Advertisement
650 ಸದಸ್ಯ ಬಲದ ಬ್ರಿಟಿಷ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ 629 ಸ್ಥಾನಗಳ ಫಲಿತಾಂಶ ಬಹಿರಂಗವಾಗಿದೆ. ಆ ಪ್ರಕಾರ ಕನ್‌ಸರ್ವೇಟಿವ್ ಪಕ್ಷಕ್ಕೆ ಶೇ.42(+5 ಸ್ಥಾನ), ಲೇಬರ್ ಪಾರ್ಟಿಗೆ ಶೇ.40 (+10), ಲಿಬರಲ್ ಡೆಮೊಕ್ರಾಟ್ಸ್‌ಗೆ ಶೇ.7 (-1), ಸ್ಕಾಟಿಷ್ ನ್ಯಾಶನಲಿಸ್ಟ್ ಪಕ್ಷ (ಎಸ್‌ಎನ್‌ಪಿ)ಗೆ ಶೇ.3 (-2), ಯುಕೆ ಇಂಡಿಪೆಂಡೆಂಟ್ ಪಾರ್ಟಿಗೆ ಶೇ.2 (-11) ಮತ್ತು ಗ್ರೀನ್ಸ್ ಪಾರ್ಟಿಗೆ ಶೇ.2 (-2) ಪ್ರಾಪ್ತವಾಗಿವೆ ಎಂದು ಗಾರ್ಡಿಯನ್ ವರದಿ ಮಾಡಿದೆ.
Related Articles
Advertisement
ಗುರುವಾರದ ಮತ ಎಣಿಕೆಯಲ್ಲಿ ಯಾರಿಗೂ ಸ್ಪಷ್ಟ ಬಹುಮತ ದೊರಕಿಲ್ಲ. ಪ್ರಬಲ ಜನಾದೇಶದ ನಿರೀಕ್ಷೆಯಲ್ಲಿದ್ದ ಬ್ರಿಟಿಷ್ ಪ್ರಧಾನಿ ತೆರೇಸಾ ಮೇ ತೀವ್ರ ನಿರಾಶೆಗೆ ಗುರಿಯಾಗಿರುವ ನಡುವೆಯೂ ತಾನು ದೇಶಕ್ಕೆ ಸ್ಥಿರತೆಯನ್ನು ಒದಗಿಸಲು ಶ್ರಮಿಸುವೆ ಎಂದಿದ್ದಾರೆ. ಲೇಬರ್ ಪಕ್ಷದ ಆಕೆಯ ಎದುರಾಳಿ ಜೆರೆಮಿ ಕಾರ್ಬಿನ್ ಅವರು “ತೆರೇಸಾ ಮೇ ತಮ್ಮ ಹುದ್ದೆಯಿಂದ ಕೆಳಗಿಳಿಯಬೇಕು’ ಎಂದು ಆಗ್ರಹಿಸಿದ್ದಾರೆ.
ಬಿಬಿಸಿಯ ಪರಿಷ್ಕೃತ ಅಂದಾಜಿನ ಪ್ರಕಾರ ಮೇ ಅವರ ಕನ್‌ಸರ್ವೇಟಿವ್ ಪಕ್ಷಕ್ಕೆ 650 ಸದಸ್ಯ ಬಲದ ಹೌಸ್ ಆಫ್ ಕಾಮನ್ಸ್‌ನಲ್ಲಿ 318 ಸ್ಥಾನಗಳು ಸಿಗಲಿದೆ. ಎಂದರೆ ಬಹುಮತ ಪ್ರಾಪ್ತಿಗೆ ಎಂಟು ಸ್ಥಾನಗಳ ಕೊರತೆ ಆಗುವುದು. ಎಡಪಂಥೀಯ ವಿರೋಧ ಪಕ್ಷವಾಗಿರುವ ಲೇಬರ್ ಪಾರ್ಟಿಗೆ 267 ಸ್ಥಾನಗಳು ದೊರಕಬಹುದು ಎನ್ನಲಾಗಿದೆ. ಪರಿಣಾಮವಾಗಿ ಬ್ರಿಟನ್ “ತ್ರಿಶಂಕು ಸಂಸತ್’ ಪಡೆಯುವುದು ಬಹುತೇಕ ನಿಶ್ಚಿತವಾದಂತಾಗಿದೆ.
ಸ್ಕೈ ನ್ಯೂಸ್ “ತೆರೇಸಾ ಮೇ ತನ್ನ ಬಹುಮತ ಕಳೆದುಕೊಳ್ಳಲಿದ್ದಾರೆ’ ಎಂದು ಭವಿಷ್ಯ ನುಡಿದಿತ್ತು. ಆಕೆಯ ಪಕ್ಷಕ್ಕೆ 315ರಿಂದ 325ರ ತನಕದ ಸ್ಥಾನಗಳು ಪ್ರಾಪ್ತವಾದೀತು ಎಂದು ಅದು ಹೇಳಿತ್ತು.
ಇದೇ ವೇಳೆ ಸ್ಕಾಟ್ಲಂಡ್‌ನಲ್ಲಿ ಸ್ವಾತಂತ್ರ್ಯ ಪರ ಸ್ಕಾಟಿಶ್ ನ್ಯಾಶನಲಿಸ್ಟ್ ಪಾರ್ಟಿ ಭಾರೀ ಹಿನ್ನಡೆಗೆ ಗುರಿಯಾಗಿದೆ. 2015ರಲ್ಲಿ ಇದು ಸ್ಕಾಟ್ಲಂಡ್‌ನ 59ರಲ್ಲಿ 56 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಅದರ ನಿರ್ವಹಣೆ ಅತ್ಯಂತ ಕಳಪೆಯಾಗಿದೆ. ತನ್ನ ಬಹುತೇಕ ಸ್ಥಾನಗಳನ್ನು ಅದು ಕನ್‌ಸರ್ವೇಟಿವ್, ಲೇಬರ್ ಮತ್ತು ಲಿಬರಲ್ ಡೆಮೊಕ್ರಾಟ್ಸ್‌ಗಳಿಗೆ ಬಿಟ್ಟುಕೊಟ್ಟಿದೆ.