ಕೈವ್: ಉಕ್ರೇನ್ ರಾಜಧಾನಿ ಕೈವ್ ಕಡೆಗೆ ಬರುತ್ತಿದ್ದ ರಷ್ಯಾದ ಮಿಲಿಟರಿ ಬೆಂಗಾವಲು ಪಡೆಯನ್ನು ತಡೆಯಲು ಉಕ್ರೇನಿಯನ್ ವ್ಯಕ್ತಿಯೊಬ್ಬರು ಪ್ರಯತ್ನಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಾಸ್ಕೋ ಮತ್ತು ಕೈವ್ ನಡುವಿನ ಉದ್ವಿಗ್ನತೆಯ ನಡುವೆ ಈ ಘಟನೆ ನಡೆದಿದೆ. ರಷ್ಯಾದ ಪಡೆಗಳು ಉಕ್ರೇನಿಯನ್ ರಾಜಧಾನಿಗೆ ಮುತ್ತಿಗೆ ಹಾಕಿದ್ದು, ಭಾರೀ ಹೋರಾಟ ನಡೆಯುತ್ತಿದೆ ಎಂದು ವರದಿಗಳು ಹೇಳಿವೆ.
ವೀಡಿಯೊದಲ್ಲಿ, ಆ ವ್ಯಕ್ತಿ ರಷ್ಯಾದ ಟ್ಯಾಂಕ್‌ಗಳು ಸಾಲುಗಟ್ಟಿ ರಾಜಧಾನಿ ಕೈವ್ ಗೆ ಆಗಮಿಸಿದಾಗ ವ್ಯಕ್ತಿ ಮುಂದೆ ನಿಂತಿರುವುದನ್ನು ಕಾಣಬಹುದು.
ಈತನ್ಮಧ್ಯೆ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾದ ಪಡೆಗಳು ಕೈವ್ ನಗರವನ್ನು ನಾಶ ಮಾಡಲು ಪ್ರಯತ್ನಿಸುತ್ತವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಉಕ್ರೇನ್ ವಿಚಾರದಲ್ಲಿ ಭಾರತದ ವಿದೇಶಾಂಗ ನೀತಿ ವಿಫಲ : ಕಾಂಗ್ರೆಸ್ ಟೀಕೆ
“ನಾನು ಮುಕ್ತವಾಗಿ ಹೇಳಬೇಕಿದೆ. ಈ ರಾತ್ರಿ ಹಗಲಿಗಿಂತಲೂ ಹೆಚ್ಚು ಕಷ್ಟಕರವಾಗಿರುತ್ತದೆ. ನಮ್ಮ ರಾಜ್ಯದ ಅನೇಕ ನಗರಗಳು ದಾಳಿಗೆ ಒಳಗಾಗಿವೆ” ಎಂದು ಝೆಲೆನ್ಸ್ಕಿ ದೇಶವನ್ನುದ್ದೇಶಿಸಿ ವೀಡಿಯೊ ಭಾಷಣದಲ್ಲಿ ಹೇಳಿದರು.
ಎಲ್ಲಿಗೂ ಹೋಗಲ್ಲ: ರಷ್ಯಾದ ಪಡೆಗಳು ಕೀವ್ ನಗರವನ್ನು ಸುತ್ತುವರಿದಿದ್ದರೂ, ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಅಮೆರಿಕ ಸರ್ಕಾರದ ‘ಸ್ಥಳಾಂತರಿಸುವ ಪ್ರಸ್ತಾಪ’ವನ್ನು ತಿರಸ್ಕರಿಸಿದ್ದಾರೆ. ಅಧ್ಯಕ್ಷ ಝೆಲೆನ್ಸ್ಕಿ ತನ್ನ ದೇಶದಲ್ಲೇ ಉಳಿಯಲು ಮತ್ತು ಹೋರಾಡಲು ಇಚ್ಛಿಸಿದ್ದಾರೆ.
“ಹೋರಾಟ ಇಲ್ಲಿದೆ; ನನಗೆ ಮದ್ದುಗುಂಡುಗಳು ಬೇಕು, ಸವಾರಿ ಅಲ್ಲ” ಎಂದು ಝೆಲೆನ್ಸ್ಕಿ ಹೇಳಿದರು ಎಂದು ಅಮೆರಿಕದ ಹಿರಿಯ ಗುಪ್ತಚರ ಮೂಲನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ.
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್ ಸರ್ಕಾರವನ್ನು ಉರುಳಿಸಲು ಮತ್ತು ಅದನ್ನು ತಮ್ಮದೇ ಆದ ಆಡಳಿತದೊಂದಿಗೆ ಸೇರಿಸಲು ನಿರ್ಧರಿಸಿದ್ದಾರೆ ಎಂಬ ಗುಪ್ತಚರ ವರದಿ ಆಧಾರದ ಮೇಲೆ ಝೆಲೆನ್ಸ್ಕಿಗೆ ಅಮೆರಿಕ ಹೇಳಿದೆ.