ಲಂಡನ್: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಸೋಮವಾರ ವಿಶ್ವಾಸ ಮತ ಗೆದ್ದುಕೊಂಡಿದ್ದಾರೆ.
ಬೋರಿಸ್ ಜಾನ್ಸನ್ ಅವರು 211 ಮತಗಳನ್ನು ಪಡೆದರು. ಆದರೆ ಅವರದ್ದೇ ಪಕ್ಷ ಕನ್ಸರ್ ವೇಟಿವ್ ಪಾರ್ಟಿಯ 148 ಮಂದಿ ಬೋರಿಸ್ ಜಾನ್ಸನ್ ವಿರುದ್ದ ಮತ ಚಲಾಯಿಸಿದರು. ಜಾನ್ಸನ್ 59% ಸದಸ್ಯರ ಬೆಂಬಲವನ್ನು ಪಡೆದುಕೊಂಡರು.
2019ರ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ಭರ್ಜರಿ ವಿಜಯ ಗಳಿಸಿದ್ದರು. ಕೋವಿಡ್ 19 ಕಾರಣದಿಂದಾಗಿ ಬ್ರಿಟನ್ ಕಟ್ಟುನಿಟ್ಟಾದ ಲಾಕ್‌ಡೌನ್ ಜಾರಿಯಲ್ಲಿದ್ದಾಗ ಅವರು ಮತ್ತು ಸಿಬ್ಬಂದಿ ತಮ್ಮ ಡೌನಿಂಗ್ ಸ್ಟ್ರೀಟ್ ಕಚೇರಿ ಮತ್ತು ನಿವಾಸದಲ್ಲಿ ಆಲ್ಕೋಹಾಲ್ ಪಾರ್ಟಿಗಳನ್ನು ಆಯೋಜಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ:ಮಂಕಿಪಾಕ್ಸ್ ಸೋಂಕು ಭೀತಿ: ವಿಮಾನ ನಿಲ್ದಾಣಗಳಲ್ಲಿ ಸ್ಕ್ರೀನಿಂಗ್ ನಡೆಸಲು ಸರ್ಕಾರದ ಸೂಚನೆ
ಕನ್ಸರ್ ವೇಟಿವ್ ಪಾರ್ಟಿಯ ಸದಸ್ಯರೇ ಬೋರಿಸ್ ಜಾನ್ಸನ್ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಿದ್ದಾರೆ. ಸದ್ಯ ಜಾನ್ಸನ್ 59% ಮತ ಗೆದ್ದು, ತಮ್ಮ ಪಟ್ಟ ಉಳಿಸಿಕೊಂಡಿದ್ದಾರೆ.