Advertisement

ಉಕ್ರೇನ್‌ ಸೇನೆ ಸೇರಿ ಪ್ರಾಣ ಬಿಟ್ಟ ನಟ ಪಾಷಾ ಲೀ

06:45 PM Mar 11, 2022 | Team Udayavani |

ರಷ್ಯಾ ಉಕ್ರೇನ್‌ನ ನಗರಗಳ ಮೇಲೆ ಸತತವಾಗಿ ದಾಳಿ ನಡೆಸುತ್ತಿದೆ. ರಷ್ಯಾ ವಿರುದ್ಧ ಹೋರಾಡುವುದಕ್ಕೆಂದು ಉಕ್ರೇನ್‌ನ ನಾಗರಿಕರು ಸ್ವಯಂ ಪ್ರೇರಿತವಾಗಿ ಉಕ್ರೇನ್‌ ಸೇನೆ ಸೇರುತ್ತಿದ್ದಾರೆ. ಅದರಂತೆ ಸೇನೆ ಸೇರಿದ್ದ 33 ವರ್ಷದ ನಟ ಪಾಷಾ ಲೀ ರಷ್ಯಾದ ಶೆಲ್‌ ದಾಳಿಯಿಂದಾಗಿ ಸಾವನ್ನಪ್ಪಿದ್ದಾರೆ.

Advertisement

ಹೀಗೆ ಬಲಿಯಾಗುವುದಕ್ಕೆ ಒಂದು ದಿನ ಮೊದಲು ಅವರು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದ ಪೋಸ್ಟ್‌ ಇದೀಗ ಭಾರೀ ವೈರಲ್‌ ಆಗಿದೆ.

ಇದನ್ನೂ ಓದಿ:ಭಾರತ ಬೌದ್ಧಿಕ ಸಂಪತ್ತಿನಲ್ಲಿ ವಿಶ್ವಗುರು: ಓಂ ಬಿರ್ಲಾ

ಮಿಲಿಟರಿ ಸಮವಸ್ತ್ರ ಧರಿಸಿರುವ ಫೋಟೋ ಹಂಚಿಕೊಂಡಿದ್ದ ಅವರು, “ಕಳೆದ 48 ಗಂಟೆಗಳಿಂದ ಸುಮ್ಮನೆ ಕುಳಿತು, ನಮ್ಮ ಮೇಲೆ ಹೇಗೆ ಬಾಂಬ್‌ ದಾಳಿಯಾಗುತ್ತಿದೆ ಎನ್ನುವುದನ್ನು ಫೋಟೋ ಹೊಡೆಯುವುದಕ್ಕೆ ಮಾತ್ರ ಸಾಧ್ಯವಾಗುತ್ತಿದೆ.

ಆದರೂ ನಾವು ನಗುತ್ತಿದ್ದೇವೆ ಏಕೆಂದರೆ ನಾವು ಈ ಪರಿಸ್ಥಿತಿಯನ್ನು ಬದಲಿಸುತ್ತೇವೆ’ ಎಂದು ಬರೆದುಕೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next