ಕೀವ್: ರೈಲು ನಿಲ್ದಾಣದ ಮೇಲೆ ನಡೆದ ರಾಕೆಟ್ ದಾಳಿಯಲ್ಲಿ ಸುಮಾರು 30 ಜನರು ಮೃತಪಟ್ಟ ಘಟನೆ ಪೂರ್ವ ಉಕ್ರೇನ್ ನ ಕ್ರಮತೋರ್ಸಕ್ ನಗರದಲ್ಲಿ ಶುಕ್ರವಾರ ನಡೆದಿದೆ. ರಷ್ಯಾ- ಉಕ್ರೇನ್ ಯುದ್ಧದ ಕಾರಣದಿಂದ ಈ ರೈಲು ನಿಲ್ದಾಣದಲ್ಲಿ ನಾಗರಿಕರ ಸ್ಥಳಾಂತರ ಕಾರ್ಯ ನಡೆಯುತ್ತಿತ್ತು ಎಂದು ವರದಿ ತಿಳಿಸಿದೆ.
ರಷ್ಯಾ ನಡೆಸಿದ ಈ ರಾಕೆಟ್ ದಾಳಿಯಲ್ಲಿ ಸುಮಾರು 30 ಜನರು ಮೃತಪಟ್ಟಿದ್ದು, ನೂರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನ್ ರೈಲ್ವೇ ಸಂಸ್ಥೆ ತಿಳಿಸಿದೆ.
ಎರಡು ರಾಕೆಟ್ ಗಳು ಕ್ರಮತೋರ್ಸಕ್ ರೈಲು ನಿಲ್ದಾಣಕ್ಕೆ ಅಪ್ಪಳಿಸಿದವು. ಈ ಘಟನೆಯ ಬಗ್ಗೆ ರಷ್ಯಾದ ಕಡೆಯಿಂದ ಇದುವರೆಗೂ ಯಾವುದೇ ಹೇಳಿಕೆ ಲಭ್ಯವಾಗಿಲ್ಲ. ಆದರೆ ಫೆ.24ರಂದು ಉಕ್ರೇನ್ ಮೇಲೆ ದಾಳಿ ಆರಂಭಿಸಿದ ನಂತರ ತಾನು ನಾಗರಿಕರನ್ನು ಗುರಿಯಾಗಿಸಿ ಯಾವುದೇ ದಾಳಿ ನಡೆಸಿಲ್ಲ ಎಂದು ರಷ್ಯಾ ಹೇಳಿಕೊಂಡಿದೆ.
ಇದನ್ನೂ ಓದಿ:4 ದಿನದ ಹಿಂದೆ ನಾಪತ್ತೆಯಾಗಿದ್ದ ಯುವತಿಯ ಶವ ಅಸಾರಾಂ ಆಶ್ರಮದೊಳಗಿನ ಕಾರಿನಲ್ಲಿ ಪತ್ತೆ
ರಾಕೆಟ್ ದಾಳಿಯ ಸಮಯದಲ್ಲಿ ಸಾವಿರಾರು ಮಂದಿ ರೈಲು ನಿಲ್ದಾಣದಲ್ಲಿದ್ದರು. ಅವರೆಲ್ಲಾ ಸುರಕ್ಷಿತ ಜಾಗಕ್ಕೆ ತೆರಳಲು ರೈಲು ನಿಲ್ದಾಣಕ್ಕೆ ಆಗಮಿಸಿದ್ದರ. ಅಷ್ಟರಲ್ಲಿ ಎರಡು ರಾಕೆಟ್ ಗಳು ಅಪ್ಪಳಿಸಿದೆ ಎಂದು ಸ್ಥಳೀಯ ಗವರ್ನರ್ ಹೇಳಿದ್ದಾರೆ.