲ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಶೈಲಾ ಕಾರಗಿ, ತಹಶೀಲ್ದಾರ್‌ ಪ್ರದೀಪ್‌ ಕುರ್ಡೇಕರ್, ಕಂದಾಯ ನಿರೀಕ್ಷಕ ಪ್ರಮೋದ್‌, ಮುನ್ನೂರು ಗ್ರಾಮ ಪಂಚಾಯತ್‌ ಅಧ್ಯಕ್ಷೆ ವಿಶಾಲಾಕ್ಷಿ, ಉಪಾಧ್ಯಕ್ಷ ಮಹಾಬಲ ದೆಪ್ಪೆಲಿಮಾರ್‌, ಸದಸ್ಯರಾದ ಬಾಬು ಶೆಟ್ಟಿ ದೇಸೋಡಿ, ಮಹಮ್ಮದ್‌ ಸಿರಾಜ್‌, ಅಝೀಝ್ ಆರ್‌.ಕೆ. ಸಿ., ರೆಹೆನಾ ಭಾನು, ಆರಿಫ್‌, ಹಸೈನಾರ್‌, ಮಾಜಿ ಸದಸ್ಯರಾದ ಇಸ್ಮಾಯಿಲ್‌, ಪುತ್ತುಬಾವ, ಜಮಾಅತ್‌ ಅಧ್ಯಕ್ಷ ಅಝೀಝ್, ನೌಶೀರ್‌, ಸಾದಿಕ್‌ ಎಂ..ಕೆ. ಫಾರೂಕ್‌, ಜುನೈದ್‌, ಪಂಚಾಯತ್‌ ಆಡಳಿತಾಧಿಕಾರಿ ರೇಷ್ಮಾ ದೇವ್‌, ನವ್ಯ ರಾವ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next