Advertisement
ಇಂಗ್ಲೆಂಡ್: ಇಂಗ್ಲೆಂಡ್‌ನ ವೃದ್ಧಾಶ್ರಮಗಳಲ್ಲಿ ಕೋವಿಡ್ 19 ಸೋಂಕಿಗೆ ತುತ್ತಾಗಿರುವ ಇಲ್ಲವೇ ಸೋಂಕಿನ ಶಂಕೆ ಇರುವ ನೂರಾರು ಮಂದಿ ಅಸುನೀಗಿದ್ದಾರೆ. ಆದರೆ ಇವರ ಸಾವು ಅಧಿಕೃತವಾಗಿ ದಾಖಲಾಗಿಲ್ಲ ಎಂದು ದ ಗಾರ್ಡಿಯನ್ ವರದಿ ಮಾಡಿದೆ.
Related Articles
Advertisement
ಗ್ಲಂಡ್‌ನಲ್ಲಿರುವ ಅರ್ಧಾಂಶಕ್ಕಿಂತಲೂ ಹೆಚ್ಚಿನ ವೃದ್ಧಾಶ್ರಮಗಳಲ್ಲಿ ಕೋವಿಡ್ 19 ಹಾವಳಿಯಿದೆ ಎಂದು ಕೇರ್ ಹೋಮ್ಸ್ ಉದ್ಯಮದ ಮುಖ್ಯಸœರು ಮತ್ತು ಅಲ್ಜೀಮರ್ ಸೊಸೈಟಿ ಹೇಳಿದೆ. ಅಲ್ಜೀಮರ್ ಸೊಸೈಟಿಯಡಿಯಲ್ಲಿರುವ ವೃದ್ಧಾಶ್ರಮಗಳಲ್ಲೇ 4ಲಕ್ಷದಷ್ಟು ವೃದ್ಧರಿದ್ದಾರೆ. ಇಂಗ್ಲಂಡ್‌ನ ಮುಖ್ಯ ವೈದ್ಯಾಧಿಕಾರಿ ಪ್ರೊ|ಕ್ರಿಸ್ ವಿಟ್ಟಿ ವೃದ್ಧಾಶ್ರಮಗಳಲ್ಲಿ ಬರೀ ಶೇ.9 ಕೋವಿಡ್ 19 ವೈರಸ್ ಕೇಸ್‌ಗಳು ವರದಿಯಾಗಿದೆ ಎಂದಿರುವ ವಾಸ್ತವಕ್ಕೆ ಬಹಳ ದೂರವಿರುವ ಅಂಕಿ ಅಂಶ.
ಇಂಗ್ಲಂಡ್‌ನ ಅತಿ ದೊಡ್ಡ ಸಮಾಜ ಸೇವಾ ಸಂಸ್ಥೆಯಾಗಿರುವ ಎಂಎಚ್‌ಎ ಅಡಿಯಲ್ಲಿರುವ ಯೋರ್ಕ್‌ಶಯರ್‌ನ ವೃದ್ಧಾಶ್ರಮದ ಶೇ.70ರಷ್ಟು ವೃದ್ಧರು ಕೋವಿಡ್ 19 ಸೋಂಕಿಗೊಳಗಾಗಿದ್ದಾರೆ. ಇಲ್ಲಿರುವ ಇನ್ನೊಂದು ವೃದ್ಧಾಶ್ರಮದಲ್ಲಿ ಈಗಾಗಲೇ 13 ಮಂದಿ ಕೋವಿಡ್ 19ಗೆ ಬಲಿಯಾಗಿದ್ದಾರೆ. ಲುಟನ್‌ನ ವೃದ್ಧಾಶ್ರಮದಲ್ಲಿ 15 ಮಂದಿ ಸತ್ತಿದ್ದಾರೆ. ಸ್ಕಾಟ್‌ಲ್ಯಾಂಡ್‌ನ ಒಂದು ವೃದ್ಧಾಶ್ರಮ 30 ಮಂದಿ ಅಸುನೀಗಿದ್ದಾರೆ ಎಂದು ಘೋಷಿಸಿದೆ. ಹೀಗೆ ದೇಶಾದ್ಯಾಂತ ವೃದ್ಧಾಶ್ರಮಗಳಲ್ಲಿ ಸಾವಿಗೀಡಾಗಿರುವವರವರದಿಗಳು ಬರುತ್ತಿವೆ. ಕಳೆದ ಆರು ತಿಂಗಳಲ್ಲಿ ವೃದ್ಧಾಶ್ರಮಗಳಲ್ಲಿ ಕೋವಿಡ್ 19ಗೆ ಬಲಿಯಾದವರೆಷ್ಟು ಮಂದಿ ಎಂಬ ಖಚಿತ ಲೆಕ್ಕ ಯಾರ ಬಳಿಯೂ ಇಲ್ಲ. ಏನಿದ್ದರೂ ನೂರಾರು ಸಾವುಗಳು ಸಂಭವಿಸಿವೆ ಎನ್ನುವುದು ನಿಜ. ಸರಕಾರ ಈ ವಿಚಾರವಾಗಿ ದಿವ್ಯ ನಿರ್ಲಕ್ಷ್ಯ ವಹಿಸಿರುವುದು ಈಗ ಸ್ಪಷ್ಟವಾಗುತ್ತಿದೆ ಎನ್ನುತ್ತಿದ್ದಾರೆ ಅಲ್ಲಿನ ನಾಗರಿಕರು. ಮಾನಸಿಕ ಸಮಸ್ಯೆಯವರ ಗೋಳು ಅಪಾರ
ಮಾನಸಿಕ ಸಮಸ್ಯೆಯುಳ್ಳವರ ವೃದ್ಧಾಶ್ರಮಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಿದೆ. ಈ ವೃದ್ಧರನ್ನು ಕ್ವಾರಂಟೈನ್ ಮಾಡುವ ಹಾಗಿಲ್ಲ. ಹೀಗಾಗಿ ಸಮಸ್ಯೆ ಬಿಗಡಾಯಿಸುತ್ತಿದೆ. ಅವರ ಶುಶ್ರೂಷಕರು ಇನ್ನಷ್ಟು ಟೆಸ್ಟಿಂಗ್ ಉಪಕರಣಗಳು ಹಾಗೂ ಇತರ ಸವಲತ್ತುಗಳಿಗಾಗಿ ಒತ್ತಾಯಿಸುತ್ತಿದ್ದಾರೆ. ನೂರಾರು ಮಾನಸಿಕ ರೋಗಿಗಳು ವೃದ್ಧಾಶ್ರಮಗಳಲ್ಲಿ ಅಕ್ಷರಶಃ ಪರಿತ್ಯಕ್ತರಂತೆ ಬದುಕುತ್ತಿದ್ದಾರೆ. ಕೆಲವು ವೃದ್ಧಾಶ್ರಮಗಳ ಪರಿಚಾರಕರು ಸಾಮಾನ್ಯವಾದ ಮಾಸ್ಕ್ ಕೂಡ ಇಲ್ಲದೆ ಮುಖಕ್ಕೆ ಬಟ್ಟೆಯ ಚೀಲಗಳನ್ನು ಕಟ್ಟಿಕೊಂಡು ಆರೈಕೆ ಮಾಡುತ್ತಿದ್ದಾರೆ ಎಂದು ಅಲ್ಜೀಮರ್ ಸೊಸೈಟಿ ಹೇಳಿದೆ.