Advertisement

ಅಮೆರಿಕಕ್ಕೆ ಅಸ್ಸಾಂಜ್‌ ಗಡಿಪಾರಿಗೆ ಯು.ಕೆ.ಕೋರ್ಟ್‌ ಅಸ್ತು

10:09 PM Apr 20, 2022 | Team Udayavani |

ಲಂಡನ್‌: ವಿಕಿಲೀಕ್ಸ್‌ ಸಂಸ್ಥಾಪಕ ಜ್ಯೂಲಿಯನ್‌ ಅಸ್ಸಾಂಜ್‌ ಅವರನ್ನು ಅಮೆರಿಕಕ್ಕೆ ಗಡಿಪಾರು ಮಾಡುವ ಬಗ್ಗೆ ಯುನೈಟೆಡ್‌ ಕಿಂಗ್‌ಡಮ್‌ನ ಕೋರ್ಟ್‌ ಬುಧವಾರ ಆದೇಶ ನೀಡಿದೆ.

Advertisement

ಸದ್ಯ ಬ್ರಿಟನ್‌ ಗೃಹ ಸಚಿವೆ ಪ್ರೀತಿ ಪಟೇಲ್‌ ಅವರ ಬಳಿಗೆ ಹಸ್ತಾಂತರಕ್ಕೆ ಸಂಬಂಧಿಸಿದ ಕಡತಗಳು ರವಾನೆಯಾಗಿವೆ. ಅವರು ಸಮ್ಮತಿ ಸೂಚಿಸಿ, ಸಹಿ ಮಾಡಿದ್ದೇ ಆದಲ್ಲಿ ಮುಂದಿನ ಪ್ರಕ್ರಿಯೆಗಳು ಸುಗಮವಾಗಿ ನಡೆಯಲಿವೆ. ಇದರ ಹೊರತಾಗಿಯೂ ಕೋರ್ಟ್‌ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು 14 ದಿನಗಳ ಅವಕಾಶ ಇದೆ.

ಅಮೆರಿಕ ಸರ್ಕಾರ ಅಸ್ಸಾಂಜ್‌ ವಿರುದ್ಧ 18 ಕ್ರಿಮಿನಲ್‌ ಕೇಸುಗಳನ್ನು ದಾಖಲಿಸಿದೆ. ಅವುಗಳು ಅಲ್ಲಿನ ಕೋರ್ಟ್‌ಗಳಲ್ಲಿ ವಿಚಾರಣೆಯಾಗಿ ಶಿಕ್ಷೆ ಪ್ರಕಟಗೊಂಡರೆ, ಅಸ್ಸಾಂಜ್‌ ಅವರಿಗೆ 175 ವರ್ಷಗಳ ಕಾಲ ಕಾರಾಗೃಹವಾಸ ಅನುಭವಿಸಬೇಕಾಗುತ್ತದೆ.

2010ರಲ್ಲಿ ಅಮೆರಿಕದ ವಿರುದ್ಧ ಹಲವು ರೀತಿಯ ಖಡಕ್‌ ಮಾಹಿತಿಗಳನ್ನು ಬಹಿರಂಗಗೊಳಿಸಿ ವಿವಾದಕ್ಕೆ ಕಾರಣರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next