Advertisement

12 ರಿಂದ 15 ವರ್ಷದ ಮಕ್ಕಳಿಗೆ ಫೈಜರ್ ಲಸಿಕೆ ನೀಡಲು ಯುಕೆ ಅನುಮೋದನೆ

07:40 PM Jun 04, 2021 | Team Udayavani |

ಬ್ರಿಟನ್ : ಯುಕೆ ಔಷಧ ನಿಯಂತ್ರಕ ಮಂಡಳಿ, ದೇಶದ 12 ರಿಂದ 15 ವರ್ಷದ ಮಕ್ಕಳಿಗೆ ಆ್ಯಂಟಿ ಕೋವಿಡ್ ಫೈಜರ್ ಲಸಿಕೆಯನ್ನು ನೀಡುವುದಕ್ಕೆ ಇಂದು( ಶುಕ್ರವಾರ, ಜೂನ್ 4) ಅನುಮೋದನೆ ನೀಡಿದೆ.

Advertisement

ಔಷಧ ಮತ್ತು ಆರೋಗ್ಯ ಉತ್ಪನ್ನಗಳ ನಿಯಂತ್ರಣ ಸಂಸ್ಥೆ (ಎಂ ಹೆಚ್‌ ಆರ್‌ ಎ) “ಕ್ಲಿನಿಕಲ್ ಟ್ರಯಲ್ ಡೇಟಾವನ್ನು ಪರಿಶೀಲಿಸಿದ ನಂತರ 12 ರಿಂದ 15 ವರ್ಷದ ಮಕ್ಕಳಿಗೆ ನೀಡಲು” ಅನುಮೋದನೆ ನೀಡಿದೆ ಎಂದು ತಿಳಿಸಿದೆ.

ಲಸಿಕೆಗಳನ್ನು ಹದಿಹರೆಯದವರಿಗೆ ನೀಡಲು ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ (ಇಎಂಎ) ಮತ್ತು ಯುಎಸ್ ಫುಡ್ ಆ್ಯಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್ ಡಿ ಎ) ಈ ಹಿಂದೆ ಮುಂದಾಗಿತ್ತು.

ಇದನ್ನೂ ಓದಿ : ಉಡುಪಿ: 561 ಮಂದಿಗೆ ಸೋಂಕು ದೃಢ; 585 ಮಂದಿ ಗುಣಮುಖ, ಮೂರು ಮಂದಿ ಸಾವು

ಡಿಸೆಂಬರ್ ನಲ್ಲಿ ಲಸಿಕೆ ಅಭಿಯನ ಆರಂಭವಾದಂದಿನಿಂದ ಇಲ್ಲಿಯವರೆಗೆ ಒಟ್ಟು ದೇಶದ 62 ಮಿಲಿಯನ್ ನಾಗರಿಕರಿಗೆ ಆಸ್ಟ್ರಾಜೆನಿಕಾ ಹಾಗೂ ಫೈಜರ್ ಲಸಿಕೆಗಳನ್ನು ನೀಡಿದೆ.

Advertisement

ನಿನ್ನೆ(ಗುರುವಾರ, ಜೂನ್ 3) ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಆಸ್ಟ್ರಾಜೆನೆಕಾ ಲಸಿಕೆಯ ಎರಡನೇ ಡೋಸ್ ನನ್ನು ಪಡೆದಿದ್ದಾರೆ. ಮೊದಲ ಡೋಸ್ ನಲ್ಲಿ ಮಾರ್ಚ್ ನಲ್ಲಿ ತೆಗೆದುಕೊಂಡಿದ್ದರು. ಇನ್ನು, ದೇಶದ ನಾಗರಿಕರಿರೆಲ್ಲರಿಗೂ ಲಸಿಕೆಯನ್ನು ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

ಇನ್ನು, ಜೂನ್ 21 ರಂದು ಕೋವಿಡ್ ನ ನಿರ್ಬಂಧಗಳನ್ನು ತೆಗೆದು ಹಾಕಲು ನಿರ್ಧರಿಸಿದ್ದು, ಕೋವಿಡ್  ಡೆಲ್ಟಾ ರೂಪಾಂತರದೊಂದಿಗೆ ಹೋರಾಡುತ್ತಿದೆ.

ಸಾರ್ವಜನಿಕ ಆರೋಗ್ಯ ಇಂಗ್ಲೆಂಡ್ (ಪಿ ಹೆಚ್ ಇ) ಡೆಲ್ಟಾ ರೂಪಾಂತರ ಪ್ರಬಲ ರೂಪಾಂತರವಾಗಿದೆ ಎಂದು ಹೇಳಿದೆ. ದೇಶದಲ್ಲಿ ಡೆಲ್ಟಾ ರೂಪಾಂತರದ 12,000ಕ್ಕೂ ಹೆಚ್ಚು ಪ್ರಕರಣಗಳಿವೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ಕಳೆದ ಮಾರ್ಚ್‌ ನಲ್ಲಿ ಬ್ರೀಟನ್ ನಲ್ಲಿ ಸೋಂಕು ಕಾಣಿಸಿಕೊಂಡಾಗನಿಂದ 4.5 ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಮತ್ತು 126,000 ಮೃತಪಟ್ಟಿದ್ದಾರೆ.

ಆದಾಗ್ಯೂ, ಕೋವಿಡ್ ಸೋಂಕಿನ ಡೆಲ್ಟಾ ರೂಪಾಂತರವು ದೇಶದಲ್ಲಿ ಏರಿಕೆಯಾಗುತ್ತಿದೆ. ಸಂಭವನೀಯ ಮೂರನೇ ಅಲೆ ಬರುವ ಸಾಧ್ಯತೆ ಇರುವ ಕಾರಣದಿಂದ  ಲಾಕ್ ಡೌನ್  ಸದ್ಯಕ್ಕೆ ತೆರವುಗೊಳಿಸುವುದು ಬೇಡ ಎಂದು ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ ಕಾಕ್ ಹೇಳಿದ್ದಾರೆ.

ಕಳೆದ ತಿಂಗಳು, ಯುಕೆ ಸರ್ಕಾರವು ಡೆಲ್ಟಾ ವೈರಸ್‌ ನ ಭೀತಿಯ ಹೊರತಾಗಿಯೂ ರೆಸ್ಟೋರೆಂಟ್‌ ಗಳು ಮತ್ತು ಚಿತ್ರಮಂದಿರಗಳನ್ನು ಮತ್ತೆ ತೆರೆಯಲು ಅವಕಾಶ ಮಾಡಿಕೊಟ್ಟಿತ್ತು.

ಇದನ್ನೂ ಓದಿ : ರಾಮನಗರ : ಮ್ಯಾನ್‌ಹೋಲ್‌ ದುರಂತದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಘೋಷಿಸಿದ ಡಿಸಿಎಂ

Advertisement

Udayavani is now on Telegram. Click here to join our channel and stay updated with the latest news.

Next