ವಾಷಿಂಗ್ಟನ್/ಕೀವ್: ರಷ್ಯಾ ದೇಶದ ಮೇಲೆ ನಡೆಸಿದ ದಾಳಿ 2001ರಲ್ಲಿ ವಿಶ್ವ ವಾಣಿಜ್ಯ ಕಟ್ಟಡದ ಮೇಲೆ ಮತ್ತು ಜಪಾನ್‌ನ ಪರ್ಲ್ ಹಾರ್ಬರ್ ಮೇಲೆ ನಡೆಸಿದ ದಾಳಿಗೆ ಸಮನಾಗಿದೆ.
ಹೀಗೆಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಬಣ್ಣಿಸಿದ್ದಾರೆ. ಕೀವ್‌ನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ಅಮೆರಿಕ ಸಂಸತ್ ಅನ್ನು ಉದ್ದೇಶಿಸಿ ಮಾತನಾಡಿದ ಅವರು, ರಷ್ಯಾ ವಿರುದ್ಧ ಹೋರಾಡಲು ಮತ್ತಷ್ಟು ನೆರವು ಬೇಕಾಗಿದೆ ಎಂದು ಹೇಳಿದ್ದಾರೆ.
ರಷ್ಯಾದ ಸಂಸದರ ವಿರುದ್ಧ ದಿಗ್ಬಂಧನ ಹೇರಬೇಕು ಮತ್ತು ಆ ದೇಶದಿಂದ ಆಮದಾಗುವ ವಸ್ತುಗಳ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿದಾರೆ.
“ನಮಗೆ ನಿಮ್ಮ ನೆರವು ತಕ್ಷಣ ಬೇಕು’ ಎಂದೂ ಝೆಲೆನ್‌ಸ್ಕಿ ಭಾವಾವೇಶದಿಂದ ಮಾತನಾಡಿದ್ದಾರೆ.
ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ “ಐ ಹ್ಯಾವ್ ಎ ಡ್ರೀಮ್’ ಎಂಬ ಮಾತನ್ನು ಉಲ್ಲೇಖಿಸಿದ ಝೆಲೆನ್‌ಸ್ಕಿ ತಮ್ಮ ದೇಶದ ಮೇಲೆ ಹಾರಾಟ ನಿಷೇಧ ನಿಯಮ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೇ ಅಮೆರಿಕ ನೆರವು ನೀಡಿದೆ ನಿಜ. ಅದು ಇನ್ನಷ್ಟು ಹೆಚ್ಚಬೇಕು ಎಂದರು. ಅಮೆರಿಕದ ನಾಯಕರಾಗಿರುವ ಬೈಡೆನ್ ಜಗತ್ತಿನ ನಾಯಕರಾಗಿ ಹೊರಹೊಮ್ಮಬೇಕು ಮತ್ತು ಜಗತ್ತಿನ ಶಾಂತಿಯ ನಾಯಕರಾಗಬೇಕು ಎಂದರು.