ಉಜ್ಜಯಿನಿ : ಮದುವೆಯಾದ ಕೇವಲ ಹದಿನೈದು ದಿನದಲ್ಲೇ ಪತಿ ಆತ್ಮಹತ್ಯೆಗೆ ಶರಣಾಗಿದ್ದು ಇದರಿಂದ ಪತಿಯನ್ನು ಬಿಟ್ಟಿರದ ಪರಿಸ್ಥಿತಿಯಲ್ಲಿ ಪತ್ನಿಯೂ ಶಾಪಿಂಗ್ ಮಾಲ್ ಒಂದರ ಮೂರನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಇಂದೋರ್ ನಲ್ಲಿ ಶುಕ್ರವಾರ ನಡೆದಿದೆ.
ಪತಿ ಸುಭಮ್ ಖಾಂದೇಲ್ವಾಲ್ ಬುಧವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದು ಈತ ಗುತ್ತಿಗೆದಾರನಾಗಿದ್ದ ಎನ್ನಲಾಗಿದೆ, ಆತ್ಮಹತ್ಯೆ ಮಾಡಿಕೊಂಡ ಸಂದರ್ಭದಲ್ಲಿ ಈತನ ಬಳಿ ಡೆತ್ ನೋಟ್ ಸಿಕ್ಕಿದ್ದು ಇದರಲ್ಲಿ ಉಜ್ಜಯಿನಿ ಮಹಾನಗರ ಪಾಲಿಕೆಯ ಇಬ್ಬರು ಇಂಜಿನಿಯರ್ ಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ತಿಳಿಸಲಾಗಿತ್ತು.
ಇತ್ತ ಪತ್ನಿ ಪತಿಯ ಅಗಲುವಿಕೆಯಿಂದ ಬೇಸತ್ತಿದ್ದ ಸಾನಿಯಾ ಖಾಂದೇಲ್ವಾಲ್ ತನ್ನ ಪತಿಯನ್ನು ಕಳೆದುಕೊಂಡ ನೋವಿನಿಂದ ತಾನು ಆತ್ಮಹತ್ಯೆ ಮಾಡುವ ನಿರ್ಧಾರಕ್ಕೆ ಬಂದಿದ್ದಾಳೆ.
ಇದನ್ನು ಓದಿ : ಗುಣಮುಖರಾದ ಸ್ಟೀವ್ ಸ್ಮಿತ್ ಎರಡನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲು ರೆಡಿ
Related Articles
ಸುಭಮ್ ಖಾಂದೇಲ್ವಾಲ್ ಆತ್ಮಹತ್ಯೆಗೆ ಶರಣಾದ ವಿಷಯ ತಿಳಿಯುತ್ತಿದ್ದಂತೆ ವಧುವಿನ ತಂದೆ ಫರೀದಾಬಾದ್ ನಿಂದ ಇಂದೋರಿಗೆ ಆಗಮಿಸಿದ್ದಾರೆ ಸುಭಮ್ ಖಾಂದೇಲ್ವಾಲ್ ಅಂತ್ಯ ಸಂಸ್ಕಾರದ ಕೆಲಸವನ್ನು ನೆರವೇರಿಸಿ ಇನ್ನೇನು ಮಗಳನ್ನು ಇಂದೋರ್ ನಿಂದ ಫರೀದಾಬಾದ್ ಗೆ ಕರೆದುಕೊಂಡು ಹೋಗಲು ತಯಾರಿ ನಡೆಸಿದ್ದಾರೆ ಅದರಂತೆ ತಂದೆ ಮಗಳು ಇಂದೋರ್ ವಿಮಾನ ನಿಲ್ದಾಣಕ್ಕೆ ಬಂದಿದ್ದು ಈ ಸಂದರ್ಭ ಮಗಳು ಕುಡಿಯಲು ಜ್ಯೂಸ್ ತರುವುದಾಗಿ ತಂದೆಯಲ್ಲಿ ಹೇಳಿ ಮಾಲ್ ಒಂದಕ್ಕೆ ತೆರಳಿದ್ದಾಳೆ, ಈ ವೇಳೆ ಮಗಳು ಜ್ಯೂಸ್ ತರುವ ಬದಲು ಮಾಲ್ ನ ಮೂರನೇ ಮಹಡಿಗೆ ತೆರಳಿ ಅಲ್ಲಿಂದ ಆತ್ಮಹತ್ಯೆ ಮಾಡಿಕೊಳ್ಳಲು ಜಿಗಿದಿದ್ದಾಳೆ, ಪರಿಣಾಮ ಅವಳ ತಲೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿದ್ದು ಕೂಡಲೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾಳೆ.
ಇಂದೋರ್‌ನ ವಿಜಯ್ ನಗರ ಪೊಲೀಸರು ಆಕೆಯಿಂದ ಮಾಹಿತಿಯನ್ನು ಪಡೆದಿದ್ದು ಆಕೆ ತನ್ನ ಪತಿ ಅಂತ್ಯಸಂಸ್ಕಾರ ನಡೆದ ಜಾಗದಲ್ಲೇ ತನ್ನ ಅಂತ್ಯಕ್ರೀಯೆಯನ್ನು ನಡೆಸಬೇಕೆಂದು ತಾನು ಆತ್ಮಹತ್ಯೆಗೆ ಯತ್ನಿಸಿದ್ದು ಎಂದು ಹೇಳಿಕೊಂಡಿದ್ದಾಳೆ.
ಸುಭಮ್ ಖಾಂದೇಲ್ವಾಲ್ ಹಾಗೂ ಸಾನಿಯಾ ಖಾಂದೇಲ್ವಾಲ್ ಇಬ್ಬರೂ ಕಳೆದ ಆಗಸ್ಟ್ 26 ರಂದು ಚಿಂತಾಮನ್ ಗಣೇಶ ಮಂದಿರದಲ್ಲಿ ವಿವಾಹವಾಗಿದ್ದರು. ಸಾನಿಯಾ ಆರ್ಡಿ ಗಾರ್ಡ್ ವೈದ್ಯಕೀಯ ಕಾಲೇಜಿನಲ್ಲಿ ಓದುತ್ತಿದ್ದಾಳೆ ಎನ್ನಲಾಗಿದೆ.
ಇದನ್ನು ಓದಿ : Covid Update :ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 94,372 ಕೋವಿಡ್ ಪ್ರಕರಣಗಳು ಪತ್ತೆ!
ಇದೀಗ ವಿಜಯ ನಗರ ಪೊಲೀಸರು ಸುಭಮ್ ಖಾಂದೇಲ್ವಾಲ್ ಆತ್ಮಹತ್ಯೆಗೆ ಸಂಬಂಧಿಸಿ ಇಬ್ಬರು ಇಂಜಿನಿಯರ್ ಗಳಾದ ನರೇಶ್ ಜೈನ್ ಹಾಗೂ ಸಂಜಯ್ ಖುಜೆನಿ ಎಂಬವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.