ಕೀವ್: ಈಗಾಗಲೇ ರಾಜಧಾನಿ ಕೀವ್ ಮೇಲೆ ಮತ್ತೆ ನಿಯಂತ್ರಣ ಸಾಧಿಸಿರುವ ಉಕ್ರೇನ್‌ಗೆ ಇನ್ನೊಂದು ಜಯ ಸಿಕ್ಕಿದೆ.
ಉಕ್ರೇನ್ ಸೇನೆ ಹೇಳಿಕೊಂಡ ಪ್ರಕಾರ, ಉಕ್ರೇನಿನ 2ನೇ ಬೃಹತ್ ನಗರ ಖಾರ್ಕಿವ್‌ನಿಂದಲೂ ರಷ್ಯಾ ಸೇನೆ ಕಾಲ್ಕೀಳುತ್ತಿದೆ. ಖಾರ್ಕಿವ್‌ನಲ್ಲಿ ಎರಡೂ ದೇಶಗಳ ಸೇನೆಯ ನಡುವೆ ಭೀಕರ ಸಮರ ನಡೆಯುತ್ತಿದೆ.
ಸದ್ಯ ರಷ್ಯನ್ನರು ಖಾರ್ಕಿವ್‌ನಿಂದ ಹೊರ ನಡೆಯುತ್ತಿದ್ದಾರೆ, ಆದರೆ ಡಾನೆಸ್ಕ್ ನಗರದಲ್ಲಿ ಮೋರ್ಟಾರ್ ಶೆಲ್ ದಾಳಿಗಳನ್ನು ನಡೆಸುತ್ತಿದ್ದಾರೆ. ಇದಲ್ಲದೆ, ವಾಯುದಾಳಿ ಮಾಡುವ ಮೂಲಕ ಉಕ್ರೇನ್ ಪಡೆಗಳನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಉಕ್ರೇನ್ ಸೇನೆ ಹೇಳಿಕೊಂಡಿದೆ. ಇದರ ಮಧ್ಯೆ ಈ ಯುದ್ಧ ಯಾವಾಗ ಮುಗಿಯುತ್ತಿದೆ, ಎಂದು ಗೊತ್ತಿಲ್ಲದ ಮಟ್ಟಿಗೆ ದೀರ್ಘವಾಗಲಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ ಹೇಳಿದ್ದಾರೆ.
ರಷ್ಯಾ ಯೋಧರೊಬ್ಬರನ್ನು ಯುದ್ಧಾಪರಾಧಿ ಎಂದು ಉಕ್ರೇನ್ ನ್ಯಾಯಾಲಯ ವಿಚಾರಣೆ ನಡೆಸುತ್ತಿರುವುದು ಇನ್ನೊಂದು ಮಹತ್ವದ ಬೆಳವಣಿಗೆ.
ಜಿ 7 ಬೆಂಬಲ:
ಜರ್ಮನಿಯಲ್ಲಿ ನಡೆಯುತ್ತಿರುವ ಜಿ-7 ರಾಷ್ಟ್ರಗಳ ಶೃಂಗಸಭೆಯಲ್ಲಿ ಉಕ್ರೇನ್ ಯುದ್ಧ ಮುಗಿಯುವವರೆಗೂ ಉಕ್ರೇನ್ ದೇಶಕ್ಕೆ ಬೆಂಬಲ ಮುಂದುವರಿಸುವುದಾಗಿ ಎಲ್ಲಾ ಸದಸ್ಯ ರಾಷ್ಟ್ರಗಳು ಘೋಷಿಸಿವೆ.