ಬೆಳ್ತಂಗಡಿ: ಉಜಿರೆ ಎಸ್.ಡಿ.ಎಂ. ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗ್ಡೆ ಅವರ ಪತ್ನಿ ಸುವರ್ಣಾ ಹೆಗ್ಡೆ (49) ಜು.3 ರಂದು ಹೃದಯಾಘಾತದಿಂದ ಉಜಿರೆ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.
ಮೂಲತಃ ಹೊನ್ನಾವರದವರಾದ ಅವರು ಪ್ರಸ್ತುತ ಉಜಿರೆ ಉಂಡ್ಯಾಪು ನಗರದಲ್ಲಿ ನೆಲೆಸಿದ್ದರು.
ಮಧ್ಯಾಹ್ನ 12.40 ರ ಸುಮಾರಿಗೆ ಸುವರ್ಣಾ ಹೆಗ್ಡೆ ಮನೆಯಲ್ಲಿ ಕುಸಿದು ಬಿದ್ದಿರುವುದನ್ನು ಪುತ್ರ ನೋಡಿ ಬಳಿಕ ಅವರನ್ನು ಉಜಿರೆ ಖಾಸಗಿ ಆಸ್ಪತ್ರೆಗೆ ಸಾಗಿಸಿದರು. ಅದಾಗಲೆ ಅವರು ಹೃದಯಾಘಾತದಿಂದ ಮೃತಪಟ್ಟ ಬಗ್ಗೆ ವೈದ್ಯರು ಖಚಿತ ಪಡಿಸಿದ್ದರು.
ಅವರು ಪತಿ ಎಸ್ ಡಿಎಂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ.ಭಾಸ್ಕರ್ ಹೆಗ್ಡೆ ಸಹಿತ ಓರ್ವ ಪುತ್ರ ಶಶಾಂಕ್ ಹೆಗ್ಡೆ ಹಾಗೂ ತಂದೆ, ತಾಯಿ, ಓರ್ವ ಸಹೋದರ, ಓರ್ವ ಸಹೋದರಿ ಶಿಕ್ಷಕಿ ಕಾಂಚನಾ ಭಟ್ ಅವರನ್ನು ಅಗಲಿದ್ದಾರೆ.
ಅವರ ಅಂತ್ಯ ಸಂಸ್ಕಾರ ಉಜಿರೆಯ ತಮ್ಮ ಸ್ವ ಗೃಹದಲ್ಲಿ ನಡೆಯಲಿದೆ.