Advertisement
ಉಳಾಯಿಬೆಟ್ಟು ಗ್ರಾ.ಪಂ.ನ ದ್ವಿತೀಯ ಹಂತದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಸಾಮಾಜಿಕ ಪರಿಶೋ ಧನ ವಿಶೇಷ ಗ್ರಾಮ ಸಭೆಯು ಪಂ.ಸಭಾಭವನದಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.
ತಾಲೂಕು ಸಂಯೋಜಕಿ ಪವಿತ್ರಾ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಪರಿಶೋಧನೆಯಲ್ಲಿ ಉದ್ಯೋಗ ಚೀಟಿಯಲ್ಲಿ ವಿವರ ನಮೂದಿಸಿಲ್ಲ. ಉದ್ಯೋಗ ಚೀಟಿ ನವೀಕರಿಸಿಲ್ಲ. ಎಂಜಿನಿಯರ್ ದಿನಾಂಕ ನಮೂದಿಸಿಲ್ಲ. ಅಧ್ಯಕ್ಷ ಹಾಗೂ ಪಿಡಿಒ ಸಹಿ ಇಲ್ಲ. 8 ಕಡೆಗಳಲ್ಲಿ ನಾಮಫಲಕ ಇಲ್ಲ ಎಂದು ಪವಿತ್ರಾ ತಿಳಿಸಿದರು. 878 ಉದ್ಯೋಗ ಚೀಟಿ ಹೊಂದಿದ್ದಾರೆ. ಅದರಲ್ಲಿ 460 ಸಕ್ರಿಯ ಉದ್ಯೋಗ ಚೀಟಿ ಹೊಂದಿದ್ದಾರೆ. 24 ಗ್ರಾ.ಪಂ. 3 ತೋಟಗಾರಿಕ ಇಲಾಖೆ ಒಟ್ಟು 27 ಕಾಮಗಾರಿಗಳು ನಡೆದಿದೆ. 12 ಕಾಮಗಾರಿಗಳು ಮುಗಿದಿವೆ. ಒಟ್ಟು ರೂ. 1,49,980 ವೆಚ್ಚವಾಗಿದೆ ಎಂದರು.
ತೋಟಗಾರಿಕೆ ಇಲಾಖಾಧಿಕಾರಿ ಪ್ರಕಾಶ್ ಮಾಹಿತಿ ನೀಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಸೌಮ್ಯಾ ಪಂಡಿತ್ ಉಪಸ್ಥಿತರಿದ್ದರು. ಪಿಡಿಒ ರಾಜೇಂದ್ರ ಶೆಟ್ಟಿ ಸ್ವಾಗತಿಸಿ, ಗ್ರಾಮ ಸಂಪನ್ಮೂಲ ವ್ಯಕ್ತಿ ಸುನೀತಾ ನಿರೂಪಿಸಿದರು. ಕಾರ್ಯದರ್ಶಿ ರಾಮಪ್ಪ ವಂದಿಸಿದರು.
Related Articles
ಮಾಹಿತಿ ಕೊರತೆಯಿಂದ ಕೆಲವರಿಗೆ ತೊಂದರೆಯಾಗಿದೆ. ಉದ್ಯೋಗ ಖಾತರಿ ಲಾಭದ ಬಗ್ಗೆ ಇನ್ನೊಬ್ಬರಿಗೆ ಹೇಳಿ ಪ್ರೋತ್ಸಾಹಿಸಬೇಕು. ಹೆಚ್ಚು ಕಾಮಗಾರಿಗಳು ಆಗಬೇಕು. ಪಂ.ನ 14ನೇ ಹಣಕಾಸು ನಿಧಿಯಿಂದ ಹೆಚ್ಚು ಅಭಿವೃದ್ಧಿ ಕಾಮಗಾರಿಗಳು ಸಾಧ್ಯವಿಲ್ಲ.
– ವಸಂತ ಕುಮಾರ್
ಗ್ರಾ.ಪಂ.ಅಧ್ಯಕ್ಷ
Advertisement