Advertisement

ಬ್ರಿಟನ್ ರಾಜ ಚಾರ್ಲ್ಸ್ ಮೇಲೆ ಮೊಟ್ಟೆ ಎಸೆದ ವಿದ್ಯಾರ್ಥಿ ಬಂಧನ, 6 ತಿಂಗಳು ಜೈಲುಶಿಕ್ಷೆ ಸಾಧ್ಯತೆ

03:55 PM Dec 21, 2022 | Team Udayavani |

ಯುನೈಟೆಡ್ ಕಿಂಗ್ ಡಮ್; ಕಿಂಗ್ ಚಾರ್ಲ್ಸ್ ಅವರ ಮೇಲೆ ಮೊಟ್ಟೆ ಎಸೆದ ಘಟನೆಗೆ ಸಂಬಂಧಿಸಿದಂತೆ ಬ್ರಿಟನ್ ಪೊಲೀಸರು 23 ವರ್ಷದ ವಿದ್ಯಾರ್ಥಿಯೊಬ್ಬನನ್ನು ಬಂಧಿಸಿದ್ದು, ಆತ ಆರು ತಿಂಗಳ ಕಾಲ ಜೈಲುಶಿಕ್ಷೆ ಅನುಭವಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಕೋವಿಡ್‌ ರೂಪಾಂತರಿ ವೈರಸ್‌; ಶೀಘ್ರದಲ್ಲೇ ಮಾರ್ಗಸೂಚಿ ಬಿಡುಗಡೆ :ಸಚಿವ ಡಾ.ಕೆ.ಸುಧಾಕರ್‌

ಸಾರ್ವಜನಿಕ ಸುವ್ಯವಸ್ಥೆ ಉಲ್ಲಂಘನೆ ಆರೋಪದಡಿ ಯುವಕನನ್ನು ಬಂಧಿಸಲಾಗಿದೆ. ನವೆಂಬರ್ ನಲ್ಲಿ ಇಂಗ್ಲೆಂಡ್ ನಲ್ಲಿ ಚಾರ್ಲ್ಸ್ ಮತ್ತು ರಾಣಿಯ ನಿಶ್ಚಿತಾರ್ಥದ ಸಂದರ್ಭದಲ್ಲಿ ಈ ಘಟನೆ ನಡೆದಿತ್ತು.

ಯಾರ್ಕ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಪ್ಯಾಟ್ರಿಕ್ ಥೆಲ್ವೆಲ್ ಜನವರಿ 20ರಂದು ಯೊರ್ಕ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಹಾಜರಾಗಲಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿರುವ ವಿಡಿಯೋದಲ್ಲಿ, ನಾಲ್ಕು ಮೊಟ್ಟೆಗಳನ್ನು ಬ್ರಿಟನ್ ರಾಜ ಮತ್ತು ಅವರ ಪತ್ನಿಯತ್ತ ಎಸೆದಿರುವ ದೃಶ್ಯ ಸೆರೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next