Advertisement

ರಷ್ಯಾದ ವಿಮಾನವನ್ನು ಹೊಡೆದುರುಳಿಸಿದ ಉಕ್ರೇನಿಯನ್ ಪಡೆಗಳು: ವೀಡಿಯೊ

08:55 AM Mar 06, 2022 | Team Udayavani |

ಕೀವ್: ತನ್ನ ವಾಯುಪಡೆಯು ರಷ್ಯಾದ ಯುದ್ಧ ವಿಮಾನವನ್ನು ಹೊಡೆದುರುಳಿಸಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಟ್ವೀಟ್ ಮಾಡಿದೆ. ಉಕ್ರೇನ್‌ನ ಉತ್ತರ ಭಾಗದಲ್ಲಿರುವ ಚೆರ್ನಿಹಿವ್‌ ನಗರದ ಹೊರವಲಯದಲ್ಲಿ ಶನಿವಾರದಂದು ಈ ಘಟನೆ ನಡೆದಿದೆ.

Advertisement

ಮಾರ್ಚ್ 5 ರ ಶನಿವಾರದಂದು ರಷ್ಯಾದ ಐದು ವಿಮಾನಗಳು ಮತ್ತು ನಾಲ್ಕು ಹೆಲಿಕಾಪ್ಟರ್‌ ಗಳನ್ನು ಹೊಡೆದುರುಳಿಸಲಾಗಿದೆ ಎಂದು ಉಕ್ರೇನಿಯನ್ ವಾಯುಪಡೆ ಹೇಳಿದೆ. ಒಟ್ಟು 44 ರಷ್ಯಾದ ವಿಮಾನಗಳು ಮತ್ತು ಹೆಲಿಕಾಪ್ಟರ್‌ ಗಳನ್ನು ಉರುಳಿಸಲಾಗಿದೆ ಎಂದು ಉಕ್ರೇನ್ ಹೇಳಿಕೊಂಡಿದೆ.

ಇದನ್ನೂ ಓದಿ:ಉಕ್ರೇನಿನ ಬಂದರಿನಲ್ಲಿ ಸಿಲುಕಿದ್ದಾರೆ 21 ಭಾರತೀಯ ನಾವಿಕರು

ಶನಿವಾರ ರಷ್ಯಾದ ಮೂರು ಹೆಲಿಕಾಪ್ಟರ್‌ ಗಳನ್ನು ಉಕ್ರೇನಿಯನ್ ಪಡೆಗಳು ದೇಶದ ದಕ್ಷಿಣ ಭಾಗದಲ್ಲಿರುವ ಮೈಕೊಲೈವ್ ಪ್ರದೇಶದಲ್ಲಿ ಹೊಡೆದುರುಳಿಸಿದವು ಎಂದು ವರದಿಯಾಗಿದೆ.

Advertisement

ಈತನ್ಮಧ್ಯೆ ಭಾನುವಾರ, ಮಾಸ್ಟರ್‌ ಕಾರ್ಡ್ ಮತ್ತು ವೀಸಾ ಸಂಸ್ಥೆಗಳು ರಷ್ಯಾದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿರುವುದಾಗಿ ಹೇಳಿವೆ. ರಷ್ಯಾದ ಬ್ಯಾಂಕುಗಳು ನೀಡಿದ ಕಾರ್ಡ್‌ಗಳು ಇನ್ನು ಮುಂದೆ ಅದರ ನೆಟ್‌ವರ್ಕ್‌ನಿಂದ ಬೆಂಬಲಿಸುವುದಿಲ್ಲ ಮತ್ತು ದೇಶದ ಹೊರಗೆ ನೀಡಲಾದ ಯಾವುದೇ ಕಾರ್ಡ್ ರಷ್ಯಾದ ಮಳಿಗೆಗಳು ಅಥವಾ ಎಟಿಎಂಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ ಎಂದು ಮಾಸ್ಟರ್‌ ಕಾರ್ಡ್ ಹೇಳಿದೆ.

“ನಾವು ಈ ನಿರ್ಧಾರವನ್ನು ಲಘುವಾಗಿ ತೆಗೆದುಕೊಳ್ಳುವುದಿಲ್ಲ” ಎಂದು ಮಾಸ್ಟರ್‌ ಕಾರ್ಡ್ ಹೇಳಿಕೆಯಲ್ಲಿ ತಿಳಿಸಿದೆ. ಗ್ರಾಹಕರು, ಪಾಲುದಾರರು ಮತ್ತು ಸರ್ಕಾರಗಳೊಂದಿಗೆ ಚರ್ಚಿಸಿದ ನಂತರ ಈ ಕ್ರಮವನ್ನು ಮಾಡಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next