Advertisement

ಉಕ್ರೇನ್ ಸಂಕಷ್ಟ: ಭಾರತದ ವಿಮಾನದ ನಿರೀಕ್ಷೆಯಲ್ಲಿ ಉಜಿರೆ ವಿದ್ಯಾರ್ಥಿನಿ

09:26 AM Mar 04, 2022 | Team Udayavani |

ಬೆಳ್ತಂಗಡಿ: ಯುದ್ಧಗ್ರಸ್ಥ ಉಕ್ರೇನ್‌ನ ಖಾರ್ಕಿವ್ ನಲ್ಲಿ ಸಿಲುಕಿದ್ದ ಬೆಳ್ತಂಗಡಿ ತಾಲೂಕಿನ ಉಜಿರೆಯ ವೈದ್ಯ ವಿದ್ಯಾರ್ಥಿನಿ ಹೀನಾ ಫಾತಿಮಾ ಅವರು ಇದೀಗ ಪೋಲಂಡ್ ನಲ್ಲಿ ವಾಸ್ತವ್ಯ ಹೂಡಿದ್ದು ಇವರೊಂದಿಗೆ ಕರ್ನಾಟಕ ಭೂಮಿಕಾ, ಅಕ್ಷಿತಾ ಇರುವುದಾಗಿ ತಿಳಿದುಬಂದಿದೆ.

Advertisement

ಹೀನಾ ಫಾತಿಮಾ ಸಹಿತ ಅನೇಕುರು ನಿನ್ನೆಯವರೆಗೆ ಕಾರ್ಕೀವ್ ಪ್ರದೇಶದದಿಂದ ಸುಮಾರು 1000 ಕಿ.ಮೀ. ದೂರದ ಲಿವಿವ್ ಪ್ರದೇಶಕ್ಕೆ ರೈಲಿನ ಮೂಲಕ ಬಂದು ಅಲ್ಲಿಂದ ಅಹಾರ, ನೀರು ಇಲ್ಲದೆ ಹೊರಟಿದ್ದರು. ಲಿವಿವ್ ನಿಂದ ವಾಹನ ಮೂಲಕ ಪೋಲಂಡ್ ತಲುಪಿದ್ದರಾದರೂ ಗುರುವಾರ ರಾತ್ರಿ11 ಗಂಟೆಯವರೆಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಇದೀಗ ಹೀನಾ ಫಾತಿಮಾ ಸಹಿತ ಜತೆಗಿದ್ದವರಿಗೆ ವಾಸ್ತವ್ಯ ಲಭಿಸಿದ್ದು ಸಧ್ಯದ ಪರಿಸ್ಥಿಯಲ್ಲಿ ಸುರಕ್ಷಿತರಾಗಿದ್ದು, ಪೋಲಂಡ್ ನಿಂದ ಭಾರತಕ್ಕೆ ಬರಲು ವಿಮಾನ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ:ಉಕ್ರೇನ್ ನ ಪರಮಾಣು ವಿದ್ಯುತ್ ಸ್ಥಾವರಕ್ಕೆ ರಷ್ಯಾ ದಾಳಿ; ತಕ್ಷಣ ಕದನವಿರಾಮಕ್ಕೆ ಕೀವ್ ಒತ್ತಾಯ

ನನ್ನ ತಂಗಿಯ ಮಗಳ ಹಾಗೆ ಈ ದೇಶದ ಎಷ್ಟೋ ಅಕ್ಕ ತಂಗಿಯರ ಮಕ್ಕಳು ಉಕ್ರೇನ್ ನಲ್ಲಿ ಸಿಲುಕಿ ಕೊಂಡಿದ್ದಾರೆ. ಅವರೆಲ್ಲ ಈ ದೇಶಕ್ಕೆ ಬಂದು ಅವರ ಕುಟುಂಬವನ್ನು ಸೇರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ. ಉಕ್ರೇನ್ ನಲ್ಲಿ ಸಿಲುಕಿರುವವ ಭಾರತೀಯ ವಿದ್ಯಾರ್ಥಿಗಳನ್ನು ಕರೆತರುವಲ್ಲಿ ಸರಕಾರವು ಬಹಳಷ್ಟು ಸ್ಪಂದನೆ ನೀಡಿ, ಧೈರ್ಯ ತುಂಬುತ್ತಿದೆ ಎಂದು ಹೀನಾ ಅವರ ಮಾವ ಉದ್ಯಮಿ ಆಬಿದ್ ಅಲಿ ಉದಯವಾಣಿಗೆ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next