Advertisement
ಕೋ.ರೂ. ವ್ಯವಹಾರದ ಅನುಮಾನ?ಲಭ್ಯ ಮಾಹಿತಿಗಳ ಪ್ರಕಾರ ಅಪಹರಣದ ರೂವಾರಿಗೆ ಬಿಜೋಯ್ 1.30 ಕೋ.ರೂ. ನೀಡಲು ಬಾಕಿ ಇತ್ತೇ? ಎಂಬ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಅಪಹರಣಕಾರ ಹಾಸನ ಜಿಲ್ಲೆಯವನಾಗಿದ್ದು, ಈತನಿಗೆ ಬಾಲಕನ ಮನೆಯವರ ಬಗ್ಗೆ ಸ್ಪಷ್ಟ ಮಾಹಿತಿಗಳಿವೆ ಎಂಬುದು ತನಿಖೆ ವೇಳೆ ತಿಳಿದುಬಂದಿದೆ.
ಆರೋಪಿಗಳು ಬಿಟ್ ಕಾಯಿನ್‌ಗಾಗಿಯೇ ಬೇಡಿಕೆ ಮುಂದಿಟ್ಟಿರುವುದು ಒಟ್ಟು ಪ್ರಕರಣದ ಹಿಂದೆ ಬಿಟ್ ಕಾಯಿನ್ ವ್ಯವಹಾರವೇ ಇದೆ ಎಂಬ ಅನುಮಾನವೂ ಮೂಡುತ್ತಿದೆ. ಬಿಜೋಯ್ ಅವರ ಮೊಬೈಲ್ ವಶಕ್ಕೆ ಪಡೆದಿರುವ ಪೊಲೀಸರು ಅವರ ವ್ಯವಹಾರಗಳ ಮೇಲೆ ನಿಗಾ ಇರಿಸಿದ್ದಾರೆ. ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್ ಡಿ’ಸೋಜಾ, ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ ಪಿ.ಜಿ., ಉಪನಿರೀಕ್ಷಕ ನಂದಕುಮಾರ್ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯುತ್ತಿದೆ. ಒಂದೆರಡು ದಿನಗಳಲ್ಲಿ ಪ್ರಕರಣದ ಚಿತ್ರಣ ಲಭ್ಯವಾಗುವ ಸಾಧ್ಯತೆ ಇದೆ. ಸ್ಥಳ ಮಹಜರಿಗಾಗಿ ಆರೋಪಿಗಳನ್ನು ಮತ್ತೆ ಕೋಲಾರಕ್ಕೆ ಕರೆದೊಯ್ಯಲಿದ್ದಾರೆ. ಮಕ್ಕಳಲ್ಲಿ ಇರಲಿ ಜಾಗೃತಿ
ಮಗನನ್ನು ಕ್ಷೇಮವಾಗಿ ಕರೆತಂದ ಪೊಲೀಸರಿಗೆ, ತನಿಖೆಗೆ ಮಾಹಿತಿಗಳನ್ನು ನೀಡಿದ ಊರವರಿಗೆ ತಾಯಿ ಸರಿತಾ ಕೃತಜ್ಞತೆ ಅರ್ಪಿಸಿದ್ದಾರೆ. ಇದೇ ವೇಳೆ ಅವರು ಮಕ್ಕಳ ಪೋಷಕರಿಗೊಂದು ಸಂದೇಶವನ್ನೂ ನೀಡಿದ್ದಾರೆ. ಇದು ಎಲ್ಲ ಪೋಷಕರೂ ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಬೇಕಾದ ಕ್ಷಣವಾಗಿದೆ. ಮಕ್ಕಳನ್ನು ನಿಗಾದಲ್ಲಿಡುವ ಜತೆಗೆ ಇಂತಹ ಸಂದರ್ಭ ಸ್ವಯಂ ರಕ್ಷಣೆಯ ಪಾಠವನ್ನು ಅಗತ್ಯವಾಗಿ ಕಲಿಸಬೇಕಿದೆ ಎಂದಿದ್ದಾರೆ.
Related Articles
ಅಪಹರಣಕಾರರಿಂದ ಬಿಡುಗಡೆ ಯಾದ ಬಳಿಕ ಅನುಭವ್ ಯಾವುದೇ ಆತಂಕವಿಲ್ಲದೆ ಅಜ್ಜ- ಅಜ್ಜಿಯೊಂದಿಗೆ ಸಮಯ ಕಳೆಯುತ್ತಿದ್ದಾನೆ.ಎಲ್ಲ ರೊಂದಿಗೆ ಸೆಲ್ಫಿ ತೆಗೆಯುತ್ತ, ಆಟ ಪಾಠದ ಜತೆ ಮತ್ತೆ ಶೈಕ್ಷಣಿಕೆ ಚಟುವಟಿಕೆ ಗಳಲ್ಲಿ ತೊಡಗಿದ್ದಾನೆ. ಆದರೆ ತನ್ನನ್ನು ಎಳೆದೊಯ್ದು ಕಾರಿಗೆ ತುರುಕಿದವನಿಗೆ ಮಾತ್ರ ಎರಡು ಹೊಡೆಯಬೇಕು ಎಂದು ಮುಗ್ಧ ಮಾತುಗಳಲ್ಲಿ ಹೇಳುತ್ತಾನೆ. ನಾವು ನಿನ್ನೆ ತಂದೆಯ ಸ್ನೇಹಿತ ರಾಗಿದ್ದು, ಅವರಿಗೆ ಸರ್‌ಪ್ರೈಸ್ ನೀಡಲು ಕರೆದೊಯ್ಯುತ್ತಿದ್ದೇವೆ ಎಂದು ಹೇಳಿದ್ದರಿಂದ ನಾನು ಸುಮ್ಮ ನಿದ್ದೆ. ಆಟವಾಡಲು ಹಲವು ವಸ್ತುಗಳನ್ನು ಕೊಡಿಸಿದ್ದರು. ನನಗೆ ಭಯವಾಗುತ್ತಿತ್ತು. ಅಮ್ಮನನ್ನು ನೋಡ ಬೇಕು ಎಂದು ಕೇಳಿದ್ದೆ. ಕೆಲವು ಬಾರಿ ಅತ್ತೆ. ಅವರು ಬೇರೆ ಯಾವುದೇ ರೀತಿಯಲ್ಲಿ ಏನೂ ಮಾಡಲಿಲ್ಲ. ಆದರೂ ಏನಾದರು ಮಾಡಿಯಾರೇ ಎಂಬ ಸಣ್ಣ ಭಯ ಇದ್ದೇ ಇತ್ತು ಎನ್ನುತ್ತಾನೆ ಪುಟಾಣಿ ಅನುಭವ್.
Advertisement
ನಾನು ನಿವೃತ್ತ ಸೇನಾನಿಯಾಗಿದ್ದು, ನಮ್ಮ ಪೊಲೀಸರ ದಕ್ಷತೆಯ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದ್ದೇನೆ. ಅದರಂತೆ ಅವರು ನನ್ನ ಮೊಮ್ಮಗನನ್ನು ತ್ವರಿತ ಕಾರ್ಯಾ ಚರಣೆಯಲ್ಲಿ ಕ್ಷೇಮವಾಗಿ ಕರೆ ತಂದಿದ್ದಾರೆ. ಅವರಿಗೆ ನಾನು ಕೃತಜ್ಞ.– ಶಿವನ್ ನಾಯರ್, ಬಾಲಕನ ಅಜ್ಜ