ಜಗಳೂರು: ಉಜ್ಜಯಿನಿ ಪೀಠಕ್ಕೆ ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರೇ ನಿಜವಾದ ಪೀಠಾಧಿಪತಿಗಳೆಂದು ಮುಸ್ಟೂರು ಓಂಕಾರ ಹುಚ್ಚನಾಗಲಿಂಗ ಮಠದ ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿ ಇಂದಿಲ್ಲಿ ಪ್ರತಿಪಾದಿಸಿದರು. ಪಟ್ಟಣದ ಹೊರಕೆರೆಯ ಈಶ್ವರ ದೇವಸ್ಥಾನದ ಆವರಣದಲ್ಲಿ ಐಕ್ಯತಾ ಜ್ಯೋತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ನಿಯಮಗಳ ಪ್ರಕಾರ ಉಜ್ಜಯಿನಿ ಪೀಠಕ್ಕೆ ಪೀಠಾಧ್ಯಕ್ಷರನ್ನಾಗಿ ಮಾಡಲು ಕೊಟ್ಟೂರಿನ ಕಟ್ಟೆದೈವದ ಒಪ್ಪಿಗೆಯೊಂದಿಗೆ 9 ಪಾದಗಟ್ಟೆಯ ಭಕ್ತರ ಅನುಮೋದನೆಯಂತೆ ಪಂಚ ಪೀಠಗಳ ಒಪ್ಪಿಗೆಯೊಂದಿಗೆ ಅಂದಿನ ಮುಖ್ಯಮಂತ್ರಿಯಾಗಿದ್ದ ಸದಾನಂದ ಗೌಡರ ಸಹಿಯ ಮೇರೆಗೆ ಉಜ್ಜಯಿನಿ ಪೀಠಕ್ಕೆ ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರೇ ಅಧಿಧಿಕೃತ ಪೀಠಾಧ್ಯಕ್ಷರೆಂದು ಘೋಷಿಣೆಯಾಗಿದೆ.
ಇದಕ್ಕೆ ಎಲ್ಲಾ ಭಕ್ತರು ಒಪ್ಪಿಕೊಂಡಿದ್ದಾರೆಂದರು. ಆದರೆ ಕೆಲವು ದಿನಗಳ ಹಿಂದೆ ಕೇದಾರ ಶ್ರೀಗಳ ಉಜ್ಜಯಿನಿ ಪೀಠಕ್ಕೆ ದಕ್ಷಿಣಮೂರ್ತಿಯವರ ಸಂಬಂಧಿಯಾದ ತ್ರಿಲೋಚನರನ್ನು ನೇಮಕ ಮಾಡಿರುವುದನ್ನು ನಾವು ಸೇರಿದಂತೆ ಭಕ್ತಾದಿಗಳು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹಾಲಿ ಪೀಠಾಧ್ಯಕ್ಷರಾದ ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರೇ ಪೀಠದ ಗುರುಗಳಾಗಿದ್ದು, ಬೇರೆ ಗುರುಗಳನ್ನು ಭಕ್ತಾಧಿಗಳು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಉಜ್ಜಯಿನಿ ಪೀಠದ ಪೀಠಾಧ್ಯಕ್ಷರಾಗಿರುವ ಶ್ರೀ ಸಿದ್ದಲಿಂಗ ರಾಜದೇಶಿ ಕೇಂದ್ರ ಶಿವಾಚಾರ್ಯರನ್ನು ಬೆಂಬಲಿಸಿ 75 ಶಾಖಾ ಮಠಗಳ ಮಠಾಧೀಶರು ವಿವಿಧ ಸಮುದಾಯಗಳ ಮುಖಂಡರು ಹಾಗೂ ಸಾವಿರಾರು ಭಕ್ತಾಧಿಗಳು ಐಕ್ಯತಾ ಯಾತ್ರೆಯೊಂದಿಗೆ ಉಜ್ಜಯಿನಿಗೆ ತೆರಳಿ ನಿಮ್ಮ ಜೊತೆಗೆ ನಾವಿದ್ದೇವೆ. ಎಂಬ ಬೆಂಬಲದೊಂದಿಗೆ ನೀವೇ ನಮ್ಮ ಗುರುಗಳು ಎಂದು ಸಾರುವಂತಹ ಸಮಾರಂಭದಲ್ಲಿ ಭಾಗವಹಿಸುತ್ತೇವೆ ಎಂದರು.
ಕಾನಮಡುಗು ದಾಸೋಹ ಮಠದ ಶರಣಾರ್ಯರು, ಕಮ್ಮರಚೋಡು ಸಂಸ್ಥಾನದ ಕಲ್ಯಾಣ ಮಹಾಸ್ವಾಮಿಗಳು, ಜಾನುಕೋಟೆ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಹಿರೇಹಡಗಲಿಯ ಹಾಲವೀರಪ್ಪಜ್ಜ ಶಿವಾಚಾರ್ಯರು, ಅಡವಿಹಳ್ಳಿಯ ಹಾಲಸ್ವಾಮಿ, ಕೂಡ್ಲಿಗಿ ಹಿರೇಮಠದ ಮಲ್ಲಿಕಾರ್ಜುನ ಮಹಾಸ್ವಾಮಿ, ಶಿರಗುಪ್ಪದ ಗುರುಬಸವ ಮಠದ ಬಸವಭೂಷಣ ಮಹಾಸ್ವಾಮಿಗಳು,
ಹೊನ್ನಾಳಿಯ ಹಿರೇಮಠದ ಗಿರಿಸಿದ್ದೇಶ್ವರ ಮಹಾಸ್ವಾಮಿಗಳು, ಯಡಿಯೂರಿನ ಶಿವಾರ್ಚಾರು, ಶ್ರೀನಿವಾಸಪುರದ ಪ್ರಸನ್ನ ಮಲ್ಲಿಕಾರ್ಜುನ ಸ್ವಾಮಿಗಳು, ಹರಗಿನ ಡೋಣಿಯ ಅಭಿನಯವ ಸಿದ್ದಲಿಂಗ ಶಿವಾಚಾರ್ಯರು, ಹೊನ್ನಾಳಿಯ ರಾಮಪುರದ ವಿಶ್ವೇಶ್ವರ ಶಿವಾಚಾರ್ಯರು, ಐಕ್ಯತಾ ಯಾತ್ರೆಯ ಮುಖಂಡ ದೊಣೆಹಳ್ಳಿ ಗುರುಮೂರ್ತಿ, ಪಿಎಂಸಿ ಅಧ್ಯಕ್ಷ ಯು.ಜಿ.ಶಿವಕುಮಾರ್, ಮೊಬೈಲ್ ಮಂಜಣ್ಣ, ಆರಾಧ್ಯ, ಕಾಶಿನಾಥ್, ದಿನೇಶ್, ಜಗದೀಶ್, ವೀರೇಶ್ ಇತರರಿದ್ದರು.