ಉಕ್ರೇನ್: ಉಕ್ರೇನ್ – ರಷ್ಯಾ ನಡುವಿನ ಯುದ್ಧ ದೀರ್ಘಕಾಲದಿಂದ ನಡೆಯುತ್ತಿದೆ. ಹಿಂಸೆಗಳಿಗೆ ಕೊನೆಯೇ ಇಲ್ಲದೆಂಬಂತೆ ಯುದ್ದಧ ತೀವ್ರತೆ ಹೆಚ್ಚಾಗಿದೆ. ಉಕ್ರೇನ್ ಯುದ್ಧದಲ್ಲಿ ಹಿನ್ನೆಡೆ ಆಗುತ್ತಿರುವುದಕ್ಕೆ ಇತ್ತೀಚಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಏಕಾಏಕಿ ಬರೋಬ್ಬರಿ 3 ಲಕ್ಷದಷ್ಟು ಮೀಸಲು ಯೋಧರನ್ನು ಯುದ್ಧಭೂಮಿಗೆ ರವಾನಿಸುವ ಅಧ್ಯಾದೇಶಕ್ಕೆ ಸಹಿ ಹಾಕಿದ್ದಾರೆ.
ಬುಧವಾರ ಉಕ್ರೇನ್ ನ 205 ಯುದ್ಧ ಕೈದಿಗಳನ್ನು ರಷ್ಯಾ ಬಿಡುಗಡೆ ಮಾಡಿದೆ. ಇದರಲ್ಲಿ ತನ್ನ ಸೈನಿಕನೊಬ್ಬನ ಫೋಟೋವನ್ನು ಉಕ್ರೇನ್ ರಕ್ಷಣಾ ಸಚಿವಾಲಯ ರಿಲೀಸ್ ಮಾಡಿ, ರಷ್ಯಾದ ಕ್ರೌರ್ಯ ಮತ್ತು ಹಿಂಸೆಯನ್ನು ಜಗಜ್ಜಾಹೀರುಗೊಳಿಸಿದೆ.
ಉಕ್ರೇನ್ ಸೈನಿಕ ಮೈಖೈಲೋ ಡಯಾನೋವ್ ಅದೃಷ್ಟಶಾಲಿಗಳಲ್ಲಿ ಒಬ್ಬರು. ಇವರ ಜೊತೆಗಿದ್ದವರು ಕೆಲವರು ಸಹ ರಷ್ಯಾ ಸೆರೆಯಲ್ಲಿ ಬದುಕುಳಿದಿದ್ದಾರೆ. ಜಿನೀವಾ ಒಪ್ಪಂದಗಳಿಗೆ ರಷ್ಯಾ ಬದ್ಧವಾಗಿರುವುದು ಹೀಗೆಯೇ. ಇದು ರಷ್ಯಾ ನಾಜಿಸಂನ ನಾಚಿಕೆಗೇಡಿನ ಪರಂಪರೆಯನ್ನು ಮುಂದುವರಿಸುವುದನ್ನು ತೋರಿಸುತ್ತದೆ ಎಂದು ಟ್ವೀಟ್ ಮಾಡುವ ಮೂಲಕ ಸೈನಿಕ ಮೈಖೈಲೋ ಡಯಾನೋವ್ ಮೊದಲ ಹಾಗೂ ಈಗಿನ ಫೋಟೋವನ್ನು ಹಂಚಿಕೊಂಡಿದೆ.
ಟಿಲಿಗ್ರಾಫ್ ವರದಿಯ ಪ್ರಕಾರ, ಈ ವರ್ಷ ಮಾರಿಯುಪೋಲ್‌ನಲ್ಲಿನ ಅಜೋವ್‌ಸ್ಟಾಲ್ ಬೃಹತ್ ಉಕ್ಕಿನ ಕಂಪನಿಯ ಪರ ಹೋರಾಟ ನಡೆಸಿದ್ದ ಸಂದರ್ಭದಲ್ಲಿ ರಷ್ಯಾ ಮೈಖೈಲೋ ಡಯಾನೋವ್ ಸೇರಿದಂತೆ ಹಲವರನ್ನು ಬಂಧಿಸಿತ್ತು. ಬುಧವಾರ 205 ಯುದ್ಧ ಕೈದಿಗಳನ್ನು ರಷ್ಯಾ ಬಿಡುಗಡೆ ಮಾಡಿದೆ ಎಂದು ವರದಿ ತಿಳಿಸಿದೆ.
ಸದ್ಯ ಮೈಖೈಲೋ ಡಯಾನೋವ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ದೀರ್ಘಾವಧಿಯ ಚಿಕಿತ್ಸೆ ಅಗತ್ಯವಿದೆ. ಡಯಾನೋವ್ ಗೆ ಕೀವ್ ನ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಜೈಲಿನಲ್ಲಿ ಕ್ರೂರವಾಗಿ ನಡೆಸಿಕೊಂಡಿದ್ದು, ಇದರಿಂದ ಮೈಖೈಲೋ ಡಯಾನೋವ್ ದೈಹಿಕವಾಗಿ ದುರ್ಬಲರಾಗಿದ್ದಾರೆ. ವೈದ್ಯರು, ಈ ಸ್ಥಿತಿಯಲ್ಲಿ ಅವರನ್ನು ಯಾವ ಆಪರೇಷನ್ ನ್ನು ಮಾಡಲು ಸಾಧ್ಯವಾಗುವುದಿಲ್ಲ. ಅವರು ಮೊದಲು ದೈಹಿಕವಾಗಿ ಸದೃಢರಾಗಬೇಕು. ಆ ಬಳಿಕವೇ ನಾವು ಮುಂದಿನ ಚಿಕಿತ್ಸೆ ನೀಡಬಹುದು ಎಂದು ಹೇಳಿದ್ದಾರೆ.