Advertisement
ಇದನ್ನೂ ಓದಿ:ರಷ್ಯಾ- ಉಕ್ರೇನ್ ಯುದ್ಧ: ರಷ್ಯಾ ಶೆಲ್ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ಸಾವು
Related Articles
Advertisement
20ನೇ ಶತಮಾನದಲ್ಲಿ ಅಡಾಲ್ಫ್ ಹಿಟ್ಲರ್ ಎರಡನೇ ಜಾಗತಿಕ ಯುದ್ಧ ಘೋಷಿಸಿದ್ದ ವೇಳೆ ಉಕ್ರೇನ್ ನ ಕೀವ್ ಮತ್ತು ಖಾರ್ಕಿವ್ ನಗರ ಬಾಂಬ್ ದಾಳಿಗೆ ನಲುಗಿ ಹೋಗಿದ್ದವು. 1941ರಲ್ಲಿ ಕೀವ್ ಮತ್ತು ಖಾರ್ಕಿವ್ ನಗರ ನಾಝಿ ಜರ್ಮನಿ ಪಡೆಗಳ ದಾಳಿಯಲ್ಲಿ ಭಾರೀ ಪ್ರಮಾಣದ ಸಾವು, ನೋವುಗಳಿಗೆ ಸಾಕ್ಷಿಯಾಗಿತ್ತು.
1941ರ ಸೆಪ್ಟೆಂಬರ್ ನಲ್ಲಿ ಜರ್ಮನಿಯ ಪಡೆಗಳು ಕೀವ್ ನಗರದೊಳಕ್ಕೆ ಪ್ರವೇಶಿಸಿ ಎರಡು ದಿನಗಳಲ್ಲಿ 30,000ಕ್ಕೂ ಅಧಿಕ ಜನರನ್ನು ಹತ್ಯೆಗೈದಿತ್ತು. ನಂತರದ ದಿನಗಳಲ್ಲಿ ಜರ್ಮನಿ ಸೈನಿಕರು ಸಾವಿರಾರು ಜನರ ಮಾರಣ ಹೋಮ ನಡೆಸಿತ್ತು ಎಂದು ವರದಿ ತಿಳಿಸಿದೆ.
ಈ ಸಂದರ್ಭದಲ್ಲಿ ಜರ್ಮನ್ ಪಡೆ ಕೇವಲ ನಾಲ್ಕೇ ದಿನಗಳಲ್ಲಿ ಖಾರ್ಕಿವ್ , ಕೀವ್ ನಗರವನ್ನು ತನ್ನ ವಶಕ್ಕೆ ಪಡೆದಿತ್ತು. ಇದೀಗ 1941ರ ಎರಡನೇ ವಿಶ್ವಯುದ್ಧದ ಸಂದರ್ಭದ ಸಂಕಷ್ಟವನ್ನೇ ಉಕ್ರೇನ್ 2022ರಲ್ಲಿ ಎದುರಿಸುವಂತಾಗಿದೆ ಎಂದು ವರದಿ ವಿಶ್ಲೇಷಿಸಿದೆ.
ಉಕ್ರೇನ್ ಅಧ್ಯಕ್ಷ ಝೆಲೆನ್ ಸ್ಕಿ ಶುಕ್ರವಾರ ತಮ್ಮ ಭಾಷಣದಲ್ಲಿ, ಎರಡನೇ ಜಾಗತಿಕ ಯುದ್ಧದ ರೀತಿ ಮತ್ತೆ ಕದನ ಮುಂದುವರಿಸಬೇಡಿ, ಇಂದು ರಾತ್ರಿ ಕೀವ್ ನಗರದಲ್ಲಿ ಭಾರೀ ಬಾಂಬ್ ಗಳ ಸದ್ದು ಕೇಳಿಸಿದೆ. ಇದು 1941ರ ಎರಡನೇ ಮಹಾಯುದ್ಧದಂತೆ ಇದೆ. ದಯವಿಟ್ಟು ರಷ್ಯಾದ ಪ್ರಜೆಗಳು ಇದನ್ನು ವಿರೋಧಿಸಬೇಕು. ನೀವು ಕೇಳಿಸಿಕೊಳ್ಳುತ್ತಿದ್ದೀರಿ..ನಾವು ನಿಮ್ಮವರೇ…ಯುದ್ಧದಿಂದ ಆಗುವ ಜೀವಹಾನಿ ತಪ್ಪಿಸಿ ಎಂದು ಮನವಿ ಮಾಡಿಕೊಂಡಿದ್ದರು.