ಮಾಸ್ಕೊ : ಕೊನೆಗೂ ಉಕ್ರೇನ್ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ರಷ್ಯಾ ಜೊತೆ ಶಾಂತಿಯುತ ಮಾತುಕತೆಗೆ ಒಪ್ಪಿಗೆ ನೀಡಿದ್ದಾರೆ.
ಇದರೊಂದಿಗೆ ಬೆಲಾರಸ್ ಹಾಗೂ ಉಕ್ರೇನ್ ದೇಶದ ಗಡಿಯಲ್ಲಿ ಮಾತುಕತೆಗೆ ವೇದಿಕೆ ಸಿದ್ಧವಾಗಿದೆ. ತಮ್ಮ ದೇಶದ ಮೇಲೆ ಆಕ್ರಮಣ ಮಾಡುವ ವಿಚಾರದಲ್ಲಿ ರಷ್ಯಾದೊಂದಿಗೆ ಬೆಲಾರಸ್ ಕೂಡ ಕೈಜೋಡಿಸಿದ್ದರಿಂದ ಬೆಲಾರಸ್ ನಲ್ಲಿ ಮಾತುಕತೆಗೆ ಸಿದ್ಧವಿಲ್ಲ ಎಂದು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಹೇಳಿದ್ದರು.
ಈ ವಿಚಾರದಲ್ಲಿ ಸಾಕಷ್ಟು ಚರ್ಚೆಗಳು ನಡೆದ ಬಳಿಕ ಬೆಲಾರಸ್ ನ ಗಡಿಯಲ್ಲಿ ರಷ್ಯಾದೊಂದಿಗೆ ಮಾತುಕತೆ ನಡೆಸಲು ಉಕ್ರೇನ್ ಅಧ್ಯಕ್ಷ ಒಪ್ಪಿಕೊಂಡಿದ್ದಾರೆ ಎಂದು ಮಾಸ್ಕೋದ ಮಾಧ್ಯಮಗಳು ವರದಿ ಮಾಡಿವೆ.
ಉಕ್ರೇನ್ ಕಳೆದ ಕೆಲವು ದಿನಗಳಿಂದ ಮಾತುಕತೆಗೆ ನಿರಾಕರಿಸಿತ್ತು. ಇದರಿಂದ ರಷ್ಯಾವು ಉಕ್ರೇನ್‌ನಲ್ಲಿ ತನ್ನ ಕಾರ್ಯಾಚರಣೆಯನ್ನು ಮತ್ತಷ್ಟು ಬಲಪಡಿಸಿದೆ. ಬೆಲಾರಸ್ ಈ ಹಿಂದೆ ರಷ್ಯಾ ಹಾಗೂ ಉಕ್ರೇನ್ ನಡುವೆ ಮಾತುಕತೆ ನಡೆಸಿತ್ತು ಎನ್ನಲಾಗಿದೆ. ಆದರೆ ದಾಳಿಗೆ ರಷ್ಯಾಗೆ ಸಹಾಯ ಮಾಡಿದೆ ಎನ್ನುವ ಆರೋಪ ಬೆಲಾರಸ್ ಮೇಲಿದ್ದು, ಅದರ ಮೇಲೂ ಹಲವು ನಿರ್ಬಂಧ ಹೇರಲಾಗಿದೆ. ಇದೇ ಕಾರಣವನ್ನು ಉಕ್ರೇನ್ ಅಧ್ಯಕ್ಷರೂ ಪ್ರಸ್ತಾಪಿಸಿ, ಬೇರೆಡೆ ಮಾತುಕತೆಗೆ ಸಿದ್ಧ ಎಂದಿದ್ದರು.
ಇದನ್ನೂ ಓದಿ : ಇಂಟರ್ನ್ಯಾಶನಲ್ ಮೆಡಿಕಲ್ ಕಾಲೇಜು ಹಾಸ್ಟೆಲ್ ನಲ್ಲಿ ಸಿಲುಕಿಕೊಂಡಿರುವ ವಿದ್ಯಾರ್ಥಿಗಳು