Advertisement

ಕ್ಯಾನ್ಸರ್ ಅಂತ್ಹೇಳಿ 45 ಲಕ್ಷ ದೇಣಿಗೆ ಪಡೆದು ಜೈಲು ಸೇರಿದ್ಲು ಖತರ್ನಾಕ್ ವಂಚಕಿ  

08:23 PM Feb 12, 2021 | Ganesh Hiremath |

ಲಂಡನ್ : ಬೇರೆಯವರ ಕಷ್ಟಕ್ಕೆ ಜನ ಬೇಗನೆ ಸ್ಪಂದಿಸುತ್ತಾರೆ. ಅವರ ನೋವಿಗೆ ಕನಿಕರ ಪಟ್ಟು ಕೈಲಾದ ಸಹಾಯ ಮಾಡ್ತಾರೆ. ಜನರ ಈ ಒಳ್ಳೆಯತನವನ್ನೆ ಬಂಡವಾಳ ಮಾಡಿಕೊಂಡ ಲಂಡನ್ ಮಹಿಳೆಯೋರ್ವಳು ಬರೋಬ್ಬರಿ 45 ಲಕ್ಷ ರೂ. ದೇಣಿಗೆ ಪಡೆದು, ಇದೀಗ ಜೈಲು ಪಾಲಾಗಿದ್ದಾಳೆ.

Advertisement

ನಿಕೊಲೊ ಹೆಸರಿನ 42 ವಯಸ್ಸಿನ ಖತರ್ನಾಕ್ ಮಹಿಳೆ ತನಗೆ ಕ್ಯಾನ್ಸರ್ ಇದೆ ಅಂತಾ ಹೇಳಿ, ಜನರಿಂದ ಹಣ ಪಡೆದು ವಂಚನೆ ಮಾಡಿದ್ದಾಳೆ. ವಿಲಾಸಿ ಜೀವನ ನಡೆಸುತ್ತಿದ್ದ ನಿಕೊಲೊ, ನನಗೆ ಕ್ಯಾನ್ಸರ್ ಇದೆ. ಚಿಕಿತ್ಸೆಗೆ ಹಣ ಬೇಕಾಗಿದೆ. ದಯವಿಟ್ಟು ಯಾರಾದರೂ ಸಹಾಯ ಮಾಡಿ ಎಂದು ಫೇಸ್ ಬುಕ್ ನಲ್ಲಿ ಪೇಜ್ ತೆರೆದು ದೇಣಿಗೆ ಸಂಗ್ರಹಿಸಲು ಶುರು ಮಾಡಿದ್ದಳು.

ಸುಮಾರು 600 ಕ್ಕೂ ಹೆಚ್ಚು ಜನರು ಆಕೆಯ ಮಾತು ನಂಬಿ ದೇಣಿಗೆ ನೀಡಿದ್ದರು. ಇದರಿಂದ ಸಂಗ್ರಹಗೊಂಡ 45 ಲಕ್ಷ ರೂ.ದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದ ನಿಕೊಲೊ, 3 ಲಕ್ಷ ಹಣ ಪಾವತಿಸಿ ಫುಟ್ ಬಾಲ್ ಪಂದ್ಯ ನೋಡಲು ಟಿಕೆಟ್ ಖರೀದಿಸಿದ್ದಳು.

ಸದ್ಯ ಇವಳ ವಂಚನೆಯ ಮುಖವಾಡ ಕಳಚಿದೆ. ಲಂಡನ್ ನ್ಯಾಯಾಲಯ ಎರಡು ವರ್ಷ, ಒಂಭತ್ತು ತಿಂಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಜೈಲಿಗಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next