Advertisement

ಉಕ್ರೇನ್‌ನಿಂದ ಮರಳಿದವರಿಗೆ ಪ್ರವೇಶ ಕಷ್ಟ

12:49 AM Sep 16, 2022 | Team Udayavani |

ಹೊಸದಿಲ್ಲಿ: ರಷ್ಯಾ-ಉಕ್ರೇನ್‌ ಯುದ್ಧ ದಿಂದಾಗಿ ನಿರಾಶ್ರಿತರಾಗಿ ವಾಪಸ್‌ ಆಗಿರುವ ಭಾರ ತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಇಲ್ಲಿನ ಕಾಲೇಜು ಗಳಲ್ಲಿ ಪ್ರವೇಶ ನೀಡುವುದು ಕಷ್ಟಸಾಧ್ಯ ಎಂದು ಕೇಂದ್ರ ಸರಕಾರವು ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

Advertisement

ಈ ಸಂಬಂಧ ಸರ್ವೋಚ್ಚ ನ್ಯಾಯಾಲಯಕ್ಕೆ ಪ್ರಮಾಣ ಪತ್ರ ಸಲ್ಲಿಸಿರುವ ಕೇಂದ್ರ, ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ)ವೂ ಇದುವರೆಗೆ ವಿದೇಶಿ ವೈದ್ಯ ಕೀಯ ಕಾಲೇಜುಗಳಲ್ಲಿ ಕಲಿತವರಿಗೆ ಇಲ್ಲಿನ ಕಾಲೇಜು ಗಳಲ್ಲಿ ಪ್ರವೇಶ ನೀಡಲು ಒಪ್ಪಿಗೆ ನೀಡಿಲ್ಲ ಎಂದಿದೆ.

ಕಳೆದ ಫೆಬ್ರವರಿಯಲ್ಲಿ ಉಕ್ರೇನ್‌ ಮೇಲೆ ರಷ್ಯಾ ಅತಿಕ್ರಮಣ ಮಾಡಿದ್ದು, ಈ ಸಂದರ್ಭದಲ್ಲಿ ಭಾರತದ ಸಾವಿರಾರು ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ವ್ಯಾಸಂಗ ಬಿಟ್ಟು ತವರಿಗೆ ವಾಪಸ್‌ ಆಗಿದ್ದರು. ಇವರ ಭವಿಷ್ಯ ಇನ್ನೂ ಅತಂತ್ರ ಸ್ಥಿತಿಯಲ್ಲೇ ಇದೆ. ಕೆಲವು ಖಾಸಗಿ ಕಾಲೇಜುಗಳಲ್ಲಿ ಕೆಲವರಿಗೆ ಮಾತ್ರ ಪ್ರವೇಶ ನೀಡಲಾಗಿದೆ. ಆದರೆ ಈ ಸಂಖ್ಯೆ ತುಂಬಾ ಕಡಿಮೆ ಇದೆ.

ತಮಗೂ ಇಲ್ಲಿನ ಕಾಲೇಜುಗಳಲ್ಲಿ ಪ್ರವೇಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಮೊದಲ ಮತ್ತು ನಾಲ್ಕನೇ ವರ್ಷದ ವಿದ್ಯಾರ್ಥಿಗಳಿಗೆ ಇಲ್ಲಿನ ಕಾಲೇಜುಗಳಲ್ಲಿ ದಾಖಲಿಸಿಕೊಳ್ಳಬೇಕು. ಅಲ್ಲಿ ಯಾವ ಸೆಮಿಸ್ಟರ್‌ನಲ್ಲಿ ಕಲಿಯುತ್ತಿದ್ದರೋ ಅದೇ ಸೆಮಿಸ್ಟರ್‌ ನಲ್ಲಿ ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು.

ವಿದ್ಯಾರ್ಥಿಗಳ ಕಳವಳ ನಮಗೂ ಅರ್ಥವಾಗುತ್ತದೆ ಎಂದಿರುವ ಕೇಂದ್ರ ಸರಕಾರ, ಭಾರತೀಯ ವೈದ್ಯಕೀಯ ಮಂಡಳಿ ಕಾಯ್ದೆ 1956ರಂತೆ, ಯಾವುದೇ ವಿದೇಶಿ ವೈದ್ಯಕೀಯ ಕಾಲೇಜಿನಿಂದ ಇಲ್ಲಿಗೆ ವಿದ್ಯಾರ್ಥಿಗಳನ್ನು ವರ್ಗಾವಣೆ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದೆ. ಜತೆಗೆ ವಿದೇಶಾಂಗ ಇಲಾಖೆ ಜತೆಗೆ ಚರ್ಚಿಸಿ ಈ ವಿದ್ಯಾರ್ಥಿಗಳನ್ನು  ಬೇರೆ ದೇಶಗಳಲ್ಲಿ ಕೋರ್ಸ್‌ ಮುಗಿಸಲು ಅವಕಾಶ ಮಾಡಿಕೊಡಲಾಗುತ್ತದೆ ಎಂದು ಹೇಳಿದೆ. ಈ ಬಗ್ಗೆ ಸೆ.6ರಂದೇ ಸಾರ್ವಜನಿಕ ನೋಟಿಸ್‌ ನೀಡಲಾಗಿದೆ ಎಂದಿದೆ.

Advertisement

ಯಾಕೆ ಸಾಧ್ಯವಿಲ್ಲ ? :

ಕೇಂದ್ರ ಸರಕಾರವು ಪ್ರಮಾಣ ಪತ್ರದಲ್ಲಿ ತಿಳಿಸಿರುವ ಪ್ರಕಾರ, ನೀಟ್‌ನಲ್ಲಿ ಈ ವಿದ್ಯಾರ್ಥಿಗಳು ಸಾಧನೆ ತೋರಿರುತ್ತಾರೆ. ಇದರೊಂದಿಗೆ ಉಕ್ರೇನ್‌ನಂಥ ದೇಶದಲ್ಲಿನ ವೈದ್ಯಕೀಯ ಶಿಕ್ಷಣದ ವೆಚ್ಚ ಕಡಿಮೆ ಇರುತ್ತದೆ. ಈ ಕಾರಣಗಳಿಂದಾಗಿಇಲ್ಲಿ ಪ್ರವೇಶ ನೀಡುವುದು ಕಷ್ಟ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next