ಲಂಡನ್: ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿಯವರ ಅಳಿಯ ರಿಷಿ ಸುನಕ್ ಪ್ರಧಾನಿಯಾಗಬೇಕು ಎಂದು ಬ್ರಿಟನ್‌ನಲ್ಲಿ ಭಾರತೀಯ ಸಮುದಾಯ ದೇವರ ಮೊರೆ ಹೋಗಿದೆ.
ಸುನಕ್ ಬ್ರಿಟನ್‌ನ ಕನ್ಸರ್ವೇಟಿವ್ ಪಕ್ಷದ ಮುಖ್ಯಸ್ಥ ಹಾಗೂ ಪ್ರಧಾನಿ ಆಗಬೇಕು ಎಂಬುದಕ್ಕಾಗಿ ಬ್ರಿಟನ್‌ನ ಹಲವು ಸ್ಥಳಗಳಲ್ಲಿ ಹೋಮ-ಹವನಗಳನ್ನು ನಡೆಸಲಾಗುತ್ತಿದೆ.
“ರಿಷಿ ಭಾರತೀಯ ಎನ್ನುವ ಕಾರಣಕ್ಕಾಗಿ ಗೆಲ್ಲಬೇಕಿಲ್ಲ, ಅವರಲ್ಲಿರುವ ಆಡಳಿತ ಸಾಮರ್ಥ್ಯಕ್ಕಾಗಿ ಅವರು ಗೆಲ್ಲಬೇಕು’ ಎನ್ನುತ್ತಿದ್ದಾರೆ ಎಂದು ಬ್ರಿಟನ್‌ನಲ್ಲಿ ಇರುವ ಭಾರತೀಯ ಸಮುದಾಯದ ಸಿ.ಕೆ.ನಾಯ್ಡು ಹೇಳಿದ್ದಾರೆ.
ಇದನ್ನೂ ಓದಿ:ಎಲ್ಲ ವರ್ಷಗಳಿಗೆ ಹೋಲಿಸಿದರೆ ಈ ವರ್ಷ ತ್ರಿವರ್ಣ ಧ್ವಜಗಳಿಗೆ ಬೇಡಿಕೆ 50 ಪಟ್ಟು ಹೆಚ್ಚಳ!
ಬ್ರಿಟನ್‌ನ ಮಾಜಿ ವಿತ್ತ ಸಚಿವ ರಿಷಿ ಅವರಿಗೆ ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ ಪ್ರತಿಸ್ಪರ್ಧಿಯಾಗಿದ್ದಾರೆ. ಅಲ್ಲಿನ ಸ್ಥಳೀಯ ವರದಿಗಳ ಪ್ರಕಾರ ಲಿಜ್ ಟ್ರಸ್ ಈ ಸ್ಫರ್ಧೆಯಲ್ಲಿ ಗೆದ್ದು, ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎನ್ನಲಾಗಿದೆ. ಅವರಿಗೆ ಎರಡಂಕಿ ಮತಗಳ ಮುನ್ನೆಡೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ಇದೇ ವೇಳೆ, ಅಮೆರಿಕದಲ್ಲಿ ಇರುವ ಹಿಂದೂ- ಅಮೆರಿಕ ಸಮುದಾಯದ ಸಂಘಟನೆಯೊಂದು ರಿಷಿ ಸುನಕ್ ಬ್ರಿಟನ್‌ನ ಮುಂದಿನ ಪ್ರಧಾನಿಯಾಗಬೇಕು ಎಂದು ಪ್ರತಿಪಾದಿಸಿದೆ.