Advertisement

Russia ವಿರುದ್ಧ ಉಕ್ರೇನ್‌ ಪ್ರತೀಕಾರ: ಶೆಲ್‌ ದಾಳಿಗೆ 21 ನಾಗರಿಕರ ಸಾವು

01:51 AM Jan 01, 2024 | Team Udayavani |

ಮಾಸ್ಕೋ: ರಷ್ಯಾದ ಗಡಿ ಭಾಗದಲ್ಲಿರುವ ಬೆಲ್ಗಾರ್ಡ್‌ ನಗರದಲ್ಲಿ ಶನಿವಾರ ರಾತ್ರಿ ಶೆಲ್‌ ದಾಳಿ ನಡೆದಿದ್ದು, ಮಕ್ಕಳು ಸೇರಿದಂತೆ 21 ಮಂದಿ ಸಾವಿಗೀಡಾಗಿದ್ದಾರೆ. ದಾಳಿಯಲ್ಲಿ 110ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ರಷ್ಯಾ- ಉಕ್ರೇನ್‌ ದಾಳಿ ಆರಂಭವಾದ ಬಳಿಕ ಮಾಸ್ಕೋ ಮೇಲೆ ನಡೆದ ಭೀಕರ ದಾಳಿ ಇದಾಗಿದೆ. ಯುದ್ಧ ಆರಂಭವಾಗಿ 22 ತಿಂಗಳುಗಳು ಕಳೆದಿವೆ.

Advertisement

ಇತ್ತೀಚೆಗಷ್ಟೇ ಉಕ್ರೇನ್‌ ಮೇಲೆ ರಷ್ಯಾ ಸೈನಿಕರು ಬರೋಬ್ಬರಿ 18 ಗಂಟೆಗಳ ಕಾಲ ವೈಮಾನಿಕ ದಾಳಿ ನಡೆಸಿ, ಉಕ್ರೇನ್‌ನ 41 ನಾಗರಿಕರನ್ನು ಹತ್ಯೆಗೈದಿದ್ದರು. ಇದರ ಬೆನ್ನಲ್ಲೇ ರಷ್ಯಾ ಮೇಲೆ ದಾಳಿ ನಡೆದಿದೆ. ಹೀಗಾಗಿ, ಶನಿವಾರ ನಡೆದ ದಾಳಿಗೆ ಉಕ್ರೇನ್‌ ಕಾರಣ ಎಂದು ರಷ್ಯಾ ಆರೋಪಿಸಿದೆ.

ಗಾಜಾದಲ್ಲಿ 35 ಸಾವು: ಇನ್ನೊಂದೆಡೆ, ಗಾಜಾ ಪಟ್ಟಿ ಮೇಲೆ ಇಸ್ರೇಲ್‌ ದಾಳಿ ಮುಂದುವರಿದಿದ್ದು, ಕೇಂದ್ರ ಗಾಜಾದಲ್ಲಿ ರವಿವಾರ  ಇಸ್ರೇಲ್‌ ಪಡೆಗಳು ನಡೆಸಿದ ವೈಮಾನಿಕ ದಾಳಿಯಲ್ಲಿ 35 ಮಂದಿ ಮೃತಪಟ್ಟಿದ್ದಾರೆ. ಕದನ ವಿರಾಮ ಘೋಷಿಸುವಂತೆ ಅಂತಾರಾಷ್ಟ್ರೀಯ ಒತ್ತಡಗಳು ಬರುತ್ತಿದ್ದರೂ, ಯುದ್ಧ ಇನ್ನೂ ಹಲವು ತಿಂಗಳುಗಳ ಕಾಲ ಮುಂದುವರಿಯಲಿದೆ ಎಂದು ಇಸ್ರೇಲ್‌ ಪ್ರಧಾನಿ ನೆತನ್ಯಾಹು ಹೇಳಿಕೆ ನೀಡಿದ ಬೆನ್ನಲ್ಲೇ ಈ ದಾಳಿ ನಡೆದಿದೆ

Advertisement

Udayavani is now on Telegram. Click here to join our channel and stay updated with the latest news.

Next