Advertisement

ಉಜಿರೆ: ರಾಷ್ಟ್ರೀಯ ಹೆದ್ದಾರಿ ಬದಿ ಬೆಂಕಿ

08:29 PM May 06, 2023 | Team Udayavani |

ಬೆಳ್ತಂಗಡಿ: ಮಂಗಳೂರು ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಉಜಿರೆ ಟಿಬಿ ಕ್ರಾಸ್‌ ಸಮೀಪ ರಸ್ತೆ ಬದಿಯಲ್ಲಿ ಬೆಂಕಿ ಬಿದ್ದ ಪ್ರಕರಣ ಗುರುವಾರ ನಡೆದಿದೆ.

Advertisement

ಬೆಂಕಿಯ ಪರಿಣಾಮ ಸುಮಾರು 50 ಮೀ. ಸ್ಥಳದಲ್ಲಿ ಒಣಹುಲ್ಲು ಸುಟ್ಟಿದ್ದು, ಕೆಲವು ಮರಗಳಿಗೂ ಹಾನಿ ಸಂಭವಿಸಿದೆ. ಮಾನಸಿಕ ಅಸ್ವಸ್ಥನೋರ್ವ ರಸ್ತೆ ಬದಿ ಬೆಂಕಿ ಹಚ್ಚಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳ, ಅರಣ್ಯ ಇಲಾಖೆಯ ಡಿಆರ್‌ಎಫ್‌ ರವೀಂದ್ರ, ರಾಜೇಶ್‌, ಸಿಬಂದಿ ಪ್ರದೀಪ್‌ ಮತ್ತು ಸ್ಥಳೀಯರು ಸೇರಿ ಬೆಂಕಿಯನ್ನು ಹತೋಟಿಗೆ ತಂದರು.

ಬೆಂಕಿ ಹರಡಿದ ಸ್ಥಳದ ಸುತ್ತಮುತ್ತ ಮನೆ, ಅಂಗಡಿಗಳು ಇದ್ದು ಪರಿಸರದಲ್ಲಿ ಭೀತಿಯ ವಾತಾವರಣ ಆವರಿಸಿತ್ತು. ಬೆಂಕಿ ಹರಡಿದ ಸ್ಥಳದಲ್ಲಿ ಸಾಕಷ್ಟು ಪ್ಲಾಸ್ಟಿಕ್‌ ಹಾಗೂ ಇತರ ತ್ಯಾಜ್ಯವಿದ್ದು ಬೆಂಕಿಯನ್ನು ಹತೋಟಿಗೆ ತರಲು ಹರಸಹಾಸ ನಡೆಸಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next